SSC Exam: 46 ಲಕ್ಷ ಯುವಮನಸುಗಳ ಕನಸಿಗೆ ಕೊಳ್ಳಿ ಇಟ್ಟಿತಾ ಪೇಪರ್ ಲೀಕ್ ದಂಧೆ? ಸೋರಿಕೆ ಆಗಿತ್ತಾ SSC GD ಕಾನ್‌ಸ್ಟೆಬಲ್ ಪೇಪರ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ!


Last Updated:

SSC GD Exam: ಹತ್ತಾರು ಕಷ್ಟಗಳ ನಡುವೆಯೂ ಮುಂಜಾನೆ ಎದ್ದು ಓಡುತ್ತಾ, ಬೆವರು ಸುರಿಸಿ ಸಿದ್ಧರಾಗಿದ್ದ ಆ ಕಡುಬಡವರ ಕನಸಿನ ಕೋಟೆ ಕೇವಲ ಕೆಲವು ಆಮಿಷಗಳಿಗಾಗಿ ನುಚ್ಚುನೂರಾಯಿತೇ? ಸೋರಿಕೆಯಾಯಿತೇ SSC GD ಕಾನ್ಸ್ಟೆಬಲ್ ಪರೀಕ್ಷೆಯ ಪೇಪರ್? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ಇದು ಕೇವಲ 46 ಲಕ್ಷ ಅಭ್ಯರ್ಥಿಗಳು (Aspirents) ಬರೆದ ಒಂದು ಸಾಮಾನ್ಯ ಪರೀಕ್ಷೆಯಲ್ಲ(Exam). ಇದು ದೇಶ ಕಾಯುವ ಯೂನಿಫಾರ್ಮ್ ಧರಿಸಿ ಹೆತ್ತವರ ಬಡತನ ನೀಗಿಸಬೇಕೆಂದು ಹಗಲಿರುಳು ಓದಿದ 46 ಲಕ್ಷ ಯುವಮನಸುಗಳ ಬದುಕಿನ ಹೋರಾಟ. ಹರಿದ ಚಪ್ಪಲಿ ಮೆಟ್ಟಿ, ಹಸಿದ ಹೊಟ್ಟೆಯಲ್ಲೇ ಪುಸ್ತಕ (Book) ಹಿಡಿದು, ದೇಶಸೇವೆಯ ಕನಸು ಕಂಡಿದ್ದ ಆ ಬಡ ಒಡಲುಗಳ ಆಸೆಗೆ ಈಗ ‘ಪೇಪರ್ ಲೀಕ್’ (Paper Leak) ಎಂಬ ದಂಧೆಕೋರರು ಕೊಳ್ಳಿ ಇಟ್ಟಿದ್ದಾರಾ? ಹತ್ತಾರು ಕಷ್ಟಗಳ ನಡುವೆಯೂ ಮುಂಜಾನೆ ಎದ್ದು ಓಡುತ್ತಾ, ಬೆವರು ಸುರಿಸಿ ಸಿದ್ಧರಾಗಿದ್ದ ಆ ಕಡುಬಡವರ ಕನಸಿನ ಕೋಟೆ ಕೇವಲ ಕೆಲವು ಆಮಿಷಗಳಿಗಾಗಿ ನುಚ್ಚುನೂರಾಯಿತೇ? ಸೋರಿಕೆಯಾಯಿತೇ SSC GD ಕಾನ್ಸ್ಟೆಬಲ್ ಪರೀಕ್ಷೆಯ ಪೇಪರ್? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಎಸ್​​​ಎಸ್​ಸಿ ಅಧ್ಯಕ್ಷ ಹೇಳುವುದೇನು?

ಎಸ್‌ಎಸ್‌ಸಿ ಅಧ್ಯಕ್ಷ ಎಸ್. ಗೋಪಾಲಕೃಷ್ಣನ್ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿ, “ಪೇಪರ್ ಲೀಕ್ ಆಗಿಲ್ಲ, ಆದರೆ ಕೆಲವು ಕೇಂದ್ರಗಳಲ್ಲಿ ಮಿಸ್ಮ್ಯಾನೇಜ್‌ಮೆಂಟ್ ನಡೆದಿದೆ” ಎಂದು ಒಪ್ಪಿಕೊಂಡಿದ್ದಾರೆ. ವಿಶೇಷವಾಗಿ ಪ್ರಯಾಗ್‌ರಾಜ್‌, ಕಾನ್ಪುರ ಮತ್ತು ಗೋರಖ್‌ಪುರದ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನಿಯಂತ್ರಣ ಕಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಮೇ 31ವರೆಗೆ ವಿವಿಧ ಹಂತಗಳಲ್ಲಿ ಪರೀಕ್ಷೆ!

ಈ ಪರೀಕ್ಷೆಯನ್ನು ದೇಶದಾದ್ಯಂತ ಸುಮಾರು 46 ಲಕ್ಷ ಅಭ್ಯರ್ಥಿಗಳು ಬರೆಯುತ್ತಿದ್ದಾರೆ. ಏಪ್ರಿಲ್ 30ರಿಂದ ಆರಂಭವಾದ ಪರೀಕ್ಷೆಗಳು ಮೇ 31ರವರೆಗೆ ವಿವಿಧ ಹಂತಗಳಲ್ಲಿ ನಡೆಯುತ್ತಿವೆ. ದಿನಕ್ಕೆ ಮೂರು ಶಿಫ್ಟ್‌ಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಕೆಲ ಕೇಂದ್ರಗಳಲ್ಲಿ ತಾಂತ್ರಿಕ ಸಮಸ್ಯೆಗಳು ತಲೆದೋರಿದವು. ವಿಶೇಷವಾಗಿ “ಸೇಫ್ ಟರ್ಮಿನಲ್” ಎಂದು ಕರೆಯಲಾಗುವ ಕಂಪ್ಯೂಟರ್ ವ್ಯವಸ್ಥೆಗಳಲ್ಲಿ ಅನುಮಾನಾಸ್ಪದ ಚಟುವಟಿಕೆ ಪತ್ತೆಯಾಗಿದ್ದರಿಂದ ಕೆಲವು ವ್ಯವಸ್ಥೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಎಸ್‌ಎಸ್‌ಸಿ ತಿಳಿಸಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ಉಟಾಂಗಿದ್ದೇಕೆ?

ಈ ಹಿನ್ನೆಲೆಯಲ್ಲಿ ಲಭ್ಯವಿದ್ದ ಕಂಪ್ಯೂಟರ್‌ಗಳ ಸಂಖ್ಯೆ ಕಡಿಮೆಯಾದ ಕಾರಣ ಸಾವಿರಾರು ಅಭ್ಯರ್ಥಿಗಳನ್ನು ಕಡಿಮೆ ಸಮಯದಲ್ಲಿ ಮರುಹೊಂದಿಸಲು ಪ್ರಯತ್ನಿಸಲಾಯಿತು. ಇದರಿಂದ ಜನಸಂದಣಿ ಹೆಚ್ಚಾಗಿ ಕೆಲ ಕೇಂದ್ರಗಳಲ್ಲಿ ಗೊಂದಲ ಉಂಟಾಯಿತು. ಪ್ರಯಾಗ್‌ರಾಜ್‌ನ ಒಂದು ಕೇಂದ್ರದಲ್ಲಿ ಅಭ್ಯರ್ಥಿಗಳು ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಪರೀಕ್ಷಾ ಕೇಂದ್ರದೊಳಗೆ ನುಗ್ಗಲು ಯತ್ನಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು ಎಂದು ವರದಿಯಾಗಿದೆ. ನಂತರ ಆ ಕೇಂದ್ರದ ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಲು ತೀರ್ಮಾನಿಸಲಾಯಿತು.

ಮಾಧ್ಯಮ ವರದಿಗಳು ಹೇಳುವುದೇನು?

ಕೆಲ ಮಾಧ್ಯಮ ವರದಿಗಳ ಪ್ರಕಾರ, ಕೆಲವು ಕೇಂದ್ರಗಳಲ್ಲಿ ಕೇಂದ್ರದ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಅಥವಾ ಮೂರು ಪಟ್ಟು ಹೆಚ್ಚು ಅಭ್ಯರ್ಥಿಗಳಿಗೆ ಅಡ್ಮಿಟ್ ಕಾರ್ಡ್ ನೀಡಲಾಗಿತ್ತು. ಇದರಿಂದಲೇ ಪರೀಕ್ಷಾ ಕೇಂದ್ರಗಳಲ್ಲಿ ನಿಯಂತ್ರಣ ತಪ್ಪಿದ ಪರಿಸ್ಥಿತಿ ಉಂಟಾಯಿತು ಎನ್ನಲಾಗಿದೆ. ಕಾನ್ಪುರದ ಒಂದು ಕೇಂದ್ರದಲ್ಲಿ 399 ಸೀಟುಗಳಿದ್ದರೂ 800ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕರೆಯಲಾಗಿತ್ತು ಎಂದು ವರದಿಯಾಗಿದೆ.

ನಡೆದಿತ್ತಾ ಹ್ಯಾಕಿಂಗ್​ ಗಿಮಿಕ್​?

ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ “ಪೇಪರ್ ಲೀಕ್” ಎಂಬ ವದಂತಿಗಳು ವೇಗವಾಗಿ ಹರಡಿದವು. ಆದರೆ ಎಸ್‌ಎಸ್‌ಸಿ ಅಧ್ಯಕ್ಷರು ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. “ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ. ಆದರೆ ಹ್ಯಾಕಿಂಗ್ ಪ್ರಯತ್ನಗಳು ನಡೆದಿವೆ. ಕೆಲವು ಅಭ್ಯರ್ಥಿಗಳು ದೂರದಿಂದಲೇ ಉತ್ತರಿಸಲು ಯತ್ನಿಸಿದ ಅನುಮಾನ ಇದೆ” ಎಂದು ಅವರು ತಿಳಿಸಿದ್ದಾರೆ. ಪ್ರತಿದಿನವೂ ಆನ್‌ಲೈನ್ ಪರೀಕ್ಷಾ ವ್ಯವಸ್ಥೆಯನ್ನು ಹ್ಯಾಕ್ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

ಆಯೋಗ ಹೇಳಿದ್ದೇನು?

ಪರೀಕ್ಷೆ ರದ್ದುಪಡಿಸಲಾದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲಾಗುತ್ತದೆ ಎಂದು ಎಸ್‌ಎಸ್‌ಸಿ ಈಗಾಗಲೇ ಪ್ರಕಟಿಸಿದೆ. ಮೇ 25ರಂದು ರದ್ದುಪಡಿಸಲಾದ ಶಿಫ್ಟ್‌ಗಳ ಪರೀಕ್ಷೆಗಳನ್ನು ಮೇ 27ರಿಂದ ಮುಂದಿನ ದಿನಗಳಲ್ಲಿ ಮರುನಿಗದಿಪಡಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೊಸ ಅಡ್ಮಿಟ್ ಕಾರ್ಡ್‌ಗಳನ್ನು ಎಸ್‌ಎಸ್‌ಸಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಆಯೋಗ ತಿಳಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed