SRH vs RR, IPL 2026: ಎಲಿಮಿನೇಟರ್​​ನಲ್ಲಿ ವಿಧ್ವಂಸ ಸೃಷ್ಟಿಸಿದ ವೈಭವ್! ಹೈದರಾಬಾದ್​​ಗೆ ದಾಖಲೆಯ 244 ರನ್​ಗಳ ಗುರಿ ನೀಡಿದ ರಾಜಸ್ಥಾನ್ ರಾಯಲ್ಸ್ | ಕ್ರೀಡಾ ಸುದ್ದಿ | ACTPnews

ರಾಜಸ್ಥಾನ್ ರಾಯಲ್ಸ್​


Last Updated:

ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ರಾಜಸ್ಥಾನ್ ರಾಯಲ್ಸ್​​ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್​​​ಗಳ ಬೃಹತ್ ಮೊತ್ತ ದಾಖಲಿಸಿದೆ.

ರಾಜಸ್ಥಾನ್ ರಾಯಲ್ಸ್​
ರಾಜಸ್ಥಾನ್ ರಾಯಲ್ಸ್​

ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ (IPL 2026) ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ (Rajasthan Royals) ತಂಡಗಳು ಮುಖಾಮುಖಿಯಾಗಿವೆ. ಟಾಸ್​ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಹೈದರಾಬಾದ್​​​​​ ಬೌಲಿಂಗ್​​ ಪಡೆಯನ್ನ ಧೂಳೀಪಟ ಮಾಡಿ 20 ಓವರ್​​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ. 15 ವರ್ಷದ ವೈಭವ್ ಸೂರ್ಯವಂಶಿ ಮುಲ್ಲನ್ಪುರದಲ್ಲಿ ವಿಧ್ವಂಸ ಸೃಷ್ಟಿಸಿದರು. ಕೇವಲ 29 ಎಸೆತಗಳಲ್ಲಿ 97 ರನ್​ಗಳಿಸಿ ದಾಖಲೆಯ ಮೊತ್ತಕ್ಕೆ ಕಾರಣರಾದರು. ಧ್ರುವ್ ಜುರೆಲ್ 51 ರನ್​ ಹಾಗೂ ರಿಯಾನ್ ಪರಾಗ್  26 ರನ್​ಗಳಿಸಿ ಬೃಹತ್ ಮೊತ್ತಕ್ಕೆ  ಕೊಡುಗೆ ನೀಡಿದರು.

ಸ್ಫೋಟಕ ಆರಂಭ ಪಡೆದ ರಾಯಲ್ಸ್

ಟಾಸ್​ ಸೋತು ಬ್ಯಾಟಿಂಗ್​ ಇಳಿದಿದ್ದ ರಾಜಸ್ಥಾನ್ ರಾಯಲ್ಸ್​​ಗೆ ಸೂರ್ಯವಂಶಿ ಭರ್ಜರಿ ಆರಂಭ ನೀಡಿದರು. ಪವರ್​​ ಪ್ಲೇನಲ್ಲಿ ಎಲ್ಲಾ ಬೌಲರ್​ಗಳನ್ನ ಬೆಂಡೆತ್ತಿದ 15 ವರ್ಷದ ಆಟಗಾರ 60 ರನ್​ ಚಚ್ಚಿದರು. 8ನೇ ಓವರ್​​ನ ಕೊನೆಯ ಎಸೆತದಲ್ಲಿ ಔಟ್ ಆದ ವೈಭವ್ ಕೇವಲ 3 ರನ್​ಗಳಿಂದ ಐಪಿಎಲ್​​ನ ವೇಗದ ಶತಕ ಸಿಡಿಸುವ ಅವಕಾಶ ಮಿಸ್ ಮಾಡಿಕೊಂಡರು. 29 ಎಸೆತಗಳನ್ನಾಡಿದ ವೈಭವ್ ಸೂರ್ಯವಂಶಿ 12 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳ ಸಹಿತ 97 ರನ್​ಗಳಿಸಿ ಪ್ರಫುಲ್ ಹಿಂಗೆಗೆ ವಿಕೆಟ್ ಒಪ್ಪಿಸಿದರು. ಆ ಓವರ್​​ನಲ್ಲಿ 29 ರನ್​ ಸಿಡಿಸಿದ್ದ ವೈಭವ್​ ಕೊನೆಯ ಎಸೆತದಲ್ಲೂ ಸಿಕ್ಸರ್ ಬಾರಿಸಲು ಮುಂದಾಗಿ ಸ್ಮರಣ್​​ಗೆ ಕ್ಯಾಚ್ ನೀಡಿ ಔಟ್ ಆದರು.

ಮಿಂಚಿದ ಪರಾಗ್​-ಧ್ರುವ್

ವೈಭವ್ ನಂತರ ಯಶಸ್ವಿ ಜೈಸ್ವಾಲ್ ಕೂಡ ನಿರ್ಗಮಿಸಿದರು. ಜೈಸ್ವಾಲ್ ನಿರ್ಣಾಯಕ ಪಂದ್ಯದಲ್ಲಿ ದೊಡ್ಡ ಮೊತ್ತ ಸಿಡಿಸಲು ವಿಫಲರಾದರು. ಕೇವಲ 29 ಎಸೆತಗಳಲ್ಲಿ 29 ರನ್​ಗಳಿಸಿ ಶಿವಾಂಗ್ ಕುಮಾರ್​​ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಧ್ರುವ್ ಜುರೆಲ್ ಹಾಗೂ ನಾಯಕ ರಿಯಾನ್ ಪರಾಗ್ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ತೋರಿದರು. ಈ ಜೋಡಿ 3ನೇ ವಿಕೆಟ್​​ಗೆ 55 ರನ್​ಗಳಿಸಿತು. ಜುರೆಲ್ 21 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್​ಗಳ ಸಹಿತ 50 ರನ್​​ಗಳಿಸಿದರೆ, ಪರಾಗ್ 12 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್​ಗಳ ಸಹಿತ 26 ರನ್​​ಗಳಿಸಿ ಇಬ್ಬರೂ ಪ್ರಫುಲ್​ ಹಿಂಗೆಗೆ ವಿಕೆಟ್ ಒಪ್ಪಿಸಿದರು.

ಮಧ್ಯಮ ಕ್ರಮಾಂಕ ದಯನೀಯ ವೈಫಲ್ಯ

ಈ ಜೋಡಿ ಬ್ರೇಕ್ ಆಗುತ್ತಿದ್ದಂತೆ ರಾಜಸ್ಥಾನ್ ರಾಯಲ್ಸ್ ದಿಢೀರ್ ಕುಸಿತ ಕಂಡಿತು. ದಾಸುನ್ ಶನಕಾ 3 ಎಸೆತಗಳಲ್ಲಿ 5 ರನ್​ಗಳಿಸಿ ಇಶಾನ್ ಮಾಲಿಂಗಾಗೆ ವಿಕೆಟ್ ಒಪ್ಪಿಸಿದರೆ, ಡೋನೊವನ್ ಫೆರೇರಾ 9 ಎಸೆತಗಳಲ್ಲಿ 12 ರನ್​ಗಳಿಸಿ ರನ್​ಔಟ್ ಆದರು. ಜೋಫ್ರಾ ಆರ್ಚರ್ 5 ಎಸೆತಗಳಲ್ಲಿ 4 ರನ್​​ಗಳಿಸಿ ನಿತೀಶ್ ರೆಡ್ಡಿಗೆ ವಿಕೆಟ್ ಒಪ್ಪಿಸಿದರು. ನಾಂಡ್ರೆ ಬರ್ಗರ್ 1 ರನ್​ಗಳಿಸಿ ರನ್​ಔಟ್ ಆದರು. ಜಡೇಜಾ ಅಜೇಯ 12 ರನ್​ಗಳಿಸಿದರು.

ಮತ್ತೆ ಅದೇ ತಪ್ಪು ಮಾಡಿದ ರಾಯಲ್ಸ್

ರಾಜಸ್ಥಾನ್ ರಾಯಲ್ಸ್ ತಂಡ ಕೊನೆಯ 5 ಓವರ್​​ಗಳಲ್ಲಿ ರನ್​ಗಳಿಸಲು ಪರದಾಡಿತು. 15 ಓವರ್​ಗಳ ಅಂತ್ಯಕ್ಕೆ 207 ರನ್​ಗಳಿಸಿದ್ದ ರಾಯಲ್ಸ್ ಮುಂದಿನ 5 ಓವರ್​ಗಳಲ್ಲಿ 36 ರನ್​  ಮಾತ್ರ ಗಳಿಸಿತು. 15 ಓವರ್​​ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ರಾಯಲ್ಸ್ ಕೊನೆಯ 5 ಓವರ್​ಗಳಿಗೆ 5 ವಿಕೆಟ್ ಕಳೆದುಕೊಂಡಿತು.  ವೈಭವ್ ಧ್ರುವ್ ಜುರೆಲ್​​​ ಆಟ ನೋಡಿದಾಗ 270-280 ರನ್​ ಸುಲಭವಾಗಿ ಗಳಿಸಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ರಾಯಲ್ಸ್ ದಯನೀಯ ವೈಫಲ್ಯ ಅನುಭವಿಸಿತು.

ಸನ್​ರೈಸರ್ಸ್ ಹೈದರಾಬಾದ್ ಪರ  ಪ್ರಫುಲ್ ಹಿಂಗೆ 54ಕ್ಕೆ3,  ಇಶಾನ್ ಮಾಲಿಂಗ 40ಕ್ಕೆ1,  ಶಿವಾಂಗ್ ಕುಮಾರ್ 19ಕ್ಕೆ1, ನಿತೀಶ್ ಕುಮಾರ್ ರೆಡ್ಡಿ 12ಕ್ಕೆ1 ವಿಕೆಟ್ ಪಡೆದರು. ಆದರೆ ನಾಯಕ ಪ್ಯಾಟ್ ಕಮಿನ್ಸ್​ 64 ರನ್ ಹಾಗೂ ಸಕಿಬ್ ಹುಸೇನ್ 52 ರನ್​​ ಬಿಟ್ಟುಕೊಟ್ಟು ದುಬಾರಿಯಾದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

SRH vs RR, IPL 2026: ಎಲಿಮಿನೇಟರ್​​ನಲ್ಲಿ ವಿಧ್ವಂಸ ಸೃಷ್ಟಿಸಿದ ವೈಭವ್! ಹೈದರಾಬಾದ್​​ಗೆ ದಾಖಲೆಯ 244 ರನ್​ಗಳ ಗುರಿ ನೀಡಿದ ರಾಜಸ್ಥಾನ್ ರಾಯಲ್ಸ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed