T20I Speed Records: ಅಖ್ತರ್, ಆರ್ಚರ್ ಅಲ್ಲ! ಟಿ20 ಕ್ರಿಕೆಟ್​​​ನಲ್ಲಿ ಅತಿ ವೇಗದ ಎಸೆತ ಎಸೆದಿರುವ ಟಾಪ್ 5 ಬೌಲರ್ಸ್ ಇವರು! ಲಿಸ್ಟ್​​​ನಲ್ಲಿದ್ದಾರೆ ಇಬ್ಬರು ಭಾರತೀಯರು | ಕ್ರೀಡಾ ಸುದ್ದಿ | ACTPnews

ಟಿ20 ಕ್ರಿಕೆಟ್​​ನ ವೇಗದ ಬೌಲರ್ಸ್​


Last Updated:

ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದಾಗ, ಬ್ಯಾಟ್ಸ್‌ಮನ್‌ಗೆ ಅನುಕೂಲಕರವಾದ ಈ ಸ್ವರೂಪವು ವೇಗದ ಬೌಲರ್‌ಗಳ ಪ್ರಾಬಲ್ಯವನ್ನು ಕೊನೆಗೊಳಿಸುತ್ತದೆ ಎಂದು ತೋರುತ್ತಿತ್ತು, ಆದರೆ ಅದು ಇಲ್ಲಿಯವರೆಗೂ ಸಂಭವಿಸಿಲ್ಲ. ಕೆಲವು ವೇಗಿಗಳು ಈಗಲೂ ಟಿ20ಯಲ್ಲಿ ಮ್ಯಾಚ್ ವಿನ್ನರ್​ಗಳಾಗಿ ಗುರುತಿಸಿಕೊಂಡಿದ್ದಾರೆ..

ಟಿ20 ಕ್ರಿಕೆಟ್​​ನ ವೇಗದ ಬೌಲರ್ಸ್​
ಟಿ20 ಕ್ರಿಕೆಟ್​​ನ ವೇಗದ ಬೌಲರ್ಸ್​

ಯಾವುದೇ ಸ್ವರೂಪದ ಕ್ರಿಕೆಟ್ ಆದರೂ ವೇಗದ ಬೌಲರ್‌ಗಳ (Fast Bowler) ಬೌಲಿಂಗ್ ನೋಡುವುದು ಅತ್ಯಂತ ರೋಮಾಂಚಕಾರಿ ಕ್ಷಣವಾಗಿರುತ್ತದೆ. ಟೆಸ್ಟ್ ಕ್ರಿಕೆಟ್ (Test Cricket) ಆರಂಭದಿಂದಲೂ, ಅಭಿಮಾನಿಗಳು ವೇಗದ ಬೌಲರ್‌ಗಳನ್ನು ನೋಡಲು ಸಾವಿರಗಟ್ಟಲೇ ಸೇರುತ್ತಿದ್ದರು. ವೇಗಿಗಳು ತಮ್ಮ ವೇಗದಿಂದ ಬ್ಯಾಟ್ಸ್‌ಮನ್‌ಗಳನ್ನು ಅಚ್ಚರಿಗೊಳಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಕೆಲವು ಘಾತಕ ವೇಗಿಗಳು ಬ್ಯಾಟ್ಸ್​ಮನ್ಗಳನ್ನೇ ನಡುಗಿಸುವ ಸಾಮರ್ಥ್ಯವನ್ನ ಹೊಂದಿದ್ದರು.

ಆದರೆ ಬದಲಾದ ಕಾಲಕ್ಕೆ ತಕ್ಕಂತೆ ಕ್ರಿಕೆಟ್ ಕೂಡ ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ಬಿಳಿ ಜೆರ್ಸಿಯಿಂದ ಕಲರ್ ಜರ್ಸಿಗೆ, ಐದು ದಿನಗಳ ಕ್ರಿಕೆಟ್‌ನಿಂದ 50, 20 ಓವರ್ ಕ್ರಿಕೆಟ್​​​ಗೆ ಆಟ ವಿಕಸನಗೊಂಡಿದೆ, ಆದರೆ ವೇಗದ ಬೌಲರ್​​ಗಳ ಭಯ ಇನ್ನೂ ಬದಲಾಗಿಲ್ಲ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದಾಗ, ಬ್ಯಾಟ್ಸ್‌ಮನ್‌ಗೆ ಅನುಕೂಲಕರವಾದ ಈ ಸ್ವರೂಪವು ವೇಗದ ಬೌಲರ್‌ಗಳ ಪ್ರಾಬಲ್ಯವನ್ನು ಕೊನೆಗೊಳಿಸುತ್ತದೆ ಎಂದು ತೋರುತ್ತಿತ್ತು, ಆದರೆ ಅದು ಆಗಲಿಲ್ಲ.  ಇಂದಿಗೂ ಕೆಲವು ವೇಗದ ಬೌಲರ್ಸ್ ಮ್ಯಾಚ್ ವಿನ್ನರ್​​ಗಳಾಗಿ ತಮ್ಮನ್ನ ತಾವೂ ಸಾಬೀತುಪಡಿಸಿಕೊಂಡಿದ್ದಾರೆ.  ತಮ್ಮ ವೇಗದಿಂದಲೇ ಎಲ್ಲರನ್ನೂ ಬೆರಗುಗೊಳಿಸಿದ ಐದು ಟಿ20 ವೇಗದ ಬೌಲರ್‌ಗಳ ಬಗ್ಗೆ ಈ ಸುದ್ದಿಯಲ್ಲಿ ತಿಳಿಯೋಣ.

5. ಜಸ್ಪ್ರೀತ್ ಬುಮ್ರಾ (ಭಾರತ)

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅಂತಾರಾಷ್ಟ್ರೀಯ ಟಿ20ಐ ಪಂದ್ಯದಲ್ಲಿ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬುಮ್ರಾ ಗಂಟೆಗೆ 153.6 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿರುವ ದಾಖಲೆಯನ್ನು ಹೊಂದಿದ್ದಾರೆ. ಅವರು 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ವೇಗದ ಎಸೆತವನ್ನ ಮಾಡಿದ್ದರು.

4. ಆನ್ರಿಕ್ ನೋಕಿಯಾ (ದಕ್ಷಿಣ ಆಫ್ರಿಕಾ)

ನಾಲ್ಕನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಇದ್ದಾರೆ. ತಮ್ಮ ವೇಗದಿಂದ ವಿನಾಶವನ್ನುಂಟು ಮಾಡಬಲ್ಲ ಆನ್ರಿಕ್, 2022 ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗಂಟೆಗೆ 154.31 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದರು.

3. ಲಾಕಿ ಫರ್ಗುಸನ್ (ನ್ಯೂಜಿಲೆಂಡ್)

ನ್ಯೂಜಿಲೆಂಡ್‌ನ ವೇಗದ ಬೌಲರ್ ಲಾಕಿ ಫರ್ಗುಸನ್ 2022 ರ ಟಿ20 ವಿಶ್ವಕಪ್‌ನಲ್ಲಿ ಗಂಟೆಗೆ 154.55 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಇದು ಫರ್ಗುಸನ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಸಿದೆ.

2- ಉಮ್ರಾನ್ ಮಲಿಕ್ (ಭಾರತ)

ಪಟ್ಟಿಯಲ್ಲಿರುವ ಎರಡನೇ ಹೆಸರು ಭಾರತೀಯ ವೇಗಿ ಉಮ್ರಾನ್ ಮಲಿಕ್. 2023 ರಲ್ಲಿ, ಶ್ರೀಲಂಕಾ ವಿರುದ್ಧದ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಉಮ್ರಾನ್ ಗಂಟೆಗೆ 155 ಕಿಲೋಮೀಟರ್ ವೇಗದಲ್ಲಿ ಎಸೆತವನ್ನು ಎಸೆದರು. ಉಮ್ರಾನ್ ತಮ್ಮ ಮಾರಕ ವೇಗದಿಂದ ಅಭಿಮಾನಿಗಳನ್ನು ಆಕರ್ಷಿಸಿದ್ದರು. ಅವರು ಅಖ್ತರ್ ಅವರ ವೇಗದ ಎಸೆತದ ದಾಖಲೆಯನ್ನು ಮುರಿಯುತ್ತಾರೆ ಎಂದೇ ನಂಬಲಾಗಿತ್ತು. ಆದರೆ ಅದು ಇನ್ನೂ ಸಂಭವಿಸಿಲ್ಲ. ಅವರು ಪ್ರಸ್ತುತ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

1. ಮಾರ್ಕ್ ವುಡ್ (ಇಂಗ್ಲೆಂಡ್)

ಈ ಇಂಗ್ಲಿಷ್ ಬೌಲರ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 156.3 ಕಿಮೀ/ಗಂ ವೇಗದಲ್ಲಿ ಬೌಲಿಂಗ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಮಾರ್ಕ್ ವುಡ್ ಟೆಸ್ಟ್ ಸ್ವರೂಪದಲ್ಲಿ 154.74 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಚೆಂಡಿನ ಬೌನ್ಸ್ ಮತ್ತು ವೇಗವನ್ನು ಇಚ್ಛೆಯಂತೆ ಹೊಂದಿಸಬಲ್ಲ ಬೌಲರ್‌ಗಳಲ್ಲಿ ವುಡ್ ಕೂಡ ಒಬ್ಬರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

T20I Speed Records: ಅಖ್ತರ್, ಆರ್ಚರ್ ಅಲ್ಲ! ಟಿ20 ಕ್ರಿಕೆಟ್​​​ನಲ್ಲಿ ಅತಿ ವೇಗದ ಎಸೆತ ಎಸೆದಿರುವ ಟಾಪ್ 5 ಬೌಲರ್ಸ್ ಇವರು! ಲಿಸ್ಟ್​​​ನಲ್ಲಿದ್ದಾರೆ ಇಬ್ಬರು ಭಾರತೀಯರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed