Last Updated:
ಅನಾರೋಗ್ಯದ ಹೊರತಾಗಿಯೂ, ಅಣ್ಣಾ ಹಜಾರೆ ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ನೀಡಲು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಮಹಾರಾಷ್ಟ್ರ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi Protest) ಕಳೆದ ಕೆಲ ದಿನಗಳಿಂದ ಶುರುವಾಗಿರುವ ನೀಟ್ (NEET) ಹೋರಾಟ ಕ್ಷಣ ಕ್ಷಣಕ್ಕೂ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ದೆಹಲಿ ಮಾತ್ರವಲ್ಲ ಇಡೀ ದೇಶಾದ್ಯಂತ ನೀಟ್ ಅಕ್ರಮದ ಕಿಚ್ಚು ಹಬ್ಬಿದೆ. ಸಂಸತ್ ಒಳಗೆ ವಿಪಕ್ಷಗಳು ಹೋರಾಟ ನಡೆಸುತ್ತಿದ್ದರೆ, ಹೊರಗೆ ವಿದ್ಯಾರ್ಥಿಗಳು (Students) ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಂಗಾಮಾ ಸೃಷ್ಟಿಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ಹೊರತು ಹೋರಾಟ ನಿಲ್ಲಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಈ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಲು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ (Anna Hazare) ಅವರು ಗುರುವಾರ ಮಹಾರಾಷ್ಟ್ರದ (Maharashtra) ಅಹಲ್ಯಾನಗರದಲ್ಲಿ 2 ಗಂಟೆಗಳ ಕಾಲ ‘ಮೌನ ಪ್ರತಿಭಟನೆ’ ನಡೆಸಿದ್ದಾರೆ.
2011ರಲ್ಲಿ ಜನ ಲೋಕಪಾಲ ಬಿಲ್ ಜಾರಿಗೊಳಿಸಬೇಕೆಂದು ಆಗ್ರಹಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ನಡೆಸಿ ಇಡೀ ದೇಶದ ಗಮನ ಸೆಳೆದಿದ್ದರು. ಇದೀಗ ಅನಾರೋಗ್ಯದ ಹೊರತಾಗಿಯೂ, ಅಣ್ಣಾ ಹಜಾರೆ ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ನೀಡಲು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಅಣ್ಣಾ ಹಜಾರೆ ಅವರು ಇಂದು ಅಹಲ್ಯಾನಗರದ ಮಹಾತ್ಮ ಪ್ರತಿಮೆಯ ಬಳಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೂ ಮೌನ ಪ್ರತಿಭಟನೆ ನಡೆಸಿದರು ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.
ಪ್ರಧಾನಿ ಮೋದಿ ಅವರ ಪೋಸ್ಟ್ ಬೆನ್ನಲ್ಲೇ ಫಾಸ್ಟ್ಟ್ರ್ಯಾಕ್ ಕೋರ್ಟ್ಗಳ ಸ್ಥಾಪನೆ ಆಗಿವೆ. 4 ರಾಜ್ಯಗಳಲ್ಲಿ 5 ಫಾಸ್ಟ್ಟ್ರ್ಯಾಕ್ ಕೋರ್ಟ್ ಪೀಠಗಳ ಸ್ಥಾಪನೆ ಆಗಿವೆ. ಬಾಂಬೆ ಹೈಕೋರ್ಟ್ನಲ್ಲಿ 2 ಪೀಠಗಳು, ಭೂಪಾಲ್, ಕೋಲ್ಕತ್ತಾ, ದೆಹಲಿ ಹೈಕೋರ್ಟ್ಗಳಲ್ಲಿ ತಲಾ ಒಂದು ಪೀಠ ರಚನೆ ಆಗಿದೆ. ಮುಂದಿನ ವಾರವೇ ಕೋರ್ಟ್ಗೆ ಸಿಬಿಐ ಚಾರ್ಜ್ಶೀಟ್ ಸಲ್ಲಿಸಲಿದೆ.














