Last Updated:
ಸ್ಪೈಡರ್ ಮ್ಯಾನ್ ಚಿತ್ರದ ಲಿಪ್ ಲಾಕ್ ಸೀನ್ ಕಟ್ ಆಗಿದೆ. 8 ಸೆಕೆಂಡ್ನ ಈ ದೃಶ್ಯಕ್ಕೆ ಸರಿಯಾಗಿಯೇ ಕತ್ತರಿ ಬಿದ್ದಿದೆ. ಇದರ ಹೊರತಾಗಿ ಮೂರು ಕಡೆಗೆ ಮ್ಯೂಟ್ ಮಾಡಲು ಭಾರತದ CBFC ಹೇಳಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಹಾಲಿವುಡ್ನ (Hollywood) ಸ್ಪೈಡರ್ ಮ್ಯಾನ್ ಬ್ರ್ಯಾಂಡ್ ನ್ಯೂ ಡೇ ಚಿತ್ರಕ್ಕೆ (Spider Man Brand New Day Movie) ಸೆನ್ಸಾರ್ ಆಗಿದೆ. ಭಾರತದ ಸೆನ್ಸಾರ್ ಬೋರ್ಡ್ ಇದಕ್ಕೆ U/A 13+ ಅಂತ ಪ್ರಮಾಣ ಪತ್ರ ಕೊಟ್ಟಿದೆ. ಚಿತ್ರದಲ್ಲಿದ್ದ 8 ಸೆಕೆಂಡ್ನ ಲಿಪ್ ಲಾಕ್ (Lip-Lock) ಸೀನ್ಗೆ ಕತ್ತರಿ ಹಾಕಿದೆ. ಕೆಲವು ಮಾತುಗಳನ್ನ ಮ್ಯೂಟ್ ಮಾಡಲು ಹೇಳಿದೆ. ಈ ಎಲ್ಲದರ ನಡುವೇನು ಈ ಚಿತ್ರ ಒಂದು ದಿನ ಮೊದಲೇ ಭಾರತದಲ್ಲಿ ರಿಲೀಸ್ (Release) ಆಗುತ್ತಿದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ ಚಿತ್ರದಲ್ಲಿ ಒಂದು ಸುದೀರ್ಘ ಚುಂಬನದ ದೃಶ್ಯ ಇತ್ತು. 8 ಸೆಕೆಂಡ್ನ ಈ ದೃಶ್ಯಕ್ಕೆ ಭಾರತದ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (CBFC) ಕತ್ತರಿ ಹಾಕಿದೆ.
ಕಿಸ್ಸಿಂಗ್ ಸೀನ್ಸ್ ಕಟ್
(ಚಿತ್ರ ಕೃಪೆ: ಟಾಮ್ ಹಾಲೆಂಡ್ ಇನ್ಸ್ಟಾಗ್ರಾಮ್)
ಇದಲ್ಲದೆ ಈ ಚಿತ್ರದಲ್ಲಿದ್ದ ಆಕ್ಷೇಪಾರ್ಹ ಪದಗಳನ್ನ ಮ್ಯೂಟ್ ಮಾಡಲು ಹೇಳಿದೆ. U/A 13+ ಅಂತಲೇ ಪ್ರಮಾಣ ಪತ್ರ ಕೊಟ್ಟಿದೆ. 13+ ಯಾಕಂದ್ರೆ 13 ವರ್ಷದ ಮೇಲ್ಪಟ್ಟವರು ಪೋಷಕರ ಮಾರ್ಗದರ್ಶನದಲ್ಲಿ ಇದನ್ನ ನೋಡ್ಬೇಕು ಅನ್ನೋದೇ ಆಗಿದೆ.
ಈ ಚಿತ್ರದ ಮೊದಲಾರ್ಧದಲ್ಲಿ ಒಂದು ಕಡೆಗೆ ಆಕ್ಷೇಪಾರ್ಹ ಪದ ಬರುತ್ತದೆ. ದ್ವಿತೀಯಾರ್ದದಲ್ಲಿ ಎರಡು ಕಡೆಗೆ ಆಕ್ಷೇಪಾರ್ಹ ಪದಗಳು ಬರುತ್ತವೆ. ಈ ಪದಗಳನ್ನ ಒಂದು ಮ್ಯೂಟ್ ಮಾಡ್ಬೇಕು ಇಲ್ಲವೆ ತೆಗೆದು ಹಾಕಲು CBFC ಹೇಳಿದೆ.
ಇನ್ನು ಈ ಚಿತ್ರ ಒಂದು ದಿನ ಮುಂಚೇನೆ ರಿಲೀಸ್ ಆಗುತ್ತಿದೆ. ಅಂದ್ರೆ ಈ ಚಿತ್ರ ವಿಶ್ವದಾದ್ಯಂತ ಜುಲೈ-31ರಂದು ರಿಲೀಸ್ ಆಗುತ್ತಿದೆ. ಆದರೆ, ಭಾರತದಲ್ಲಿ ಈ ಸಿನಿಮಾ ಜುಲೈ-30 ರಂದು ತೆರೆ ಕಾಣುತ್ತಿದೆ.
ಈ ಚಿತ್ರದಲ್ಲಿ ಸ್ಪೈಡರ್ ಮ್ಯಾನ್ ಪಾತ್ರವನ್ನ ನಟ ಟಾಮ್ ಹಾಲೆಂಡ್ ಮಾಡಿದ್ದಾರೆ. ನಾಯಕಿ ಆಗಿ ಜೆಂಡಾಯಾ ಅಭಿನಯಿಸಿದ್ದಾರೆ. ಈ ಚಿತ್ರವನ್ನ ಡೆಸ್ಟಿನ್ ಡೇನಿಯಲ್ ಕ್ರೆಟ್ಟನ್ ಡೈರೆಕ್ಷನ್ ಮಾಡಿದ್ದಾರೆ.
ಮುಂದುವರೆದ ಕತೆ
(ಚಿತ್ರ ಕೃಪೆ: ಟಾಮ್ ಹಾಲೆಂಡ್ ಇನ್ಸ್ಟಾಗ್ರಾಮ್)
ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ ಚಿತ್ರದ ನಾಯಕ ಪೀಟರ್ ಪಾರ್ಕರ್ ಕತೆ ಇಲ್ಲಿ ಮುಂದುವರೆದಿದೆ. ಈ ಹಿಂದೆ ಬಂದ ಸ್ಪೈಡರ್ಮ್ಯಾನ್: ನೋ ವೇ ಹೋಮ್ ಚಿತ್ರದ ಕತೆನೇ ಈ ಚಿತ್ರದಲ್ಲಿ ಮುಂದುವರೆದಿದೆ.
ಈ ಚಿತ್ರದಲ್ಲಿ ಪೀಟರ್ ಪಾರ್ಕರ್ ಅಂದ್ರೆ ಸ್ಪೈಡರ್ಮ್ಯಾನ್ ಕತೆ ಮತ್ತಷ್ಟು ಇಂಟ್ರಸ್ಟಿಂಗ್ ಆಗಿಯೇ ಇದ್ದಂತೆ ಇದೆ. ಅದು ಚಿತ್ರ ಟ್ರೈಲರ್, ಟೀಸರ್ ಅಲ್ಲೂ ತಿಳಿಯುತ್ತದೆ. ಇನ್ನುಳಿದಂತೆ ಭಾರತದಲ್ಲಿ ಈ ಚಿತ್ರಕ್ಕೆ ಸರಿಯಾಗಿಯೇ ಸೆನ್ಸಾರ್ ಆಗಿದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka














