Success Story: ಅಂಗೈ ಅಗಲದ ಸಮೋಸಾ ತಂದುಕೊಡ್ತು 45 ಕೋಟಿ; ಮನೆ-ಮಠ ಮಾರಿ ಗಂಡ-ಹೆಂಡತಿ ಮಾಡಿದ್ದೇನು ಗೊತ್ತಾ? | ವ್ಯಾಪಾರ ಸುದ್ದಿ | ACTPnews

ಸಂತಸಕ್ಕೆ ಸಮೋಸಾನೇ ಕಾರಣ!


Last Updated:

ಬಯೋಟೆಕ್ ಸಂಶೋಧಕರು ನಿಧಿ ಮತ್ತು ಶಿಖರ್ ವೀರ್ ಸಿಂಗ್ ಉದ್ಯೋಗ ತ್ಯಜಿಸಿ ಮನೆ ಮಾರಾಟ ಮಾಡಿ ಆರಂಭಿಸಿದ ಸಮೋಸಾ ಸಿಂಗ್ ಇಂದು 8 ನಗರಗಳಲ್ಲಿ ದಿನಕ್ಕೆ 50 ಸಾವಿರ ಸಮೋಸಾ ಮಾರಾಟ, ಮೌಲ್ಯ 45 ಕೋಟಿ

ಸಂತಸಕ್ಕೆ ಸಮೋಸಾನೇ ಕಾರಣ!
ಸಂತಸಕ್ಕೆ ಸಮೋಸಾನೇ ಕಾರಣ!

ಬೆಂಗಳೂರು: ಅಂಗೈ ಅಗಲದ ಕುರುಕುಲು ತಿಂಡಿಯೊಂದು (Snacks) 50 ಕೋಟಿ ದುಡ್ಡು ತರುತ್ತಿದೆ ಎಂದರೆ ನಂಬುತ್ತೀರಾ? ಇದು ಅಂತಹುದೇ ಊಹೆಗೂ ನಿಲುಕಲಾರದ ಕಥೆ; ಕಲಿತದ್ದು ಪಕ್ಕಾ ವಿಜ್ಞಾನ (Science) ಮಾಡುತ್ತಿರುವುದು ಬಾಣಸಿಗರ ಕೆಲಸ. ನಾವು ಮಾಡುವ ಕೆಲಸದಲ್ಲಿ (Work) ವಿಜ್ಞಾನ ಅಳವಡಿಸಿಕೊಂಡರೆ ಬೇರೆನೂ ಬೇಡ, ಅದೇ ಯಶಸ್ಸು (Fame) ಕೊಡುತ್ತದೆ ಎಂಬುದಕ್ಕೆ ಈ ದಂಪತಿಗಳೇ ಉದಾಹರಣೆ.

ವಿಜ್ಞಾನಿಗಳ ಕೈ ಜಾದೂ ಮಾಡಿತು ಕರಾಮತ್ತು

ಬೆಂಗಳೂರಿನ ಸಂಶೋಧಕ ದಂಪತಿ ನಿಧಿ ಮತ್ತು ಶಿಖರ್ ವೀರ್ ಸಿಂಗ್ ಅವರು ಕೋಟ್ಯಂತರ ರೂಪಾಯಿ ಸಂಬಳದ ಬಯೋಟೆಕ್ ಉದ್ಯೋಗ ತ್ಯಜಿಸಿ, ಮನೆಯನ್ನೂ ಮಾರಿ, ಕೇವಲ 300 ಚದರ ಅಡಿಯ ಅಡಿಗೆ ಮನೆಯಿಂದ ಶುರು ಮಾಡಿದ ಸಮೋಸಾ ವ್ಯಾಪಾರ ಇಂದು ₹45 ಕೋಟಿ ಮೌಲ್ಯದ ಬ್ರಾಂಡ್ ಆಗಿ ಬೆಳೆದಿದೆ! “ಕನಸು ಬೆನ್ನಟ್ಟುವುದು ಬುದ್ಧಿಯ ಕೆಲಸವಲ್ಲ” ಎಂದು ಇವರಿಗೆ ಬೈದವರ ದೊಡ್ಡ ಪಟ್ಟಿಯೇ ಇದೆ; ಈಗ ಅವರೆಲ್ಲಾ ಇವರ ಕಾಯಂ ಗ್ರಾಹಕರು!

ಸಮೋಸಾ ಹುಡುಕಾಟ ಮಾಡಿತ್ತು ಮೋಡಿ!

ಒಂದು ಲೋಕಲ್ ಫುಡ್ ಕೋರ್ಟ್‌ಗೆ ಹೋದಾಗ ಅಲ್ಲಿ ಸಮೋಸಾ ಎಷ್ಟೊಂದು ಜನಪ್ರಿಯವಾಗಿದ್ದರೂ ಒಂದೇ ಒಂದು ದೊಡ್ಡ ಬ್ರಾಂಡ್ ಇಲ್ಲ ಎಂಬ ಅಂಶ ಅವರ ಗಮನ ಸೆಳೆಯಿತು. 2015ರಲ್ಲಿ ಶಿಖರ್ ಮೊದಲು ಕೆಲಸ ಬಿಟ್ಟರು; 2016ರಲ್ಲಿ ನಿಧಿ ಕೂಡ ಉದ್ಯೋಗ ತ್ಯಜಿಸಿ “ಸಮೋಸಾ ಸಿಂಗ್” ಬ್ರಾಂಡ್ ಹುಟ್ಟುಹಾಕಿದರು. ಆರಂಭದಲ್ಲಿ ಶಿಖರ್ ಸ್ವತಃ ಆರ್ಡರ್ ಡೆಲಿವರಿ ಮಾಡುತ್ತಿದ್ದರು; ನಿಧಿ ಅಡಿಗೆ ಮನೆ ನಿರ್ವಹಿಸುತ್ತಿದ್ದರು. ಒಬ್ಬ ಅಡುಗೆಯವರನ್ನು ಮಾತ್ರ ಇಟ್ಟುಕೊಂಡು ಈ ದಂಪತಿ ತಮ್ಮ ವ್ಯಾಪಾರದ ನೊಗ ಹೊತ್ತು ದಿನ ರಾತ್ರಿ ಕಷ್ಟಪಟ್ಟರು!
ಆದರೂ ಇವರಿಗಿತ್ತು ಆ ಒಂದು ಸಮಸ್ಯೆ!

ಬಯೋಟೆಕ್ ವಿಜ್ಞಾನಿಗಳಾಗಿದ್ದ ಇವರಿಗೆ ಸವಾಲಾಗಿದ್ದು ಕೆಲವೇ ಕ್ಷಣಗಳಲ್ಲಿ ಮೆತ್ತಗಾಗುವ ಆ ಮೂಲಕ ಸ್ವಾದ ಕಳೆದುಕೊಳ್ಳುವ ಸಮೋಸಾದ ಗುಣ. ಮಾರುಕಟ್ಟೆಯಲ್ಲಿ ತುಂಬಾ ವ್ಯಾಪಾರಸ್ಥರಿಗೆ ಇದೇ ಸಮಸ್ಯೆ. ಸಮೋಸಾದ ಈ ಸಮಸ್ಯೆಯನ್ನೂ ವೈಜ್ಞಾನಿಕ ದೃಷ್ಟಿಯಿಂದ ಪರಿಹರಿಸಿದರು! ಮೈದಾ ಹಿಟ್ಟಿನ ಗ್ಲುಟೆನ್ ಬಂಧಗಳನ್ನು ವಿಶೇಷ ರೋಲರ್‌ಗಳ ಸಹಾಯದಿಂದ ಮುರಿದು, ಡೆಲಿವರಿ ಆದ ಬಳಿಕವೂ 6 ಗಂಟೆಗಳ ಕಾಲ ಗರಿ ಗರಿಯಾಗಿ ಉಳಿಯುವ ಸಮೋಸಾ ತಯಾರಿಸುವ ಗುಟ್ಟು ಕಂಡುಹಿಡಿದರು. ರುಚಿ ಎಲ್ಲ ಊರುಗಳಲ್ಲೂ ಒಂದೇ ರೀತಿ ಇರಬೇಕು ಎಂಬ ತತ್ವ ಅನುಸರಿಸಿದ ಇವರ ಬ್ರಾಂಡ್ ಶೀಘ್ರದಲ್ಲೇ ದೊಡ್ಡ ಕಾರ್ಪೊರೇಟ್ ಕಂಪನಿಗಳು ಮತ್ತು ಏರ್ ಇಂಡಿಯಾದ ಗ್ರಾಹಕರನ್ನು ಆಕರ್ಷಿಸಿತು!

8 ನಗರ, ದಿನಕ್ಕೆ 50 ಸಾವಿರ ಸಮೋಸಾ ಖಾಲಿ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed