Team India: ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ಟೀಮ್ ಇಂಡಿಯಾದ ಹೆಡ್​​ಕೋಚ್ ಬದಲಾವಣೆ! ಈ ದಿಗ್ಗಜ ಆಟಗಾರನಿಗೆ ಜವಾಬ್ದಾರಿ? | ಕ್ರೀಡಾ ಸುದ್ದಿ | ACTPnews

ಗೌತಮ್ ಗಂಭೀರ್


Last Updated:

ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧದ ಸರಣಿಯನ್ನು 0-2 ಅಂತರದಿಂದ ಸೋತಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ತಂಡದ ಪ್ರದರ್ಶನ ಕಳಪೆಯಾಗಿದೆ. ಹೀಗಾಗಿ ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಹೆಡ್ ಕೋಚ್ ಬದಲಾವಣೆ ಆಗಲಿದೆ.

ಗೌತಮ್ ಗಂಭೀರ್
ಗೌತಮ್ ಗಂಭೀರ್

ಐಸಿಸಿ (ICC) 2026ರ ಟಿ20 ವಿಶ್ವಕಪ್ (World Cup) ಗೆದ್ದ ನಂತರ ಟೀಮ್ ಇಂಡಿಯಾ(Team India)ದ ಪ್ರದರ್ಶನ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ. ಐರ್ಲೆಂಡ್ (Ireland) ವಿರುದ್ಧ ಸೋತ ನಂತರ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಈಗಾಗಲೇ 0-1 ಹಿನ್ನಡೆಯಲ್ಲಿದೆ. ಹೆಡ್ ಕೋಚ್ (Head coach) ಗೌತಮ್ ಗಂಭೀರ್ (Gautam Gambhir) ಅವರು ತೀವ್ರ ಒತ್ತಡದಲ್ಲಿದ್ದಾರೆ. ಇದರ ನಡುವೆ, ಜಿಂಬಾಬ್ವೆ ಸರಣಿಯ ವೇಳೆ ಟೀಮ್ ಇಂಡಿಯಾದ ಹೆಡ್ ಕೋಚ್ ಬದಲಾಗುವ ಸಾಧ್ಯತೆ ಇದೆ. ಹೊಸ ಕೋಚ್ ಆಗಿ ದಿಗ್ಗಜ ಆಟಗಾರನನ್ನು ನೇಮಿಸುವ ಸಾಧ್ಯತೆಯೂ ಇದೆ.

ಸ್ಪೋರ್ಟ್‌ಸ್ಟಾರ್ ವರದಿಯ ಪ್ರಕಾರ, ಜಿಂಬಾಬ್ವೆ ಪ್ರವಾಸಕ್ಕೆ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಇರುವುದಿಲ್ಲ. ಬದಲಿಗೆ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್ ಆಗಿ ನೇಮಕವಾಗುವ ಸಾಧ್ಯತೆ ಹೆಚ್ಚಿದೆ. ಸುನಿಲ್ ಜೋಶಿ ಬೌಲಿಂಗ್ ಕೋಚ್ ಮತ್ತು ರಿಷಿಕೇಶ್ ಕಾನಿಟ್ಕರ್ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಈ ಹೊಸ ಕೋಚಿಂಗ್ ಸಿಬ್ಬಂದಿ ಜಿಂಬಾಬ್ವೆ ಪ್ರವಾಸದ ಜೊತೆಗೆ 2026ರ ಏಷ್ಯನ್ ಗೇಮ್ಸ್‌ನಲ್ಲೂ ಟೀಮ್ ಇಂಡಿಯಾದೊಂದಿಗೆ ಕೆಲಸ ಮಾಡಬಹುದು. ವಿವಿಎಸ್ ಲಕ್ಷ್ಮಣ್ ಹಿಂದೆಯೂ ಹಲವು ಬಾರಿ ಟೀಮ್ ಇಂಡಿಯಾದ ಹಂಗಾಮಿ ಹೆಡ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.

ಗೌತಮ್ ಗಂಭೀರ್ ಕೋಚಿಂಗ್ ವೃತ್ತಿ ಅಂತ್ಯ?

ಈ ವರದಿಗಳ ಬಳಿಕ ಗೌತಮ್ ಗಂಭೀರ್ ಅವರ ಕೋಚಿಂಗ್ ವೃತ್ತಿ ಮುಗಿಯಿತೇ? ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿ ಇಲ್ಲ. ಟೀಮ್ ಇಂಡಿಯಾ ಪ್ರಸ್ತುತ ಸತತ ಸರಣಿಗಳನ್ನು ಆಡುತ್ತಿದೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಗಿದ ನಂತರ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ತಯಾರಿ ಆರಂಭವಾಗುತ್ತದೆ. ಅಂತಹ ಸಮಯದಲ್ಲಿ ಗಂಭೀರ್ ಅವರು ಈ ಮುಖ್ಯ ಸರಣಿಗಳ ಮೇಲೆ ಗಮನ ಹರಿಸುವ ಸಾಧ್ಯತೆ ಹೆಚ್ಚಿದೆ. ಗೌತಮ್ ಗಂಭೀರ್ 2027ರ ಏಕದಿನ ವಿಶ್ವಕಪ್ ವರೆಗೆ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಮುಂದುವರಿಯುವ ಸಾಧ್ಯತೆ ಇದೆ.

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಮಯಾಂಕ್ ಯಾದವ್, ಅಶೋಕ್ ಶರ್ಮಾ, ಪ್ರಭ್​ಸಿಮ್ರನ್ ಸಿಂಗ್ (ವಿಕೆಟ್ ಕೀಪರ್).



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed