Peddi Movie: ತಂಗಿ ನೋಡಿ ಅಕ್ಕನ ಸೆಲೆಕ್ಟ್ ಮಾಡಿರೋ ಕತೆ; ಪೆದ್ದಿ ಚಿತ್ರಕ್ಕೆ ಜಾನ್ವಿ ಮೊದಲ ಆಯ್ಕೆ ಅಲ್ವೇ ಅಲ್ಲ! | | ACTPnews

ತಂಗಿ ನೋಡಿ ಅಕ್ಕನ ಸೆಲೆಕ್ಟ್ ಮಾಡಿರೋ ಕತೆ; ಪೆದ್ದಿ ಚಿತ್ರಕ್ಕೆ ಜಾನ್ವಿ ಮೊದಲ ಆಯ್ಕೆ ಅಲ್ವೇ ಅಲ್ಲ!


Last Updated:

ತೆಲುಗು ಪೆದ್ದ ಚಿತ್ರಕ್ಕೆ ಜಾನ್ವಿ ಕಪೂರ್ ಮೊದಲ ಆಯ್ಕೆ ಅಲ್ವೇ ಅಲ್ಲ. ಈ ಜಾಗದಲ್ಲಿ ಮತ್ತೊಬ್ಬ ನಾಯಕಿಯ ಆಯ್ಕೆ ಆಗಿತ್ತು. ಚರ್ಚೆ ಕೂಡ ನಡೆದಿದ್ದವು. ಅದ್ಯಾರು ಹಾಗೂ ಜಾನ್ವಿ ಕಪೂರ್ ಆಯ್ಕೆ ಆಗಿರೋದು ಹೇಗೆ ಅನ್ನೋದು ಇಲ್ಲಿದೆ ಓದಿ.

ತಂಗಿ ನೋಡಿ ಅಕ್ಕನ ಸೆಲೆಕ್ಟ್ ಮಾಡಿರೋ ಕತೆ; ಪೆದ್ದಿ ಚಿತ್ರಕ್ಕೆ ಜಾನ್ವಿ ಮೊದಲ ಆಯ್ಕೆ ಅಲ್ವೇ ಅಲ್ಲ!
ತಂಗಿ ನೋಡಿ ಅಕ್ಕನ ಸೆಲೆಕ್ಟ್ ಮಾಡಿರೋ ಕತೆ; ಪೆದ್ದಿ ಚಿತ್ರಕ್ಕೆ ಜಾನ್ವಿ ಮೊದಲ ಆಯ್ಕೆ ಅಲ್ವೇ ಅಲ್ಲ!

ಪೆದ್ದಿ ಚಿತ್ರದ (Peddi Movie) ಒಂದು ವಿಷಯ ಹೆಚ್ಚು ಕುತೂಹಲ ಮೂಡಿಸುತ್ತಿದೆ. ಹೆಚ್ಚು ಕಡಿಮೆ ಈ ಚಿತ್ರಕ್ಕೆ ಒಂದೂವರೆ ಎರಡು ವರ್ಷ ಸಿನಿಮಾ ತಂಡ ಕೆಲಸ ಮಾಡಿದೆ. ಡೈರೆಕ್ಟರ್ ಬುಚಿ ಬಾಬು ಸನಾ (Buchi Babu Sana) ಈ ಚಿತ್ರವನ್ನ ಕ್ರೀಡೆ ಆಧರಿಸಿಯೇ ಮಾಡಿದ್ದಾರೆ. ರಾಮ್ ಚರಣ್ (Ram Charan) ಈ ಚಿತ್ರಕ್ಕೆ ಸಾಕಷ್ಟು ಕಷ್ಟಪಟ್ಟಿದ್ದಾರೆ. ಪೈಲ್ವಾನ್ ಪೆದ್ದಿ (Pailwan Peddi) ಹಾಗೋಕೆ ಏನೆಲ್ಲ ಬೇಕೋ ಆ ಕಸರತ್ತು ಮಾಡಿದ್ದಾರೆ. ಆದರೆ, ಈ ಪೆದ್ದಿಯ ಜೋಡಿ ಆಗಲು ನಾಯಕಿ ಆಯ್ಕೆ ವಿಚಾರವೂ ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ತಂಗಿ ನೋಡೋಕೆ ಹೋಗಿ, ಅಕ್ಕನ ಸೆಲೆಕ್ಟ್ ಮಾಡಿದ ಕತೆ ಇದಾಗಿದೆ. ಅದೇನು ಅನ್ನೋದು ಇಲ್ಲಿದೆ ಓದಿ

ಜಾನ್ವಿ ಕಪೂರ್ ಮೊದಲ ಆಯ್ಕೆ ಅಲ್ಲ….

ಪೆದ್ದಿ ಚಿತ್ರಕ್ಕೆ ಮೊದಲ ಆಯ್ಕೆ ಜಾನ್ವಿ ಕಪೂರ್ ಅಲ್ವೇ ಅಲ್ಲ. ಈ ಕತೆಗೆ ಮೊದಲು ಅಪ್ರೋಚ್ ಮಾಡಿರೋದು ಬೇರೆ ಯಾರನ್ನೂ ಅಲ್ಲ. ಅದು ಇದೇ ಕಪೂರ್ ಫ್ಯಾಮಿಲಿಯ ಮತ್ತೊಬ್ಬ ಯುವ ನಟಿ ಅನ್ನೋದು ಅಷ್ಟೆ ಸತ್ಯ.
peddi movie heroine janhvi kapoor selection unknown facts

ಜಾನ್ವಿ ಕಪೂರ್ ಮೊದಲ ಆಯ್ಕೆ ಅಲ್ಲ….

(ಚಿತ್ರ ಕೃಪೆ: ಜಾನ್ವಿ ಕಪೂರ್ ಇನ್‌ಸ್ಟಾಗ್ರಾಮ್)

ಪೆದ್ದಿ ಚಿತ್ರಕ್ಕೆ ನಾಯಕಿ ಅಂತ ಬಂದಾಗ ಮೊದಲು ಖುಷಿ ಕಪೂರ್ ಅವರನ್ನೆ ನೋಡಲಾಗಿತ್ತು. ಎಲ್ಲವೂ ಓಕೆ ಅನ್ನುವ ಮಟ್ಟಿಗೇನೆ ಚರ್ಚೆಗಳು ಆಗಿವೆ. ಆದರೆ, ಕೊನೆಗೆ ಏನ್ ಆಯಿತು ಗೊತ್ತಾ? ಹೌದು, ಖುಷಿ ಕಪೂರ್ ರಿಜೆಕ್ಟ್ ಮಾಡೋಕೆ ಒಂದು ಬಲವಾದ ಕಾರಣವು ಇದೆ ನೋಡಿ.

ಖುಷಿ ತುಂಬಾನೆ ಚಿಕ್ಕವಳು ಅನಿಸುತ್ತೆ

ಪೆದ್ದಿ ಚಿತ್ರದ ನಾಯಕ ರಾಮ್ ಚರಣ್ ಈ ಪಾತ್ರಕ್ಕಾಗಿಯೇ ಸಖತ್ ತಯಾರಿ ನಡೆಸಿದ್ದಾರೆ. ಆದರೆ, ಈ ಪಾತ್ರದ ಜೊತೆಗೆ ಖುಷಿ ಕಪೂರ್ ತುಂಬಾನೆ ಚಿಕ್ಕವಳು ಅನಿಸುತ್ತಾರೆ ಅನ್ನುವ ಮಾತು ಬಂದಿದೆ.

ಈ ಒಂದು ಚರ್ಚೆ ಸಿನಿಮಾ ತಂಡದಲ್ಲಿ ನಡೆದಿದೆ. ಕೊನೆಗೆ ಈ ಒಂದು ಪಾತ್ರಕ್ಕೆ ಬೇರೆ ಯಾರನ್ನು ನೋಡೋದು ಅಂದಾಗಲೇ ಖುಷಿ ಕಪೂರ್ ಬದಲು ಅಕ್ಕ ಜಾನ್ವಿ ಕಪೂರ್ ನೋಡಿದ್ರಾಯಿತು ಅಂತ ನೋಡಿದ್ದಾರೆ. ಅದೃಷ್ಟ ಚೆನ್ನಾಗಿತ್ತು ಅನಿಸುತ್ತದೆ. ಜಾನ್ವಿ ಕಪೂರ್ ಈ ಪಾತ್ರಕ್ಕೆ ಸೆಲೆಕ್ಟ್ ಆಗಿದ್ದಾರೆ.

ಅಚಿಯಮ್ಮ ಪಾತ್ರದಲ್ಲಿ ಜಾನ್ವಿ ಕಪೂರ್

ಪೆದ್ದಿ ಚಿತ್ರದಲ್ಲಿ ಅಚಿಯಮ್ಮ ಪಾತ್ರವನ್ನೆ ಜಾನ್ವಿ ಕಪೂರ್ ಮಾಡಿದ್ದಾರೆ. ಈ ಪಾತ್ರಕ್ಕೆ ಜಾನ್ವಿ ಕಪೂರ್ ಸ್ವತಃ ಡಬ್ ಮಾಡಿದ್ದಾರೆ.

ಈ ಒಂದು ಚಿತ್ರಕ್ಕಾಗಿಯೇ ವಿಜನಯಗರಂ ಉಪಭಾಷೆಯ್ನು ಕಲಿತುಕೊಂಡು ಡಬ್ ಮಾಡಿದ್ದಾರೆ. ಉತ್ತರ ಆಂಧ್ರದ ಸಾಂಪ್ರದಾಯಿಕ ಅರ್ಧ ಸೀರೆ ಶೈಲಿಯ ಉಡುಪು ತೊಟ್ಟು ಇಡೀ ಚಿತ್ರದಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ.

peddi movie heroine janhvi kapoor selection unknown facts

ಖುಷಿ ಕಪೂರ್

(ಚಿತ್ರ ಕೃಪೆ: ಖುಷಿ ಕಪೂರ್ ಇನ್‌ಸ್ಟಾಗ್ರಾಮ್)

ಪೆದ್ದಿ ಪಾತ್ರದಲ್ಲಿ ರಾಮ್ ಚರಣ್ ಅಬ್ಬರ

ರಾಮ್ ಚರಣ್ ಈ ಚಿತ್ರದ ಪೆದ್ದಿ ಪಾತ್ರಕ್ಕಾಗಿ ಸಾಕಷ್ಟು ಕಷ್ಟಟ್ಟಿದ್ದಾರೆ. ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಫ್ರ್ಯಾಕ್ಚರ್ ಕೂಡ ಆಗಿದೆ. ಆದರೂ ಯಾವುದನ್ನೂ ಲೆಕ್ಕಿಸದೆ ಚಿತ್ರ ಮಾಡಿಕೊಟ್ಟಿದ್ದಾರೆ.

ಗೌರ್ ನಾಯ್ಡು ಪಾತ್ರಧಾರಿ ಶಿವಣ್ಣನ ಮುಂದೆ ಶಿಷ್ಯನಾಗಿ ಅಷ್ಟೆ ಅದ್ಭುತಾಗಿಯೇ ನಟಿಸಿದ್ದಾರೆ. ಪೈಲ್ವಾನ್ ಪೆದ್ದಿ ಆಗಿಯೇ ಭೇಷ್ ಎನಿಸಿಕೊಂಡಿದ್ದಾರೆ.

ಗೌರ್ ನಾಯ್ಡು ಉಸ್ತಾದ್ ಶಿವಣ್ಣ

ಪೆದ್ದಿ ಚಿತ್ರದಲ್ಲಿ ಶಿವಣ್ಣ ಕುಸ್ತಿ ಉಸ್ತಾದ್ ಆಗಿದ್ದಾರೆ. ಕ್ರಿಕೆಟ್ ಆಡಿಕೊಂಡು ಇದ್ದ ಪೆದ್ದಿಗೆ ಕುಸ್ತಿ ಕಲಿಸಿಕೊಡುವ ಉಸ್ತಾದ್ ಆಗಿದ್ದಾರೆ. ಆಟ ಗೆಲ್ಲುವುದಲ್ಲ, ಬದುಕುವುದು ಮುಖ್ಯ ಅಂತಲೂ ಹೇಳ್ತಾರೆ.

ಗುರು ಮತ್ತು ಶಿಷ್ಯ, ಪ್ರೀತಿ ಮತ್ತು ಪ್ರೇಮ್, ಕ್ರೀಡೆ ಮತ್ತು ಹೋರಾಟ ಹೀಗೆ ಸುಮಾರು ವಿಷಯಗಳ ಈ ಚಿತ್ರ. ಜೂನ್-5 ರಂದು ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಈ ಸಿನಿಮಾ ತೆರೆ ಕಾಣುತ್ತಿದೆ.

ಬುಚಿ ಬಾಬು ಸನಾ ಇದನ್ನ ಡೈರೆಕ್ಷನ್ ಮಾಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಕೊಟ್ಟಿದ್ದಾರೆ. ರತ್ನವೇಲು ಕ್ಯಾಮರಾವರ್ಕ್ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed