Last Updated:
ಬೆಂಗಳೂರು ನಗರ ಕೇವಲ ಉದ್ಯೋಗ ಅವಕಾಶಗಳನ್ನು ಮಾತ್ರ ನೀಡದೆ, ಹಲವು ಸೌಕರ್ಯ ಮತ್ತು ಜೀವನಶೈಲಿಯಿಂದ ಇಲ್ಲಿಯೇ ಉಳಿಯುವಂತೆ ಬದಲಾವಣೆ ಮಾಡುತ್ತದೆ. ಕೆಲವರು ನಗರದಲ್ಲಿರುವ ನ್ಯೂನತೆಗಳನ್ನು ಎತ್ತಿ ತೋರಿಸಿದ್ದಾರೆ.
ಬೆಂಗಳೂರು ಎಂದಾಕ್ಷಣ ಟ್ರಾಫಿಕ್ (Bengaluru Traffic), ಹೆಚ್ಚಾಗುತ್ತಿರುವ ಬಾಡಿಗೆ ದರಗಳು (Rent) ಹಾಗೂ ಜೀವನಶೈಲಿಯ ಬಗ್ಗೆ ಟೀಕೆಗಳು ಕೇಳಿ ಬರುತ್ತವೆ. ಆದರೂ ಬೆಂಗಳೂರಿಗೆ ದೇಶದ ಮೂಲೆ ಮೂಲೆಗಳಿಂದ ಆಗಮಿಸುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇದರ ನಡುವೆಯೇ ಬಿಹಾರ (Bihar) ವ್ಯಕ್ತಿಯೋರ್ವ ಪ್ರತಿದಿನ ಇಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಬೆಂಗಳೂರಿನಲ್ಲಿಯೇ ಇರಲು ಜನರು ಏಕೆ ಇಷ್ಟಪಡ್ತಾರೆ (Stay In Bengaluru) ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಿಹಾರ ವ್ಯಕ್ತಿಯ ಚರ್ಚೆಗಳು ಸಖತ್ ವೈರಲ್ ಆಗುತ್ತಿದ್ದು, ಹಲವು ನಮಗೂ ಹೀಗೆ ಅನಿಸುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಜನರು ಬೆಂಗಳೂರಿನಲ್ಲಿಯೇ ಉಳಿದುಕೊಳ್ಳುವುದು ಹೇಗೆ ಎಂದು ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯ ಹೆಸರು ಅಂಕಿತ್, ಅವರು ಹೇಳಿರುವ ಅಂಶಗಳು ಇಂತಿದೆ.
‘ಇಂದು ಬೆಂಗಳೂರಿನಲ್ಲಿ ಜನರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಇಲ್ಲಿಗೆ ಬಂದ ಬಳಿಕ ವಾಪಸ್ ಹೋಗಲು ಇಷ್ಟ ಪಡೋದಿಲ್ಲ. ಬೆಂಗಳೂರಿನಲ್ಲಿ ಒಂಟಿತನ, ಆತಂಕದಿಂದ ವಾಸ ಮಾಡುತ್ತಿದ್ದರೂ ಕೂಡ ಇಲ್ಲಿಯೇ ಇರಲು ಇಷ್ಟಪಡ್ತಾರೆ. ನಮ್ಮ ಸಂಬಳದಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಅಪಾರ್ಟ್ಮೆಂಟ್ ಬಾಡಿಗೆಗೆ ಹೋದರೂ ಸಹ, ಇಲ್ಲಿಯೇ ಇರ್ತಾರೆ. ಏಕೆಂದರೆ ಬೆಂಗಳೂರಿನಲ್ಲಿ ಇರುವಂತೆಯೇ ಹೈದರಾಬಾದ್, ಚೆನ್ನೈ, ಗುರುಗಾಂವ್ ಹಾಗೂ ದೆಹಲಿಯಲ್ಲಿ ಇದೆ. ಆದರೆ ಇಲ್ಲಿನ ಹವಾಮಾನ ನಮ್ಮನ್ನು ಬೇರೆ ಕಡೆ ಹೋಗಲು ಬಿಡುವುದಿಲ್ಲ’ ಎಂದು ಅಂಕಿತ್ ಹೇಳಿದ್ದಾರೆ.
ಅಂದರೇ, ಅಂಕಿತ್ ಅವರ ಪ್ರಕಾರ ಭಾರತದ ಬೇರೆ ಬೇರೆ ನಗರಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳು ಇದ್ದರೂ, ಬೆಂಗಳೂರಿನ ಆಹ್ಲಾದಕರ ಹವಾಮಾನ ಇಲ್ಲಿಯೇ ನೆಲೆಸುವಂತೆ ಮಾಡುತ್ತದೆ ಎಂದಿದ್ದಾರೆ.
ಇನ್ನು, ಅಂಕಿತ್ ಅವರ ಅಭಿಪ್ರಾಯಕ್ಕೆ ಹಲವು ಪ್ರತಿಕ್ರಿಯೆ ನೀಡಿದ್ದು, ಇದು ನಿಜ ಎಂದು ಹೇಳಿದ್ದಾರೆ. ‘ಮೂರ್ನಾಲ್ಕು ದಶಕಗಳ ಹಿಂದೆ ದೇಶದ ಜನರು ಮುಂಬೈ ನಗರವನ್ನು ತಮ್ಮ ಕನಸು ನನಸಾಗುವಂತೆ ಮಾಡಲು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಆ ಪಾತ್ರವನ್ನು ಬೆಂಗಳೂರು ಮಾಡ್ತಿದೆ’ ಎಂದು ನೆಟ್ಟಿಗೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತಷ್ಟು ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ‘ನಾನು ನಿಮ್ಮ ಅಭಿಪ್ರಾಯಕ್ಕೆ ಸಂಪೂರ್ಣವಾಗಿ ಒಪ್ಪುತ್ತೇನೆ, ಈ ಪೋಸ್ಟ್ ಸಾಕಷ್ಟು ಇಷ್ಟ ಆಗಿದೆ’ ಎಂದು ಹೇಳಿದ್ದಾರೆ.
ಬೆಂಗಳೂರು ನಗರ ಕೇವಲ ಉದ್ಯೋಗ ಅವಕಾಶಗಳನ್ನು ಮಾತ್ರ ನೀಡದೆ, ಹಲವು ಸೌಕರ್ಯ ಮತ್ತು ಜೀವನಶೈಲಿಯಿಂದ ಇಲ್ಲಿಯೇ ಉಳಿಯುವಂತೆ ಬದಲಾವಣೆ ಮಾಡುತ್ತದೆ. ಕೆಲವರು ನಗರದಲ್ಲಿರುವ ನ್ಯೂನತೆಗಳನ್ನು ಎತ್ತಿ ತೋರಿಸುತ್ತಾರೆ. ಆದರೆ ಇದೇ ಸಮಯದಲ್ಲಿ ಅಂಕಿತ್ ರಂತಹ ಜನರು, ಇಲ್ಲಿಯೇ ಉಳಿಯಲು ಇರುವ ಕಾರಣಗಳನ್ನು ನೀಡುತ್ತಾರೆ. ಆದರೆ ಕೆಲವರು ಮಾತ್ರ ಅಂಕಿತ್ ಅವರ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದು, ‘ಕಂಪನಿಗಳು ಜನರಿಗೆ ವರ್ಕ್ ಫ್ರಮ್ ಹೋಮ್ ಅವಕಾಶವನ್ನು ನೀಡಿದರೆ ಶೇಕಡಾ 80ರಷ್ಟು ಜನರು ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗ್ತಾರೆ. ಬೆಂಗಳೂರಿನ ಹವಾಮಾನವನ್ನು ಹೆಚ್ಚಾಗಿ ಹೈಪ್ ಮಾಡ್ತಿದ್ದಾರೆ ಅಷ್ಟೇ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
‘ಬೆಂಗಳೂರಿನಲ್ಲಿ ವಾಸಿಸಲು ತುಂಬಾ ಕಷ್ಟ, ಏಕೆಂದರೆ ಇಲ್ಲಿನ ಟ್ರಾಫಿಕ್ ಹಾಗೂ ಬಾಡಿಗೆ ದರಗಳು ತುಂಬಾ ಹೆಚ್ಚು. ಆದರೂ ಹೇಗೋ ಜನರು ಇನ್ನು ಇಲ್ಲೇ ಉಳಿದುಕೊಂಡಿದ್ದಾರೆ. ನಗರದ ಬಹುತೇಕ ಪಾದಚಾರಿ ಮಾರ್ಗಗಳು ಹಾಳಾಗಿದೆ. ಜನರು ಫುಟ್ಪಾತ್ ನಲ್ಲಿಯೇ ತಮ್ಮ ವಾಹನಗಳನ್ನು ಪಾರ್ಕ್ ಮಾಡ್ತಾರೆ. ಇಂತಹ ನಗರದಿಂದ ನಾನು ಹೊರ ಬಂದಿದ್ದಕ್ಕೆ ಖುಷಿಯಾಗಿದ್ದೇನೆ’ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
Bangalore [Bangalore],Bangalore,Karnataka













