Last Updated:
ಪೂರ್ವ ಮತ್ತು ದಕ್ಷಿಣ ವಲಯಗಳ ನಡುವಿನ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಟೀಮ್ ಇಂಡಿಯಾದ ಯುವ ಆಟಗಾರರಾದ ವೈಭವ್ ಸೂರ್ಯವಂಶಿ ಹಾಗೂ ತಿಲಕ್ ವರ್ಮಾ ಮೈದಾನದಲ್ಲೇ ಕಿತ್ತಾಡಿಕೊಂಡ ಘಟನೆ ನಡೆದಿದೆ.
ಪೂರ್ವ ವಲಯ ಮತ್ತು ದಕ್ಷಿಣ ವಲಯಗಳ (East Zone vs South Zone, Final, Duleep Trophy) ನಡುವೆ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ (Duleep Trophy) ಪಂದ್ಯದ ವೇಳೆ ಪೂರ್ವ ವಲಯದ ಯುವ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತು ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ (Tilak Varma) ನಡುವೆ ಮೈದಾನದಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು. ಸಣ್ಣ ಸ್ಲೆಡ್ಜಿಂಗ್ ಎಂದು ಆರಂಭವಾದದ್ದು ನಂತರ ಗಂಭೀರ ವಾಗ್ವಾದಕ್ಕೆ ತಿರುಗಿ, ಅಂಪೈರ್ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.














