Swiggy Instamart CEO: ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನೂತನ ಸಿಇಒ ಆಗಿ ನಂದಿತಾ ಸಿನ್ಹಾ ನೇಮಕ, ಮಿಂತ್ರಾ ಮಾಜಿ ಸಿಇಒಗೆ ಹೊಸ ಜವಾಬ್ದಾರಿ | ವ್ಯಾಪಾರ ಸುದ್ದಿ | ACTPnews

News18


Last Updated:

ಫ್ಲಿಪ್‌ಕಾರ್ಟ್, ಬ್ರಿಟಾನಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್‌ನಂತಹ ದೈತ್ಯ ಕಂಪನಿಗಳಲ್ಲಿ ನಾಯಕತ್ವದ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಇವರು, ಕನ್ಸೂಮರ್‌ ಇಂಟರ್ನೆಟ್, ಫ್ಯಾಷನ್ ಮತ್ತು ಎಫ್‌ಎಂಸಿಜಿ ವಲಯದಲ್ಲಿ ಬರೋಬ್ಬರಿ 20 ವರ್ಷಗಳ ಅಪಾರ ಅನುಭವ ಹೊಂದಿದ್ದಾರೆ.

News18
News18

Swiggy Instamart CEO: ದಿನಸಿ ಹಾಗೂ ದಿನಬಳಕೆಯ ವಸ್ತುಗಳನ್ನು ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಮಾರ್ಟ್ ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ನಂದಿತಾ ಸಿನ್ಹಾ (Nandita Sinha) ಅವರನ್ನು ನೇಮಕ ಮಾಡಿದೆ.

ಹೌದು.. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಆಡಳಿತದಲ್ಲಿ ಪ್ರಮುಖ ಬದಲಾವಣೆಗೆ ಕಂಡುಬಂದಿದೆ. ಕಂಪನಿಯ ಸಿಇಒ ಅಮಿತೇಶ್ ಕುಮಾರ್ ಝಾ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯ ನಂತರ, ಕಂಪನಿಯು ನಂದಿತಾ ಸಿನ್ಹಾ ಅವರನ್ನು ಹೊಸ ಸಿಇಒ ಆಗಿ ನೇಮಿಸಿದೆ. ಆಗಸ್ಟ್ 3, 2026 ರಿಂದ ಜಾರಿಗೆ ಬರುವಂತೆ ನಂದಿತಾ ಸಿನ್ಹಾ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಭಾರತದ ತ್ವರಿತ ವಾಣಿಜ್ಯ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿರುವ ಮತ್ತು ಕಂಪನಿಗಳ ನಡುವಿನ ತೀವ್ರ ಸ್ಪರ್ಧೆಗಳು ಹೆಚ್ಚುತ್ತಿರುವ ಸಮಯದಲ್ಲಿ ಇಂತಹ ಪ್ರಮುಖ ಬದಲಾವಣೆ ನಡೆದಿದೆ.

ನಂದಿತಾ ಸಿನ್ಹಾ ಯಾರು?

ನಂದಿತಾ ಸಿನ್ಹಾ ಅವರು ಇದಕ್ಕೂ ಮುನ್ನ ಪ್ರಸಿದ್ಧ ಫ್ಯಾಷನ್ ಇ-ಕಾಮರ್ಸ್ ತಾಣ ಮಿಂತ್ರಾದ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ತೀವ್ರ ಪೈಪೋಟಿಯ ಮಾರುಕಟ್ಟೆಯಲ್ಲೂ ಮಿಂತ್ರಾವನ್ನು  2024ರಲ್ಲಿ ಲಾಭದ ಹಾದಿಗೆ ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಫ್ಲಿಪ್‌ಕಾರ್ಟ್, ಬ್ರಿಟಾನಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್‌ನಂತಹ ದೈತ್ಯ ಕಂಪನಿಗಳಲ್ಲಿ ನಾಯಕತ್ವದ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಇವರು, ಕನ್ಸೂಮರ್‌ ಇಂಟರ್ನೆಟ್, ಫ್ಯಾಷನ್ ಮತ್ತು ಎಫ್‌ಎಂಸಿಜಿ ವಲಯದಲ್ಲಿ ಬರೋಬ್ಬರಿ 20 ವರ್ಷಗಳ ಅಪಾರ ಅನುಭವ ಹೊಂದಿದ್ದಾರೆ.

ಈ ಮಹತ್ವದ ಬದಲಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವಿಗ್ಗಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಗ್ರೂಪ್ ಸಿಇಒ ಶ್ರೀಹರ್ಷ ಮಜೇಟಿ, “’ಭಾರತದ ಅತ್ಯಂತ ಯಶಸ್ವಿ ಕನ್ಸೂಮರ್ ಇಂಟರ್ನೆಟ್ ನಾಯಕಿಯರಲ್ಲಿ ಒಬ್ಬರಾಗಿರುವ ನಂದಿತಾ ಅವರನ್ನು ಇನ್‌ಸ್ಟಾಮಾರ್ಟ್ ಸಿಇಒ ಆಗಿ ಸ್ವಾಗತಿಸಲು ನನಗೆ ಅತೀವ ಸಂತೋಷವಾಗುತ್ತಿದೆ. ಅವರ ದೂರದೃಷ್ಟಿ ಮತ್ತು ಗ್ರಾಹಕಸ್ನೇಹಿ ಕಾರ್ಯವೈಖರಿಯಿಂದ ಇನ್‌ಸ್ಟಾಮಾರ್ಟ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ನಿರ್ಗಮಿತ ಸಿಇಒಗೆ ಶುಭ ಹಾರೈಸಿದ ಅವರು, ‘ಇನ್‌ಸ್ಟಾಮಾರ್ಟ್‌ನ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ಅಮಿತೇಶ್ ಝಾ ಅವರು ಅತ್ಯುತ್ತಮ ನಾಯಕತ್ವ ಒದಗಿಸಿದ್ದಾರೆ. ಸಂಸ್ಥೆಯನ್ನು ಬಲವಾದ ಸ್ಥಿತಿಗೆ ತಂದಿರುವ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ’ ಎಂದರು.

ನೂತನ ಸಿಇಒ ನಂದಿತಾ ಸಿನ್ಹಾ ಹರ್ಷ

ತಮ್ಮ ಹೊಸ ಜವಾಬ್ದಾರಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ ನಂದಿತಾ ಸಿನ್ಹಾ, ‘ಇನ್‌ಸ್ಟಾಮಾರ್ಟ್ ತಂಡ ಕಟ್ಟಿರುವ ಈ ವ್ಯವಹಾರವನ್ನು ನಾನು ಮೊದಲಿನಿಂದಲೂ ಮೆಚ್ಚಿದ್ದೇನೆ. ಇದೊಂದು ಗ್ರಾಹಕರಿಗೆ ಮೊದಲ ಆದ್ಯತೆ ನೀಡುವ ಅತ್ಯುತ್ತಮ ಸಂಸ್ಥೆ. ಭಾರತೀಯರು ತಮ್ಮ ದೈನಂದಿನ ಅಗತ್ಯಗಳಿಗೆ ನಡೆಸುವ ಶಾಪಿಂಗ್ ಕೇಂದ್ರಿತವಾಗಿ ಇನ್‌ಸ್ಟಾಮಾರ್ಟ್ ಬೆಳೆದಿದೆ. ಸಂಸ್ಥೆಯ ಮುಂದಿನ ಬೆಳವಣಿಗೆ ದೃಷ್ಟಿಯಿಂದ ನಮ್ಮ ತಂಡ ಮತ್ತು ಪಾಲುದಾರರೊಂದಿಗೆ ಕೆಲಸ ಮಾಡಲು ನಾನು ಉತ್ಸುಕಳಾಗಿದ್ದೇನೆ’ ಎಂದು ಹೇಳಿದರು.

ಆಗಸ್ಟ್ 2020ರಲ್ಲಿ ಆರಂಭವಾದ ಇನ್‌ಸ್ಟಾಮಾರ್ಟ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬೃಹತ್ ಡೆಲಿವರಿ ಪಡೆಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ದೇಶದ 131ಕ್ಕೂ ಹೆಚ್ಚು ನಗರಗಳಲ್ಲಿ ದಿನಸಿ ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳನ್ನು ಕ್ಷಿಪ್ರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed