Last Updated:
ಇತ್ತೀಚೆಗೆ ಸೌರವ್ ಗಂಗೂಲಿ ಅವರಿಗೆ ಜೀವ ಬೆದರಿಕೆ ಕರೆಗಳು ಹಾಗೂ ಪತ್ರಗಳು ಬಂದಿವೆ. ಈ ವಿಷಯದ ಬಗ್ಗೆ ಗಂಗೂಲಿ ಮೊದಲ ಬಾರಿಗೆ ಮಾತನಾಡಿದ್ದಾರೆ.
ಕೆಲವು ದಿನಗಳ ಹಿಂದೆ ಭಾರತ(India)ದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ(Sourav Ganguly)ಗೆ ಜೀವ ಬೆದರಿಕೆ (Threat) ಬಂದಿತ್ತು. ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (CAB) ಕಚೇರಿಗೆ ಕೊರಿಯರ್ ಮೂಲಕ ಒಂದು ಪತ್ರ ಬಂದಿತ್ತು. ಆ ಪತ್ರದಲ್ಲಿ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ (Dona Ganguly) ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ಈ ವಿಷಯದ ಬಗ್ಗೆ ಸೌರವ್ ಮೊದಲ ಬಾರಿಗೆ ಮಾತನಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.














