Made in Pakistan: ನಿಷೇಧವಿದ್ದರೂ ಭಾರತದಲ್ಲಿ ಪಾಕ್ ವಸ್ತುಗಳ ಮಾರಾಟ! ಪುಣೆಯಲ್ಲಿ ಪತ್ತೆಯಾಯ್ತು ಮೇಡ್ ಇನ್ ಪಾಕಿಸ್ತಾನ್ ಬೆಡ್‌ಶೀಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ನಿಷೇಧವಿದ್ದರೂ ಭಾರತದಲ್ಲಿ ಪಾಕ್ ವಸ್ತುಗಳ ಮಾರಾಟ!


Last Updated:

Made in Pakistan: ನಿಷೇಧವಿದ್ದರೂ ಭಾರತದಲ್ಲಿ ಪಾಕಿಸ್ತಾನಿ ವಸ್ತುಗಳ ಮಾರಾಟ? ಪುಣೆಯ ಜಾತ್ರೆಯಲ್ಲಿ ಮೇಡ್ ಇನ್ ಪಾಕಿಸ್ತಾನ್ ಬೆಡ್‌ಶೀಟ್ ಮಾರಾಟ? ಎಸ್‌ಐಟಿ ತನಿಖೆಗೆ ಆದೇಶಿಸಿದ ಸರ್ಕಾರ

ನಿಷೇಧವಿದ್ದರೂ ಭಾರತದಲ್ಲಿ ಪಾಕ್ ವಸ್ತುಗಳ ಮಾರಾಟ!
ನಿಷೇಧವಿದ್ದರೂ ಭಾರತದಲ್ಲಿ ಪಾಕ್ ವಸ್ತುಗಳ ಮಾರಾಟ!

ಪುಣೆ (ಮಹಾರಾಷ್ಟ್ರ): ಪುಲ್ವಾಮಾ ಘಟನೆ ನಂತರ ಭಾರತ ಸರ್ಕಾರವು (Government of India), ಪಾಕಿಸ್ತಾನದ  (Pakistan) ಎಲ್ಲಾ ವಸ್ತುಗಳ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಿದೆ. ಆದರೂ ಕೂಡ ಪಾಪಿ ಪಾಕಿಸ್ತಾನದಲ್ಲಿ ಸಿದ್ಧವಾದ ಕೆಲವೊಂದು ವಸ್ತುಗಳು ಭಾರತದೊಳಗೆ (India) ಅಕ್ರಮವಾಗಿ ಪ್ರವೇಶಿಸುತ್ತಿದೆಯೇ ಎಂಬ ಅನುಮಾನ ಮೂಡಿದೆ! ಅದಕ್ಕೆ ಪ್ರಮುಖ ಕಾರಣ, ಮಹಾರಾಷ್ಟ್ರದ (Maharashtra) ಸಾಂಸ್ಕೃತಿಕ ರಾಜಧಾನಿ ಪುಣೆಯಲ್ಲಿ (Pune) ನಡೆದಿರುವ ಘಟನೆ. ಆ ಕುರಿತ ವರದಿ ಇಲ್ಲಿದೆ…

ಮಹಾರಾಷ್ಟ್ರದ ಪುಣೆಯ ಪಿಂಪ್ಲಿ-ಚಿಂಚ್‌ವಡ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಲಕ್ಷಣ ಘಟನೆಯೊಂದು ಇಡೀ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ, ಸ್ಥಳೀಯ ಮಹಿಳೆಯೊಬ್ಬರು ಜಾತ್ರೆಯಲ್ಲಿ ಖರೀದಿಸಿದ ಬೆಡ್‌ಶೀಟ್ ಒಂದರಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ (Made in Pakistan) ಎಂಬ ಟ್ಯಾಗ್ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ವ್ಯಾಪಾರ ಮತ್ತು ಆಮದುಗಳ ಮೇಲೆ ಕಠಿಣ ನಿರ್ಬಂಧಗಳಿರುವ ಈ ಸಮಯದಲ್ಲಿಯೇ, ನೆರೆಯ ಉಗ್ರ ಪೋಷಕ ರಾಷ್ಟ್ರದ ಉತ್ಪನ್ನವೊಂದು ಸ್ಥಳೀಯ ಮಾರುಕಟ್ಟೆಗೆ ಹೇಗೆ ಪ್ರವೇಶಿಸಿತು ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ.

ಏನಿದು ಘಟನೆ?

ಪುಣೆಯ ಚಿಂಚ್‌ವಡ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಂಕಷ್ಟ ಚತುರ್ಥಿ ನಿಮಿತ್ತ ‘ಶ್ರೀ ಮೋರಿಯಾ ಗೋಸಾವಿ ದೇವಸ್ಥಾನ’ದ ಬಳಿ ಜಾತ್ರೆ ಆಯೋಜಿಸಲಾಗಿತ್ತು. ಈ ಜಾತ್ರೆಯ ಸ್ಟಾಲ್ ಒಂದರಲ್ಲಿ ಮಹಿಳೆಯೊಬ್ಬರು ಸಾಮಾನ್ಯ ಬೆಡ್‌ಶೀಟ್ ಒಂದನ್ನು ಖರೀದಿಸಿದ್ದರು. ಖರೀದಿಸುವ ಸಮಯದಲ್ಲಿ ಆ ಬಟ್ಟೆಯ ಮೇಲೆ ಯಾವುದೇ ವಿಶೇಷ ಲೇಬಲ್ ಕಾಣಿಸಿರಲಿಲ್ಲ. ಆದರೆ, ಮಹಿಳೆ ಆ ಬೆಡ್‌ಶೀಟ್ ಅನ್ನು ಮನೆಗೆ ತಂದು, ಬಳಸುವ ಮುನ್ನ ನೀರಿನಲ್ಲಿ ನೆನೆಸಿ ತೊಳೆದಾಗ ಅಸಲಿ ಕಥೆ ಹೊರಬಂದಿದೆ.

ನ್ಯೂಸ್​ 18 ಇಂಗ್ಲೀಷ್​ ವರದಿ ಮಾಡಿರುವಂತೆ, ಬೆಡ್‌ಶೀಟ್‌ನ ಒಂದು ಮೂಲೆಯಲ್ಲಿ ಬಚ್ಚಿಡಲಾಗಿದ್ದ ಬಿಳಿ ಬಣ್ಣದ ಟ್ಯಾಗ್ ಜಲಾವೃತಗೊಂಡು ಹೊರಬಂದಿದ್ದು, ಅದರ ಮೇಲೆ ಸ್ಪಷ್ಟವಾಗಿ ‘ಮೇಡ್ ಇನ್ ಪಾಕಿಸ್ತಾನ್’ ಎಂದು ಮುದ್ರಿಸಲಾಗಿದೆ. ಇದರಿಂದ ಆಘಾತಕ್ಕೊಳಗಾದ ಮಹಿಳೆ ತಕ್ಷಣವೇ ಅದರ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಆ ವಿಡಿಯೋ ಈಗ ದೇಶಾದ್ಯಂತ ವೈರಲ್ ಆಗಿ, ತನಿಖೆಗೆ ಒತ್ತಾಯ ಕೇಳಿಬಂದಿದೆ.

ಇದನ್ನೂ ಓದಿ: Uttar Pradesh: ಅಯ್ಯೋ ಇಂತಹ ವೈದ್ಯರೂ ಇರ್ತಾರಾ? 25 ಸಾವಿರ ಕೊಡಲಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ಸರ್ಕಾರಿ ಡಾಕ್ಟರ್!

ಮುಂದುವರೆದು, ಇಂಡಿಯಾ ಟುಡೇ ವರದಿ ಮಾಡಿರುವಂತೆ, ವಿಡಿಯೋ ವೈರಲ್ ಆಗುತ್ತಿದ್ದಂತೆ ಪಿಂಪ್ಲಿ-ಚಿಂಚ್‌ವಡ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, “ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ, ಉತ್ಪನ್ನದ ಮೂಲವನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಏತನ್ಮಧ್ಯೆ, ಈ ಎಸ್​ಐಟಿ ತಂಡವು ಜಾತ್ರೆಯಲ್ಲಿ ಸ್ಟಾಲ್ ಹಾಕಿದ್ದ ವ್ಯಾಪಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಅದರಂತೆ, ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಬೆಡ್‌ಶೀಟ್‌ಗಳನ್ನು ದೊಡ್ಡ ರೀಟೆಲ್​ ಮಾರುಕಟ್ಟೆಯಿಂದ ತರಲಾಗಿದೆ ಎಂದು ತಿಳಿದುಬಂದಿದ್ದು, ಪೊಲೀಸರು ಈಗ ಆ ಮೂಲವನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.

ಮೇಡ್ ಇನ್ ಪಾಕಿಸ್ತಾನ್ ವಸ್ತುಗಳ ಮಾರಾಟ ಹೆಚ್ಚಳ?

ಮಹಾರಾಷ್ಟ್ರದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಛತ್ರಪತಿ ಸಂಭಾಜಿನಗರದಲ್ಲಿ ಮೇಡ್ ಇನ್ ಪಾಕಿಸ್ತಾನ್ ಲೇಬಲ್ ಹೊಂದಿದ್ದ ಪಾಕಿಸ್ತಾನಿ ಮೂಲದ ಕಾಸ್ಮೆಟಿಕ್ಸ್ ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿ, ಮೂವರನ್ನು ಬಂಧಿಸಿದ್ದರು.

ಅದರ ಬೆನ್ನಲ್ಲೇ ಈಗ ಪುಣೆಯಲ್ಲಿ ಬೆಡ್‌ಶೀಟ್ ಪ್ರಕರಣ ಬೆಳಕಿಗೆ ಬಂದಿರುವುದು, ದೇಶದ ಗಡಿ ದಾಟಿ ಅಕ್ರಮವಾಗಿ ಸರಕುಗಳನ್ನು ಭಾರತದ ಮಾರುಕಟ್ಟೆಗೆ ತರುತ್ತಿರುವ ದೊಡ್ಡ ದಂಧೆ ಸಕ್ರಿಯವಾಗಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed