Team India: ಐರ್ಲೆಂಡ್-ಇಂಗ್ಲೆಂಡ್ ಸರಣಿಯಿಂದ ನಿತೀಶ್ ಕುಮಾರ್ ರೆಡ್ಡಿ ಔಟ್! 23 ವರ್ಷದ ಆಲ್‌ರೌಂಡರ್ ಟೀಮ್ ಇಂಡಿಯಾ ಸೇರ್ಪಡೆ | ಕ್ರೀಡಾ ಸುದ್ದಿ | ACTPnews

ನಿತೀಶ್ ಕುಮಾರ್​​ ರೆಡ್ಡಿ ಸ್ಥಾನಕ್ಕೆ ಸೂರ್ಯಾಂಶ್​ ಶೆಡ್ಗೆ ಆಯ್ಕೆ


Last Updated:

ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದಿಂದಾಗಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಂದ ಹೊರಬಿದ್ದಿದ್ದಾರೆ. ಅವರು ಉರಿಯೂತ ಮತ್ತು ಎಡ ತೊಡೆಯಲ್ಲಿ ಸ್ನಾಯು ಸೆಳೆತದ ಬಳಲುತ್ತಿದ್ದಾರೆ. ಅವರು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಕನಿಷ್ಠ ಒಂದು ತಿಂಗಳ ಕಾಲ ಪುನರ್ವಸತಿಗೆ ಒಳಗಾಗಲಿದ್ದಾರೆ.

ನಿತೀಶ್ ಕುಮಾರ್​​ ರೆಡ್ಡಿ ಸ್ಥಾನಕ್ಕೆ ಸೂರ್ಯಾಂಶ್​ ಶೆಡ್ಗೆ ಆಯ್ಕೆ
ನಿತೀಶ್ ಕುಮಾರ್​​ ರೆಡ್ಡಿ ಸ್ಥಾನಕ್ಕೆ ಸೂರ್ಯಾಂಶ್​ ಶೆಡ್ಗೆ ಆಯ್ಕೆ

ಜೂನ್ 26 ರಂದು ಟೀಮ್ ಇಂಡಿಯಾದ ಐರ್ಲೆಂಡ್ ಸರಣಿ (India vs Ireland) ಆರಂಭವಾಗಲಿದ್ದು, ಇದರಲ್ಲಿ ಎರಡು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ಅದರ ನಂತರ, ಜುಲೈ 1 ರಿಂದ ಭಾರತ ಇಂಗ್ಲೆಂಡ್‌ನಲ್ಲಿ (India vs England) ಐದು ಟಿ20 ಪಂದ್ಯಗಳನ್ನು ಆಡಲಿದೆ. ಆದರೆ ಮುಂಬರುವ ಸರಣಿಗೆ ಮುಂಚಿತವಾಗಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nithis Kurmar Reddy) ಗಾಯದಿಂದಾಗಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಂದ ಹೊರಬಿದ್ದಿದ್ದಾರೆ. ಅವರು ಉರಿಯೂತ ಮತ್ತು ಎಡ ತೊಡೆಯಲ್ಲಿ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಅವರು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಕನಿಷ್ಠ ಒಂದು ತಿಂಗಳ ಕಾಲ ಪುನರ್ವಸತಿಗೆ ಒಳಗಾಗಲಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವರ ಬದಲಿ ಆಟಗಾರನನ್ನು ಘೋಷಿಸಿದ್ದು, 23 ವರ್ಷದ ಆಲ್‌ರೌಂಡರ್ ಸೂರ್ಯಾಂಶ್ ಶೆಡ್ಗೆ (Suryansh Shedge) ಅವರನ್ನು ಆಯ್ಕೆ ಮಾಡಿದೆ. ಶೆಡ್ಗೆಗೆ ಇದು ಸೀನಿಯರ್ ತಂಡದಿಂದ ವೈಟ್​ ಬಾಲ್​ ಸರಣಿಗೆ ಮೊದಲ ಕರೆಯಾಗಿದೆ.

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ವೇಳೆ ಗಾಯ

ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ನಿತೀಶ್ ಗಾಯಗೊಂಡರು. ನಂತರ ಲಖನೌದಲ್ಲಿ ನಡೆದ ಎರಡನೇ ಪಂದ್ಯಕ್ಕೆ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಚೆನ್ನೈನಲ್ಲಿ ನಡೆದ ಅಂತಿಮ ಏಕದಿನ ಪಂದ್ಯ ಆಡಲು ಮರಳಿದರು. ಅವರು ಆರು ಓವರ್ ಬೌಲಿಂಗ್ ಮಾಡಿದರೂ, ಅವರು ಅನಾನುಕೂಲವಾಗಿ ಕಾಣುತ್ತಿದ್ದರು. ವೈಧ್ಯಕೀಯ ತಂಡದ ಪರಿಶೀಲನೆ ನಂತರ ಅವರಿಗೆ ಗಾಯವಾಗಿರುವುದು ಖಚಿತವಾಗಿದೆ.

ಸೂರ್ಯಾಂಶ್ ಶೆಡ್ಗೆ ಸೇರ್ಪಡೆ

ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಬಿಸಿಸಿಐ, “ಪುರುಷರ ಆಯ್ಕೆ ಸಮಿತಿಯು ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಮುಂಬರುವ ಟಿ20 ಸರಣಿಗೆ ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಸೂರ್ಯಾಂಶ್ ಶೆಡ್ಗೆ ಅವರನ್ನು ಭಾರತೀಯ ತಂಡದಲ್ಲಿ ಹೆಸರಿಸಿದೆ. ಜೂನ್ 20 ರಂದು ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದ ನಂತರ ನಿತೀಶ್ ಅವರ ಎಡ ತೊಡೆಯ ಸ್ನಾಯುನಲ್ಲಿ ನೋವು ಕಂಡುಬಂದಿದೆ. ಮೌಲ್ಯಮಾಪನದ ನಂತರ, ಬಿಸಿಸಿಐ ವೈದ್ಯಕೀಯ ತಂಡವು ಪುನಶ್ಚೇತನಕ್ಕೆ ಸಲಹೆ ನೀಡಿದೆ.” ಎಂದು ಹೇಳಿಕೆಯಲ್ಲಿ ಬಿಸಿಸಿಐ ತಿಳಿಸಿದೆ.

ತ್ರಿಕೋನ ಸರಣಿಯಲ್ಲಿ ಮಿಂಚಿದ್ದ ಸೂರ್ಯಾಂಶ್

ಶ್ರೀಲಂಕಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ತ್ರಿಕೋನ ಸರಣಿಯಲ್ಲಿ ಭಾರತ ಎ ಪರ ಸೂರ್ಯಾಂಶ್ ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಐದು ಪಂದ್ಯಗಳಲ್ಲಿ 147 ರನ್ ಗಳಿಸಿದ್ದರು ಮತ್ತು 23 ಓವರ್‌ಗಳನ್ನು ಬೌಲಿಂಗ್ ಮಾಡಿದ್ದರು. 2024-25ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದ ಮುಂಬೈ ತಂಡದ ಭಾಗವಾಗಿದ್ದರು. ಕೆಳ-ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಅವರು 251.92 ಸ್ಟ್ರೈಕ್ ರೇಟ್‌ನಲ್ಲಿ 131 ರನ್ ಗಳಿಸಿದ್ದರು.

ಹಾರ್ದಿಕ್ ಪಾಂಡ್ಯ ಕೂಡ ಔಟ್

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ, ಐರ್ಲೆಂಡ್-ಇಂಗ್ಲೆಂಡ್ ಪ್ರವಾಸದಲ್ಲಿ ನಿತೀಶ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿತ್ತು. ಅವರು ODI ತಂಡದಲ್ಲಿದ್ದ ಏಕೈಕ ವೇಗದ ಬೌಲಿಂಗ್ ಆಲ್‌ರೌಂಡರ್ ಮತ್ತು T20 ತಂಡದಲ್ಲಿ ಎರಡನೇ ಆಲ್​ರೌಂಡರ್. ಭಾರತವು ಜುಲೈ 14 ರಿಂದ ಇಂಗ್ಲೆಂಡ್‌ನಲ್ಲಿ ಮೂರು ODI ಪಂದ್ಯಗಳನ್ನು ಆಡಲು ನಿರ್ಧರಿಸಲಾಗಿದೆ. ಹಾರ್ದಿಕ್ ಕೂಡ ಕಳೆದ ವಾರ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದರು. ಕಾಲಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಅವರನ್ನು ಕಳೆದ ವಾರ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದಿಂದ ಹೊರಗಿಡಲಾಗಿತ್ತು.

ಐಪಿಎಲ್ ನಂತರ ಅವರು ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಭೇಟಿ ನೀಡಿದ್ದರು, ಅಲ್ಲಿ ಕಂಡೀಷನಿಂಗ್ ಸೆಷನ್‌ ವೇಳೆ ಅವರಲ್ಲಿ ನೋವಿನಿಂದ ಬಳಲಿದ್ದರು. ಪರಿಣಾಮವಾಗಿ, ಅವರು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಸಹ ತಪ್ಪಿಸಿಕೊಂಡರು. ಹಾಗಾಗಿ ಪಾಂಡ್ಯ ಕನಿಷ್ಠ 6-7 ವಾರಗಳ ಕಾಲ ಕ್ರಿಕೆಟ್​​​ನಿಂದ ದೂರ ಉಳಿಯಲಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports