Last Updated:
ಭಾರತದ ಮಾಜಿ ಸ್ಟಾರ್ ವಿಕೆಟ್ ಕೀಪರ್ ರಾಬಿನ್ ಉತ್ತಪ್ಪ ಭಾರತದ ಸಾರ್ವಕಾಲಿಕ ಅತ್ಯುತ್ತಮ ಟೆಸ್ಟ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಅವರು ತಂಡಕ್ಕೆ ಸ್ಟಾರ್ ಆಟಗಾರರನ್ನು ಸೇರಿಸಿದರೂ, ಕೆಲವು ದಿಗ್ಗಜ ಪ್ಲೇಯರ್ನನ್ನು ಬಿಟ್ಟುಬಿಟ್ಟಿದ್ದಾರೆ.
ಭಾರತ(India)ದ ಟೆಸ್ಟ್ (Test) ಕ್ರಿಕೆಟ್ (Cricket) ದೀರ್ಘ ಇತಿಹಾಸವನ್ನು ಹೊಂದಿದೆ. ಅದ್ಭುತ ಆಟಗಾರರಿಂದಾಗಿ ಅದರ ಪರಂಪರೆ ಮುಂದುವರೆದಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತಕ್ಕೆ ದಿಗ್ಗಜ ಬ್ಯಾಟರ್ಸ್ (Batters), ಬೌಲರ್ಸ್ ಮತ್ತು ಆಲ್ರೌಂಡರ್ಸ್ (All-Rounders) ಸಿಕ್ಕಿದ್ದಾರೆ. ಭಾರತವನ್ನು ಬಲಿಷ್ಠ ಟೆಸ್ಟ್ ತಂಡವೆಂದು ಹೇಳಲಾಗುತ್ತದೆ. ದಿಗ್ಗಜ ಆಟಗಾರರು ತಮ್ಮ ಆಟದಿಂದ ಜಗತ್ತಿನಾದ್ಯಂತ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ.














