Sreeleela: ತಿಲಕ್ ವರ್ಮಾ-ಶ್ರೀಲೀಲಾ ಡೇಟಿಂಗ್ ವದಂತಿ ನಿಜಾನಾ? ನಟಿ ತಾಯಿ ಹೇಳಿದ್ದೇನು? | | ACTPnews

ನಟಿ ಶ್ರೀಲೀಲಾ ಮತ್ತು ಕ್ರಿಕೆಟಿಗ ತಿಲಕ್ ವರ್ಮಾ


Last Updated:

Sreeleela: ನಟಿ ಶ್ರೀಲೀಲಾ, ಯುವ ಕ್ರಿಕೆಟಿಗ ತಿಲಕ್ ವರ್ಮಾ (Tilak Verma) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಆದರೆ, ಈ ಊಹಾಪೋಹಗಳ ಹಿಂದಿನ ಸತ್ಯವೇನು ಎಂಬುದರ ಬಗ್ಗೆ ನಟಿ ಶ್ರೀಲೀಲಾ ತಾಯಿ ಮಾತನಾಡಿದ್ದಾರೆ.

ನಟಿ ಶ್ರೀಲೀಲಾ ಮತ್ತು ಕ್ರಿಕೆಟಿಗ ತಿಲಕ್ ವರ್ಮಾ
ನಟಿ ಶ್ರೀಲೀಲಾ ಮತ್ತು ಕ್ರಿಕೆಟಿಗ ತಿಲಕ್ ವರ್ಮಾ

ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಪ್ರತಿಭಾವಂತ ನಟಿ ಶ್ರೀಲೀಲಾ (Sreeleela) , ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಳಿಗಿಂತಲೂ ಹೆಚ್ಚಾಗಿ ತಮ್ಮ ವೈಯಕ್ತಿಕ ವಿಚಾರಗಳ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ತೆಲುಗು,ತಮಿಳು ಚಿತ್ರರಂಗದಲ್ಲಿ ಟಾಪ್ ಹೀರೋಗಳ ಜೊತೆ ನಟಿಸಿ ಹೆಸರುವಾಸಿಯಾಗಿರುವ ಈ ಸುಂದರಿ, ಈಗ ಯುವ ಕ್ರಿಕೆಟಿಗ ತಿಲಕ್ ವರ್ಮಾ (Tilak Verma) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಆದರೆ, ಈ ಊಹಾಪೋಹಗಳ ಹಿಂದಿನ ಸತ್ಯವೇನು ಎಂಬುದರ ಬಗ್ಗೆ ನಟಿ ಶ್ರೀಲೀಲಾ ತಾಯಿ ಮಾತನಾಡಿದ್ದಾರೆ.

ಶ್ರೀಲೀಲಾ-ತಿಲಕ್ ವರ್ಮಾ ಡೇಟಿಂಗ್ ವದಂತಿ ಹೇಗೆ ಪ್ರಾರಂಭವಾಯ್ತು?

ನಟಿ ಮತ್ತು ಕ್ರಿಕೆಟಿಗ ಇಬ್ಬರೂ ಒಂದೇ ಸಮಯದಲ್ಲಿ ಒಂದೇ ದೇವಸ್ಥಾನದಲ್ಲಿ ಕಾಣಿಸಿಕೊಂಡ ದಿನದಿಂದ ಈ ವದಂತಿ ವ್ಯಪಾಕವಾಗಿ ಹರಡಲು ಶುರುವಾಯಿತು. ವೈಕುಂಠ ಏಕಾದಶಿ ಸಂದರ್ಭದಲ್ಲಿ ಶ್ರೀಲೀಲಾ ಅವರು ತಮ್ಮ ತಾಯಿ ಜೊತೆ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಭೇಟಿ ನೀಡಿದ್ದರು , ಅದೇ ಸಮಯದಲ್ಲಿ ತಿಲಕ್ ವರ್ಮಾ ಕುಟುಂಬವೂ ದೇವಾಲಯಕ್ಕೆ ಭೇಟಿ ನೀಡಿದರು, ಇದನ್ನು ಕಂಡ ಹಲವರು ಇಬ್ಬರೂ ಒಟ್ಟಿಗೆ ದೇವಾಲಯಕ್ಕೆ ಬಂದಿದ್ದಾರೆ ಎಂಬ ವದಂತಿ ಶುರುವಾಗಿತ್ತು.

ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ ನೀಡಿದ ಸ್ಪಷ್ಟನೆ

ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳು ಹೆಚ್ಚಾಗುತ್ತಿದ್ದಂತೆ, ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ಈ ವದಂತಿಗಳು ಸಂಪೂರ್ಣ ಸುಳ್ಳು. ಶ್ರೀಲೀಲಾ ಮತ್ತು ತಿಲಕ್ ವರ್ಮಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಲ್ಲಿ ಯಾವುದೇ ಸತ್ಯವಿಲ್ಲ. ಇದು ಕೇವಲ ಕಲ್ಪನೆ ಮಾತುಗಳು ಎಂದು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ದೇವಾಲಯಕ್ಕೆ ಒಂದೇ ಸಮಯದಲ್ಲಿ ಹೋಗಿರುವುದು ಕೇವಲ ಕಾಕತಾಳೀಯ ಎಂದು ನಟಿ ತಾಯಿ ತಿಳಿಸಿದ್ದಾರೆ.

ಇನ್ನು ಸದ್ಯ ಯುವ ಕ್ರಿಕೆಟಿಗ ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ. ಇದೇ ವೇಳೆ ನಟಿ ಶ್ರೀಲೀಲಾ ಅವರು ತೆಲುಗು ಚಿತ್ರರಂಗದಲ್ಲಿ ಭಗವಂತ ಕೇಸರಿ, ಪುಷ್ಪ 2 ಮೊದಲಾದ ಪ್ರೋಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅವರು ಬಾಲಿವುಡ್ ನಿರ್ದೇಶಕ ಅನುರಾಗ್ ಬಸು ಅವರ ಮುಂಬರುವ ಚಿತ್ರದಲ್ಲಿ ನಟ ಕಾರ್ತಿಕ್ ಆರ್ಯನ್ ಜೊತೆ ತಮ್ಮ ಹಿಂದಿ ಚೊಚ್ಚಲ ಸಿನಿಮಾಗೆ ಸಜ್ಜಾಗಿದ್ದಾರೆ.

ಜೊತೆಗೆ ಶ್ರೀಲೀಲಾ ಇದೀಗ ಸಿನಿಮಾ ಮತ್ತು ವಿದ್ಯಾಭ್ಯಾಸ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ನೀಟ್ ಪಿಜಿ ಪರೀಕ್ಷೆಗೆ ಕೂಡಾ ಅವರು ಸಜ್ಜಾಗುತ್ತಿದ್ದಾರೆ ಎಂದು ನಟಿ ಶ್ರೀ ಲೀಲಾ ಅವರ ತಾಯಿ ತಿಳಿಸಿದ್ದಾರೆ. ಜೊತೆಗೆ ವೈಯಕ್ತಿಕ ವಿಷಯಗಳ ಬಗ್ಗೆ ಯೋಚಿಸಲು ಇನ್ನೂ 5–6 ವರ್ಷಗಳ ಕಾಲಾವಕಾಶವಿದೆ. ಈಗ ಅವರ ಗಮನ ಸಂಪೂರ್ಣವಾಗಿ ಅಧ್ಯಯನ ಮತ್ತು ವೃತ್ತಿಜೀವನದ ಮೇಲೆ ಇದೆ ಎಂದು ಸ್ವರ್ಣಲತಾ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports