Suryakumar Yadav: ಭಾರತ ತಂಡದಿಂದ ಹೊರಬಿದ್ದ ಬಳಿಕ ಸೂರ್ಯಕುಮಾರ್ ಮೊದಲ ರಿಯಾಕ್ಷನ್​ ಇಲ್ಲಿದೆ! | ಕ್ರೀಡಾ ಸುದ್ದಿ | ACTPnews

ಸೂರ್ಯಕುಮಾರ್ ಯಾದವ್


Last Updated:

2026ರ ಟಿ20 ವಿಶ್ವಕಪ್​ ಮುಗಿಯುವವರೆಗೂ ಭಾರತದ ಟಿ20 ತಂಡದ ನಾಯಕರಾಗಿದ್ದ ಸೂರ್ಯಕುಮಾರ್ ಯಾದವ್ ಈಗ ತಂಡದ ಭಾಗವಾಗಿಲ್ಲ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗಾಗಿ ಅವರನ್ನು ಟಿ20 ತಂಡದಿಂದ ಕೈಬಿಡಲಾಗಿದೆ.

ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ಕಳೆದ ಒಂದು ತಿಂಗಳಿನಿಂದ ಸೂರ್ಯಕುಮಾರ್ ಯಾದವ್ (Suryakumar Yadav) ಬಗ್ಗೆ ಹರಡುತ್ತಿದ್ದ ವದಂತಿಗಳೆಲ್ಲಾ ಇಂದು ನಿಜವೆಂದು ಸಾಬೀತಾಗಿದೆ. ಬಿಸಿಸಿಐ (BCCI) ಆಯ್ಕೆಸಮಿತಿ ಸೂರ್ಯಕುಮಾರ್​​ ಯಾದವ್ ಅವರನ್ನು ಭಾರತ ತಂಡದ ಟಿ20 (India T20 Team) ನಾಯಕನ ಜವಾಬ್ದಾರಿಯಿಂದ ತೆಗೆದುಹಾಕಿದೆ. ಐರ್ಲೆಂಡ್, ಇಂಗ್ಲೆಂಡ್ ಮತ್ತು ಏಷ್ಯನ್ ಗೇಮ್ಸ್ ಪಂದ್ಯಗಳಿಗೆ ತಂಡವನ್ನು ಜೂನ್ 6ರ ಶನಿವಾರ ಆಯ್ಕೆ ಮಾಡಲಾಯಿತು. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಂಡವನ್ನು ಘೋಷಿಸಿದರು. ಇದೇ ಸಂದರ್ಭದಲ್ಲಿ ಶ್ರೇಯಸ್ ಅಯ್ಯರ್ ಟಿ20 ತಂಡಕ್ಕೆ ಹೊಸ ನಾಯಕರಾಗಿ ಆಯ್ಕೆಯಾಗಿದ್ದಾರೆ, ತಿಲಕ್ ವರ್ಮಾ ಉಪನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ಇನ್ನು ಸೂರ್ಯಕುಮಾರ್ ಯಾದವ್ ನಾಯಕತ್ವದಿಂದ ಮಾತ್ರವಲ್ಲ, ​ಟಿ20 ತಂಡದಿಂದಲೂ ಹೊರಬಿದ್ದಿದ್ದಾರೆ. ತಂಡದಿಂದ ಹೊರಬಿದ್ದ ಬೆನ್ನಲ್ಲೇ ಸೂರ್ಯ ಸಾಮಾಜಿಕ ಜಾಲತಾಣದ ಮೂಲಕ ರಿಯಾಕ್ಷನ್​ ನೀಡಿದ್ದಾರೆ.

ಕಳಪೆ ಫಾರ್ಮ್​ ತಂಡದಿಂದ ಹೊರಬೀಳಲು ಕಾರಣ

2026ರ ಟಿ20 ವಿಶ್ವಕಪ್​ ಮುಗಿಯುವವರೆಗೂ ಭಾರತದ ಟಿ20 ತಂಡದ ನಾಯಕರಾಗಿದ್ದ ಸೂರ್ಯಕುಮಾರ್ ಯಾದವ್ ಈಗ ತಂಡದ ಭಾಗವಾಗಿಲ್ಲ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗಾಗಿ ಅವರನ್ನು ಟಿ20 ತಂಡದಿಂದ ಕೈಬಿಡಲಾಗಿದೆ. ಸೂರ್ಯಕುಮಾರ್ ಕಳೆದ ಒಂದೂವರೆ ವರ್ಷದಿಂದಲೂ ಕಳಪೆ ಫಾರ್ಮ್‌ನಲ್ಲಿದ್ದರು. ಬಹಳ ಹಿಂದೆಯೇ ಅವರನ್ನ ಹೊರಗಿಡಬೇಕೆಂಬ ಮಾತುಗಳು ಕೇಳಿಬಂದಿದ್ದವು. ಆದರೆ ವಿಶ್ವಕಪ್​​ ಸನಿಹದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಆಯ್ಕೆ ಸಮಿತಿ ಹಿಂಜರಿದಿತ್ತು. ಇದೀಗ ಭವಿಷ್ಯದ ದೃಷ್ಟಿಯಿಂದ ತಂಡದಿಂದ ತೆಗೆದುಹಾಕುವುದು ಅನಿವಾರ್ಯವೆಂದು ಪರಿಗಣಿಸಲಾಗಿದೆ. ಬಿಸಿಸಿಐ ಏಕಕಾಲದಲ್ಲಿ ಮೂರು ಸರಣಿಗಳಿಗೆ ತಂಡಗಳನ್ನು ಘೋಷಿಸಿದ್ದು, ಸೂರ್ಯ ಅವರ ಹೆಸರನ್ನು ಒಂದೂ ತಂಡದಲ್ಲೂ ಸೇರಿಸಲಾಗಿಲ್ಲ. ಎಲ್ಲಾ ತಂಡಗಳಿಗೂ ಶ್ರೇಯಸ್​ ಅಯ್ಯರ್ ನಾಯಕರಾಗಲಿದ್ದಾರೆ.

ಭಾರತ ತಂಡ-ಸೂರ್ಯವಂಶಿಗೆ ಶುಭ ಕೋರಿದ ಸೂರ್ಯ

ಈ ಹಿನ್ನಡೆಯ ಹೊರತಾಗಿಯೂ, ಸೂರ್ಯಕುಮಾರ್ ಯಾದವ್ ವಿಶಾಲ ಹೃದಯದಿಂದ ಭಾರತದ ಮುಂಬರುವ ಪ್ರವಾಸಗಳಿಗೆ ಶುಭ ಹಾರೈಸಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಯ್ಕೆಯಾದ ತಂಡದ ಫೋಟೋವನ್ನು ಸಂದೇಶದೊಂದಿಗೆ ಹಂಚಿಕೊಂಡಿದ್ದಾರೆ. ವೈಭವ್ ಸೂರ್ಯವಂಶಿ ಅವರ ಆಯ್ಕೆಯ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು ಮತ್ತು ಅವರಿಗೆ ಶುಭ ಹಾರೈಸಿದರು. ಅತ್ಯುತ್ತಮ ಕೌಶಲ್ಯಯುಳ್ಳ ತಂಡವಾಗಿದ್ದು, ಮುಂದಿನ ಸವಾಲುಗಲಿಗೆ ಶುಭವಾಗಲಿ ಎಂದು ಭಾರತ ತಂಡಕ್ಕೆ ಶುಭಕೋರಿದ್ದಾರೆ. ಅದೇ ರೀತಿ ಸೂರ್ಯವಂಶಿಯ ಭಾರತದ ಕ್ರಿಕೆಟ್ ಪಯಣವನ್ನ ನೋಡಲು ಉತ್ಸಾಹದಿಂದಿರುವುದಾಗಿ ತಿಳಿಸಿದ್ದಾರೆ.

ಭವಿಷ್ಯದ ದೃಷ್ಟಿಯಿಂದ ತಂಡದ ಆಯ್ಕೆ

ಸೂರ್ಯಕುಮಾರ್ ಯಾದವ್ 2026ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಆದರೆ ಕಳೆದ 12 ತಿಂಗಳುಗಳಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ತೀರ ಕಳಪೆಯಾಗಿದೆ. ಹಾಗಾಗಿ 2028ರ ಟಿ 20 ವಿಶ್ವಕಪ್ ಮತ್ತು ಒಲಿಂಪಿಕ್ಸ್ ಅನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ. ಸೂರ್ಯಕುಮಾರ್ ಯಾದವ್ ಎರಡು ವರ್ಷಗಳಲ್ಲಿ 37 ವರ್ಷ ತುಂಬಲಿದ್ದಾರೆ. ಭವಿಷ್ಯಕ್ಕಾಗಿ ತಂಡವನ್ನು ಸಿದ್ಧಪಡಿಸಲು ಆಯ್ಕೆದಾರರು ನಿರ್ಧರಿಸಿದ್ದಾರೆ. ಡಿಸೆಂಬರ್ 2023 ರಿಂದ ಭಾರತೀಯ ತಂಡದಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ನೇರವಾಗಿ ನಾಯಕನಾಗಿ ತಂಡಕ್ಕೆ ಮರಳಿದ್ದಾರೆ. ಐಪಿಎಲ್‌ನಲ್ಲಿ ನಾಯಕನಾಗಿ ಅವರ ದಾಖಲೆ ಅತ್ಯುತ್ತಮವಾಗಿದೆ. ಅವರು 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರಶಸ್ತಿಗೆ ಮುನ್ನಡೆಸಿದರು ಮತ್ತು ಕಳೆದ ವರ್ಷ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದರು. ಈ ವರ್ಷವೂ ಮೊದಲಾರ್ಧದಲ್ಲಿ ತಂಡವನ್ನ ಅತ್ಯುತ್ತಮವಾಗಿ ಮುನ್ನಡೆಸಿದ್ದರು.

ಐರ್ಲೆಂಡ್-ಇಂಗ್ಲೆಂಡ್ ಟಿ20 ತಂಡ

ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ರಾಣಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಆರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ, ಪ್ರಿನ್ಸ್ ಯಾದವ್

ಏಷ್ಯನ್ ಗೇಮ್ಸ್ ತಂಡ

ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ, ಜಸ್ಪ್ರೀತ್ ಬುಮ್ರಾ, ಪ್ರಿನ್ಸ್ ಯಾದವ್



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports