Last Updated:
ಕರಾವಳಿ ಚಿತ್ರಕ್ಕೆ ಒಳ್ಳೆ ಅಭಿಪ್ರಾಯಗಳೇ ಬರ್ತಿವೆ. ಪ್ರಜ್ವಲ್ ದೇವರಾಜ್ ಅವರಿಗೆ ಬಿಗ್ ಬ್ರೇಕ್ ಪಕ್ಕಾ ಅಂತಲೂ ಹೇಳ್ತಿದ್ದಾರೆ. ಈ ಸಿನಿಮಾ ನೋಡಿದ ಮೈಸೂರು ಹಾಗೂ ದಾವಣಗೆರೆ ಜನ ಹೇಳಿದ್ದೇನು ಅನ್ನೋದು ಇಲ್ಲಿದೆ ಓದಿ.
ಕರಾವಳಿ ಚಿತ್ರ (Karavali Movie) ಈ ವರ್ಷದ ಬಿಗ್ ಹಿಟ್ (Big Hit) ಅನ್ನುವ ಅಭಿಪ್ರಾಯ ಬರ್ತಿದೆ. ಇದನ್ನ ಚಿತ್ರ ನೋಡಿದ ಜನರೇ ಹೇಳುತ್ತಿದ್ದಾರೆ. ಪ್ರಜ್ವಲ್ ದೇವರಾಜ್ (Prajwal Devaraj) ಅವರಿಗೆ ಇದು ಕಮ್ಬ್ಯಾಕ್ ಸಿನಿಮಾ (Comeback Movie) ಅಂತಲೂ ಹೇಳುತ್ತಿದ್ದಾರೆ. ಚಿತ್ರದಲ್ಲಿ ಇವರ ಅಭಿನಯಕ್ಕೂ ಒಳ್ಳೆ ಸ್ಕೋರ್ ಬಂದಿದೆ. ಮೈಸೂರು ಮತ್ತು ದಾವಣಗೆರೆಯ ಜನ ಈ ಚಿತ್ರವನ್ನ ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ಸೆಕೆಂಡ್ ಹಾಫ್ ಹೇಗಿದೆ ಅಂತಲೂ ಹೇಳಿದ್ದಾರೆ. ಮಹಾಬಲನೋ, ಮಹಾವೀರನೋ ಅನ್ನೋ ಹಾಗೆ ಇವರಿಗೆ ಫೀಲ್ ಕೂಡ ಆಗಿದೆ. ಈ ಚಿತ್ರದ ಸದ್ಯದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಪ್ರಜ್ವಲ್ ಕಮ್ಬ್ಯಾಕ್ ಸಿನಿಮಾ
ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯಕ್ಕೂ ಒಳ್ಳೆ ಓಪನಿಯನ್ ಬರ್ತಿವೆ. ಮೈಸೂರಿನ ಜನ ಈ ಚಿತ್ರವನ್ನ ನೋಡಿದ್ದಾರೆ. ಪ್ರಜ್ವಲ್ ಅಭಿನಯವನ್ನು ಕೊಂಡಾಡಿದ್ದಾರೆ.
ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ಅದ್ಭುತವಾಗಿಯೇ ನಟಿಸಿದ್ದಾರೆ. ಈ ಕರಾವಳಿ ಚಿತ್ರ ಇವರಿಗೆ ಕಮ್ಬ್ಯಾಕ್ ಚಿತ್ರವೇ ಆಗಿದೆ. ಇವರಿಗೆ ಇದು ಒಳ್ಳೆ ಹೆಸರು ತಂದುಕೊಡುತ್ತದೆ ಅಂತಲೂ ಮೈಸೂರಿನ ಜನ ಹೇಳಿದ್ದಾರೆ.
ಚಿತ್ರದ ಸೆಕೆಂಡ್ ಹಾಫ್ ತುಂಬಾನೆ ಚೆನ್ನಾಗಿದೆ. ಈ ಒಂದು ಚಿತ್ರದಲ್ಲಿ ಕಂಬಳವನ್ನ ತುಂಬಾನೆ ಚೆನ್ನಾಗಿ ತೋರಿಸಿದ್ದಾರೆ. ಮೈಸೂರಿನಲ್ಲಿ ಮಂಗಳೂರು ನೋಡಿದ್ಹಾಗೆ ಆಯಿತು ಅಂತಲೂ ಹೇಳಿರೋರು ಇದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಕಂಟೆಂಟ್ ಇರೋದೇ ಇಲ್ಲ. ಏನ್ ಸಿನಿಮಾ ಮಾಡ್ತಾರೋ ಏನೋ? ಹೀಗೆ ಮೂಗುಮುರಿಯೋರೇ ಹೆಚ್ಚು. ಆದರೆ, ಕರಾವಳಿ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದೆ.
ಜುಲೈ-24 ರಂದು ರಿಲೀಸ್
ಕನ್ನಡ ಚಿತ್ರಗಳಲ್ಲಿ ಕಂಟೆಂಟ್ ಇಲ್ಲ ಅಂತ ಹೇಳಿದವರಿಗೆ ಈ ಚಿತ್ರ ಉತ್ತರ ಕೊಡುತ್ತಿದೆ ಅಂತ ಕೆಲವರು ಹೇಳಿ ಹೋಗಿದ್ದಾರೆ. ಮೈಸೂರು ಅಲ್ಲದೆ ದಾವಣಗೆರೆಯಲ್ಲೂ ಕರಾವಳಿ ಚಿತ್ರದ ಪ್ರೀಮಿಯರ್ ಶೋ ಆಗಿದೆ.
ದಾವಣಗೆರೆ ಜನ ಈ ಕರಾವಳಿ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಸೂಪರ್ ಚಿತ್ರ ಅಂತಲೂ ಬಣ್ಣಿಸಿದ್ದಾರೆ. ಈ ಚಿತ್ರದಲ್ಲಿ ಒಬ್ರಲ್ಲ ಎಲ್ಲರೂ ಅದ್ಭುತವಾಗಿಯೇ ನಟಿಸಿದ್ದಾರೆ.
ಕತೆ, ಕ್ಯಾಮರಾವರ್ಕ್, ಕಲಾವಿದರು ಹೀಗೆ ಎಲ್ಲವೂ ಚೆನ್ನಾಗಿದೆ ಅಂತಲೇ ದಾವಣಗೆರೆ ಜನ ಹೇಳಿಕೊಂಡಿದ್ದಾರೆ. ಡೈರೆಕ್ಟರ್ ಗುರುದತ್ತ ಗಾಣಿಗ ಅವರ ಕೆಲಸವನ್ನು ಅನೇಕ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ ಅಂತಲೂ ಹೇಳಬಹುದು.
ಕರಾವಳಿ ಕಮಾಲ್
ಕರಾವಳಿ ಚಿತ್ರ ಜುಲೈ-24 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಈ ಸಿನಿಮಾ ತೆರೆ ಕಾಣುತ್ತಿದೆ. ಗುರುದತ್ತ ಗಾಣಿಗ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಸಚಿನ್ ಬಸ್ರೂರು ಮ್ಯೂಸಿಕ್ ಮಾಡಿದ್ದಾರೆ. ಈ ಚಿತ್ರದ ನಿರೀಕ್ಷೆ ಇದ್ದೇ ಇತ್ತು. ಆದರೆ, ಪ್ರೀಮಿಯರ್ ಶೋದಲ್ಲಿ ಇದಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಹಾಗಾಗಿಯೇ ಬಾಕ್ಸ್ ಆಫೀಸ್ ಅಲ್ಲಿ ಇದು ಭಾರೀ ಕಮಾಲ್ ಮಾಡುವಂತೆನೂ ಕಾಣಿಸುತ್ತಿದೆ.
ಈ ಚಿತ್ರದಲ್ಲಿರೋ ಕತೆ ವಿಶೇಷವಾಗಿಯೇ ಇದೆ. ಇಲ್ಲಿವರೆಗೂ ಎಲ್ಲೂ ಬಂದಿಲ್ಲ ಅಂತ ಚಿತ್ರದ ಡೈರೆಕ್ಟರ್ ಗುರುದತ್ತ ಗಾಣಿಗ ಹೇಳಿದ್ದಾರೆ. ಚಿತ್ರ ನೋಡಿದವರು ಕೂಡ ಅದನ್ನೆ ಹೇಳುತ್ತಿದ್ದಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka














