Last Updated:
ಸು ಫ್ರಮ್ ಸೋ ಚಿತ್ರ ಕಳೆದ ವರ್ಷ ಹಂಗಾಮಾ ಮಾಡಿತ್ತು. ಯಾರೂ ನಿರೀಕ್ಷೆ ಮಾಡದ ಲೆವೆಲ್‌ಗೆ ಬಾಕ್ಸ್ ಅಲ್ಲಿ ಸದ್ದು ಮಾಡ್ತು. ಈ ಸಿನಿಮಾ ಬಂದು ಈಗ ಒಂದು ವರ್ಷ ಪೂರ್ಣ ಆಗಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ.
ಸು ಫ್ರಮ್ ಸೋ ಚಿತ್ರ (Su from So Movie) ಒಂದು ಇದೆ. ಈ ಚಿತ್ರದಲ್ಲಿ ವಿಷಯ ಇದೆ. ಜನ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ. ಹೀಗೆ ಚಿತ್ರದ ಮೊದಲ ಪ್ರೀಮಿಯರ್ ಶೋದ ಬಗ್ಗೆ ಸುದ್ದಿ ಬಂತು. ಅದು ಮುಂದೆ ಯಶಸ್ಸಿಗೂ ದಾರಿ ಆಯಿತು. ಅಂದರೆ, ಚಿತ್ರದ (Movie) ಮೊದಲ ಪ್ರೀಮಿಯರ್ ಶೋದ (Premiere Show) ಪ್ರತಿಕ್ರಿಯೆ ಚಿತ್ರ ರಿಲೀಸ್ ಆದಾಗ ಹೆಲ್ಪ್ ಆಯಿತು. ಜನರನ್ನ ಥಿಯೇಟರ್‌ಗೆ (Theater) ಕರೆದುಕೊಂಡು ಬರೋಕೆ ಇದು ಅಷ್ಟೆ ಸಪೋರ್ಟ್ ಮಾಡ್ತು. ಆ ರೀತಿಯ ಈ ಚಿತ್ರ ಬಂದು ಒಂದು ವರ್ಷ ಆಗಿದೆ. ಅದೆಷ್ಟು ಬೇಗ ಒಂದು ವರ್ಷ ಆಯಿತು ಅನ್ನುವ ಫೀಲ್ ಕೂಡ ಇದೆ. ಈ ಸಿನಿಮಾ ಬಂದು ನಿಜಕ್ಕೂ ಒಂದು ವರ್ಷ ಆಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ.
6 ಕೋಟಿ ಬಜೆಟ್, 125 ಕೋಟಿ ಕಲೆಕ್ಷನ್
(ಚಿತ್ರ ಕೃಪೆ: ಜೆಪಿ ತೂಮಿನಾಡ್ ಇನ್‌ಸ್ಟಾಗ್ರಾಮ್)
ಆ ರೀತಿನೇ ಈ ಟೈಟಲ್ ಇತ್ತು. ಆದರೆ, ಮುಂದೆ ಇದು ಎಲ್ಲರ ಗಮನ ಕೂಡ ಸೆಳೆದಿತ್ತು. ಹೆಚ್ಚಿಗೆ ಸದ್ದು ಮಾಡದೆ ಬಂದ ಈ ಚಿತ್ರದ ಒಂದೇ ಒಂದು ಪ್ರೆಸ್ ಮೀಟ್ ಆಗಿತ್ತು. ಇದರಲ್ಲಿ ರಾಜ್ ಬಿ ಶೆಟ್ಟಿ ಬಿಟ್ಟರೆ, ಎಲ್ಲರೂ ಹೊಸಬರೇ ಇದ್ದರು.
ಸು ಫ್ರಮ್ ಸೋ ಚಿತ್ರದ ಪ್ರೆಸ್ ಮೀಟ್ ಆದ್ಮೇಲೆ ಒಂದು ಪ್ರೀಮಿಯರ್ ಶೋ ಆಯಿತು. ಇದು ಪೇಯ್ಡ್ ಪ್ರೀಮಿಯರ್ ಶೋನೇ ಆಗಿತ್ತು. ಇಲ್ಲಿ ಈ ಚಿತ್ರವನ್ನ ನೋಡಿದವರು ತುಂಬಾನೆ ಎಂಜಾಯ್ ಮಾಡಿದ್ದರು.
ಚಿತ್ರದ ಪ್ರತಿಯೊಂದು ವಿಷಯವನ್ನು ಎಂಜಾಯ್ ಮಾಡಿದರು. ಪ್ರತಿ ಮಾತು ಮತ್ತು ಪ್ರತಿ ಸೀನ್‌ಗೂ ಬಿದ್ದು ಬಿದ್ದು ನಕ್ಕರು. ಆ ರೀತಿನೇ ಈ ಚಿತ್ರ ಪ್ರೇಕ್ಷಕರನ್ನ ನಗೆ ಕಡಲಲ್ಲಿ ತೇಲಿಸಿತ್ತು.
ಸು ಫ್ರಮ್ ಸೋ ಚಿತ್ರ ಕಡಿಮೆ ಬಜೆಟ್‌ನ ಚಿತ್ರವೇ ಆಗಿತ್ತು. ಸುಮಾರು 5.50 ಕೋಟಿ ಬಜೆಟ್‌ನ ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡ್ತು.
ಬಿಗ್ ಹಿಟ್ ಸು ಫ್ರಮ್ ಸೋ ಚಿತ್ರ
(ಚಿತ್ರ ಕೃಪೆ: ಜೆಪಿ ತೂಮಿನಾಡ್ ಇನ್‌ಸ್ಟಾಗ್ರಾಮ್)
ಈ ಸಿನಿಮಾ ಬಂದ ಸಮಯದಲ್ಲಿ ಕನ್ನಡದ ಯಾವುದೇ ಚಿತ್ರ ಹಿಟ್ ಆಗಿರಲಿಲ್ಲ. ಆದರೆ, ಇದು ಹೊಸ ಭರವಸೆ ಮೂಡಿಸಿತು. ಕಾರಣ, ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಬರೋಬ್ಬರಿ 125 ಕೋಟಿ ಕಲೆಕ್ಷನ್ ಮಾಡಿತ್ತು.
ಈ ಚಿತ್ರ ಕಳೆದ ವರ್ಷ ಜುಲೈ-25,2025 ರಿಲೀಸ್ ಆಗಿತ್ತು. ಇದು ಆರಂಭದಲ್ಲಿ ದೊಡ್ಡಮಟ್ಟದಲ್ಲೇನು ರಿಲೀಸ್ ಆಗಿರಲಿಲ್ಲ. ಆದರೆ, ಚಿತ್ರ ಜನಕ್ಕೆ ಇಷ್ಟವಾದಂತೇನೆ ಶೋಗಳು ಹೆಚ್ಚಾದವು. ಬೇರೆ ಕಡೆಗೂ ಈ ಚಿತ್ರ ರಿಲೀಸ್ ಆಯಿತು.
ಈ ಚಿತ್ರದಲ್ಲಿ ರವಿ ಅಣ್ಣ ಅನ್ನುವ ಪಾತ್ರ ಇದೆ. ಇದನ್ನ ಶನೀಲ್ ಗೌತಮ್ ಮಾಡಿದ್ದಾರೆ. ಇದು ಜನರಿಗೆ ತುಂಬಾನೆ ಇಷ್ಟ ಆಯಿತು. ನಟ ಪುಷ್ಪರಾಜ್ ಬೋಳಾರ್ ಅವರ ಭಾವಾ ಪಾತ್ರವು ಹಿಟ್ ಆಯಿತು.
ಚಿತ್ರದ ನಾಯಕ ನಟನ ಪಾತ್ರದಲ್ಲಿ ಜೆಪಿ ತೂಮಿನಾಡ್ ಅಭಿನಯಿಸಿದ್ದರು. ಇವರ ಅಭಿನಯವು ಜನರ ಹೃದಯ ಗೆದ್ದೇ ಬಿಡ್ತು. ಈ ಚಿತ್ರದ ಡೈರೆಕ್ಟರ್ ಮತ್ತು ರೈಟರ್ ಎರಡೂ ಇವರೇ ಆಗಿದ್ದರು ಅಂತ ಹೇಳಬಹುದು.
Bangalore [Bangalore],Bangalore,Karnataka














