Sports Awards: ಏಕಲವ್ಯ ಹಾಗೂ ಕ್ರೀಡಾ ರತ್ನ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ, ಜುಲೈ 31 ಕೊನೆ ದಿನ! | | ACTPnews

ಕ್ರೀಡಾ ಪ್ರಶಸ್ತಿ


Last Updated:

ರಾಜ್ಯ/ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಶಸ್ತಿ, ಪ್ರೋತ್ಸಾಹಧನ, ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ. ಜುಲೈ 31 ಕೊನೆಯ ದಿನ.

ಕ್ರೀಡಾ ಪ್ರಶಸ್ತಿ
ಕ್ರೀಡಾ ಪ್ರಶಸ್ತಿ

ಚಿತ್ರದುರ್ಗ: ಯುವ ಕ್ರೀಡಾಪಟುಗಳ (Athletes) ಗಮನಕ್ಕೆ, ನೀವೇನಾದರೂ ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ (Talented) ಕ್ರೀಡಾಪಟುವೇ? ಹಾಗಾದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಿಮ್ಮ ಸಾಧನೆಗೆ ತಕ್ಕ ಗೌರವ ಹಾಗೂ ಹಣಕಾಸಿನ ನೆರವು ನೀಡಲು ಮುಂದೆ ಬಂದಿದೆ. 2026-27ನೇ ಸಾಲಿನ ವಿವಿಧ ಕ್ರೀಡಾ ಪ್ರಶಸ್ತಿಗಳು (Award), ಪ್ರೋತ್ಸಾಹಧನ ಹಾಗೂ ವಿದ್ಯಾರ್ಥಿವೇತನಕ್ಕಾಗಿ ಈಗ ಅಧಿಕೃತವಾಗಿ ಅರ್ಜಿ ಆಹ್ವಾನಿಸಲಾಗಿದೆ. ಆದರೆ ನೆನಪಿಡಿ, ಅರ್ಜಿ (Application) ಸಲ್ಲಿಸಲು ಇರುವುದು ಕೆಲವೇ ದಿನಗಳು, ಜುಲೈ 31 ಕೊನೆಯ ಗಡುವು.

ಯಾವೆಲ್ಲಾ ಪ್ರಶಸ್ತಿ ಹಾಗೂ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಬಹುದು?

ಈ ವರ್ಷದ ವಿವಿಧ ಕ್ರೀಡಾ ಕಾರ್ಯಕ್ರಮಗಳಡಿ ಈ ಕೆಳಗಿನ ಪ್ರಶಸ್ತಿ ಮತ್ತು ನಗದು ಪುರಸ್ಕಾರಗಳನ್ನು ಪಡೆದುಕೊಳ್ಳಲು ಅವಕಾಶವಿದೆ.

2025ನೇ ಸಾಲಿನ ಪ್ರಶಸ್ತಿಗಳು: ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಹಾಗೂ ಕರ್ನಾಟಕ ಕ್ರೀಡಾ ಪೆÇೀಷಕ ಪ್ರಶಸ್ತಿಗಳು.

ನಗದು ಪುರಸ್ಕಾರಗಳು ಹಾಗೂ 2025-26ನೇ ಸಾಲಿನ ಕ್ರೀಡಾ ವಿದ್ಯಾರ್ಥಿ ವೇತನ.

2026-27ನೇ ಸಾಲಿನ ಸೌಲಭ್ಯಗಳು: ‘ಗುರಿ-ಒಲಂಪಿಕ್’ ಪದಕ ಹಾಗೂ ಶೈಕ್ಷಣಿಕ ಶುಲ್ಕ ಮರುಪಾವತಿ ಸೌಲಭ್ಯಗಳು.

ಸಾಧನೆ ಮಾಡಿದ್ದರೂ ಸರಿಯಾದ ಪ್ರೋತ್ಸಾಹ ಸಿಗದೇ ಕೊರಗುತ್ತಿರುವ ಕ್ರೀಡಾಪಟುಗಳಿಗೆ ಸರ್ಕಾರದ ಈ ಯೋಜನೆ ಒಂದು ಸುವರ್ಣಾವಕಾಶವಾಗಿದೆ.

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಆಸಕ್ತ ಕ್ರೀಡಾಪಟುಗಳು ಯಾವುದೇ ಕಚೌ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಸರ್ಕಾರದ ಅಧಿಕೃತ ಸೇವಾಸಿಂಧು ಜಾಲತಾಣದ ಮುಖಾಂತರ ಮನೆಯಲ್ಲೇ ಕುಳಿತು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಕೃತ ವೆಬ್‍ಸೈಟ್: https://sevasindhu.karnataka.gov.in

ಅರ್ಜಿ ಸಲ್ಲಿಸಲು ಕಡೇ ದಿನಾಂಕ: ಜುಲೈ 31.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಯಾವುದೇ ರೀತಿಯ ತಾಂತ್ರಿಕ ಗೊಂದಲಗಳು ಅಥವಾ ಹೆಚ್ಚಿನ ಮಾಹಿತಿಗಾಗಿ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು. ಅಥವಾ 08194-235635 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed