Last Updated:
ಸಂಗೀತಾ ಭಟ್ ಬಿಗ್ಬಾಸ್ ಮನೆಯ ಒಳಗೆ ಹೋಗುತ್ತಿರುವ ಪ್ರೋಮೊವನ್ನು ಕಲರ್ಸ್ ಈಗಾಗಲೇ ಹಂಚಿಕೊಂಡಿದೆ. ಆ ಮೂಲಕ ಸಂಗೀತಾ ಭಟ್ ಬಿಗ್ಬಾಸ್ ಎಂಟ್ರಿ ಅಧಿಕೃತವಾಗಿದೆ.
ಸಂಗೀತಾ ಭಟ್ (Sangeetha Bhat), ಕನ್ನಡ ಸಿನಿಮಾ ಪ್ರಿಯರಿಗೆ ಬಹಳ ಪರಿಚಿತ ಹೆಸರು. ಕಳೆದ ಸುಮಾರು ವರ್ಷಗಳಿಂದ ಕನ್ನಡ ಸಿನಿಮಾ ಮತ್ತು ಟಿವಿ ಲೋಕದ ಜೊತೆಗೆ ನಂಟು ಹೊಂದಿದ್ದಾರೆ. ಮನೊರಂಜನಾ ಕ್ಷೇತ್ರದಲ್ಲಿರುವ ಸಂಗೀತಾ ಭಟ್ ವೃತ್ತಿ ಜೀವನ ಸಾಕಷ್ಟು ಏಳು-ಬೀಳುಗಳನ್ನು ಕಂಡಿದೆ. ಆದರೆ ಇದೀಗ ಮರಳಿ ಕಮ್ ಬ್ಯಾಕ್ ಮಾಡಿದ್ದು ಮಾತ್ರವಲ್ಲದೆ ಈಗ ಬಿಗ್ಬಾಸ್ ಮನೆಗೂ ಬಂದಿದ್ದಾರೆ. ಸಂಗೀತಾ ಭಟ್ ಬಿಗ್ಬಾಸ್ ಮನೆಯ ಒಳಗೆ ಹೋಗುತ್ತಿರುವ ಪ್ರೋಮೊವನ್ನು ಕಲರ್ಸ್ ಈಗಾಗಲೇ ಹಂಚಿಕೊಂಡಿದೆ. ಆ ಮೂಲಕ ಸಂಗೀತಾ ಭಟ್ ಬಿಗ್ಬಾಸ್ ಎಂಟ್ರಿ ಅಧಿಕೃತವಾಗಿದೆ.














