Sonu Srinivas Gowda: ಹುಡುಗರ ಬಗ್ಗೆ ಕಮೆಂಟ್ ಮಾಡಿ ಪೇಚಿಗೆ ಬಿದ್ರಾ ಸೋನು ಗೌಡ? ಏನಿದು ವಿವಾದ? | | ACTPnews

"ಹುಡುಗರೆಲ್ಲ ಕಳ್ಳನನ್ನ ಮಕ್ಕಳು"; ಸೋನು ಶ್ರೀನಿವಾಸ್ ಗೌಡ ಹಿಂಗ್ ಹೇಳಿದ್ಯಾಕೆ?


Last Updated:

ಸೋನು ಶ್ರೀನಿವಾಸ್ ಗೌಡ ಅವರು “ಹುಡುಗರೆಲ್ಲ ಕಳ್ಳನನ್ನ ಮಕ್ಕಳು” ಅಂತ ತಮಾಷೆ ಆಗಿಯೇ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಆದರೆ, ಇದು ವೈರಲ್ ಆಗಿದೆ. ಇದರಿಂದ ಸೋನು ಸಾಕಷ್ಟು ಬ್ಯಾಡ್ ಕಾಮೆಂಟ್‌ಗಳನ್ನೂ ಎದುರಿಸಿದ್ದಾರೆ. ಇದರ ವಿರುದ್ಧ ಈಗ ಪೊಲೀಸ್ ಸ್ಟೇಷನ್ ಮೆಟ್ಟಿಲೂ ಏರಿದ್ದಾರೆ. ಇದರ ಒಟ್ಟು ಚಿತ್ರಣ ಇಲ್ಲಿದೆ ಓದಿ.

"ಹುಡುಗರೆಲ್ಲ ಕಳ್ಳನನ್ನ ಮಕ್ಕಳು"; ಸೋನು ಶ್ರೀನಿವಾಸ್ ಗೌಡ ಹಿಂಗ್ ಹೇಳಿದ್ಯಾಕೆ?
“ಹುಡುಗರೆಲ್ಲ ಕಳ್ಳನನ್ನ ಮಕ್ಕಳು”; ಸೋನು ಶ್ರೀನಿವಾಸ್ ಗೌಡ ಹಿಂಗ್ ಹೇಳಿದ್ಯಾಕೆ?

ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಹೇಳಿದ ಮಾತು ವೈರಲ್. (Viral) ತಮಗೆ ಆದ ಕೆಟ್ಟ ಅನುಭವದ ಬಗ್ಗೆ ಹೇಳುವ ಭರದಲ್ಲಿಯೇ “ಹುಡುಗರೆಲ್ಲ ಕಳ್ಳನನ್ನ ಮಕ್ಕಳು” ಅಂತಲೇ ಹೇಳಿದ್ದಾರೆ. ಮುಂದುವರೆದು ಕೆಲವೊಮ್ಮೆ ಹುಡುಗ (Boys) ಸರಿ ಇದ್ದರೆ, ಹುಡುಗಿ ಸರಿ ಇರಲ್ಲ. ಹುಡುಗಿ ಸರಿ ಇದ್ದರೆ ಹುಡುಗ ಸರಿ ಇರಲ್ಲ. ಆದರೆ,ಇಬ್ಬರು ಸರಿ ಇದ್ದರೆ ದೇವರೆ ಸರಿ ಇರಲ್ಲ ಅಂತಲೂ ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ. ಆದರೆ, ಇಲ್ಲಿ ಹುಡುಗರೆಲ್ಲ ಕಳ್ಳನನ್ನ ಮಕ್ಕಳು ಅಂತ ಹೇಳಿರೋದೇ ಹೈಲೈಟ್ ಆಗಿದೆ. ಇದರಿಂದ ಸೋನು ಗೌಡ (Sonu Srinivas Gowda) ಕ್ಷಮೆ ಕೇಳ್ಬೇಕು ಅಂತಲೆ ಕೆಲವರು ಹೇಳುತ್ತಿದ್ದಾರೆ. ಆದರೆ, ಸೋನು ಶ್ರೀನಿವಾಸ್ ಗೌಡ ಇದಕ್ಕೆ ನಾನು ಕ್ಷಮೆ ಕೇಳುವುದಿಲ್ಲ. ತಮಾಷೆ ಆಗಿಯೇ ಹೇಳಿದ್ದೇನೆ. ನಾನ್ ಯಾಕೆ ಕ್ಷಮೆ ಕೇಳ್ಬೇಕು ಅಂತಲೆ ಹೇಳಿದ್ದಾರೆ. ಈ ವಿವಾದದ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಹುಡುಗರೆಲ್ಲ ಕಳ್ಳ ನನ್ನ ಮಕ್ಕಳು..

ಮೊನ್ನೆ ಕೇಕೆ ಚಿತ್ರದ ಸಾಂಗ್ ರಿಲೀಸ್ ಇವೆಂಟ್ ಇತ್ತು. ಗುಂಟೂರು ಅಮ್ಮಾಯಿ ಅನ್ನುವ ಈ ಹಾಡಿನಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಅಭಿನಯಿಸಿದದಾರೆ. ಇದರ ರಿಲೀಸ್ ಬಳಿಕ ಸೋನು ಶ್ರೀನಿವಾಸ್ ಗೌಡ ವಿಶ್ವವಾಣಿ ಟಿವಿ ಸ್ಪಷಲ್‌ಗೂ ಮಾತನಾಡಿದ್ದಾರೆ.
Sonu Srinivas Gowda statement on men got viral

ನಾನು ಕ್ಷಮೆ ಕೇಳೋದೇ ಇಲ್ಲ

(ಚಿತ್ರ ಕೃಪೆ: ಸೋನು ಶ್ರೀನಿವಾಸ್ ಗೌಡ ಇನ್‌ಸ್ಟಾಗ್ರಾಮ್)

ಈ ಸಮಯದಲ್ಲಿಯೇ ನಿರೂಪಕ ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಕೊನೆ ಕೊನೆಗೆ ಕೇಳಿದ ಪ್ರಶ್ನೆಗಳಲ್ಲಿ ರಿಲೇಷನ್‌ಶಿಪ್ ಬಗ್ಗೆ ಮೋಸ ಮಾಡುವವರಿಗೆ ಏನ್ ಹೇಳ್ತೀರಾ ಅಂತಲೇ ಕೇಳ್ತಾರೆ. ಈ ಪ್ರಶ್ನೆಗೆ ಸೋನು ಶ್ರೀನಿವಾಸ್ ಗೌಡ ಹೀಗೆ ಹೇಳ್ತಾರೆ.

ಹುಡುಗಿಯರು ಅಲರ್ಟ್ ಆಗಿರ್ಬೇಕು

ಎಲ್ಲರೂ ಒಳ್ಳೆಯವರೆ ಇರ್ತಾರೆ ಅಂತ ಹೇಳೋಕೆ ಆಗೋದಿಲ್ಲ. ಹುಡುಗಿಯರು ಅಲರ್ಟ್ ಆಗಿರಬೇಕು. ಹುಡುಗರೆಲ್ಲ ಕಳ್ಳನನ್ನಮಕ್ಕಳೆ ಆಗಿರ್ತಾರೆ. ನಿಮ್ಮನ್ನೂ ಸೇರಿಸಿ (ಆ್ಯಂಕರ್) ಯೇ ಅಂತಲೇ ಸೋನು ಶ್ರೀನಿವಾಸ್ ಗೌಡ ಹೇಳ್ತಾರೆ.

ಮುಂದುವರೆದು ಹೀಗೆ ಹೇಳ್ತಾ ಹೋಗ್ತಾರೆ. ಹುಡುಗರು ಒಳ್ಳೆಯವರಿದ್ದರೆ ಹುಡುಗಿಯರು ಸರಿ ಇರಲ್ಲ. ಹುಡುಗಿ ಸರಿ ಇದ್ದರೆ, ಹುಡುಗರು ಸರಿ ಇರಲ್ಲ. ಹುಡುಗ ಮತ್ತು ಹುಡುಗಿ ಇಬ್ಬರೂ ಸರಿ ಇದ್ದರೆ ಆ ದೇವರು ಸರಿ ಇರಲ್ಲ ಅಂತಲೇ ಸೋನು ಗೌಡ ಹೇಳಿದ್ದಾರೆ.

Sonu Srinivas Gowda statement on men got viral

“ಹುಡುಗರೆಲ್ಲ ಕಳ್ಳನನ್ನ ಮಕ್ಕಳು”; ಸೋನು ಶ್ರೀನಿವಾಸ್ ಗೌಡ ಹಿಂಗ್ ಹೇಳಿದ್ಯಾಕೆ? (ಚಿತ್ರ ಕೃಪೆ: ಸೋನು ಶ್ರೀನಿವಾಸ್ ಗೌಡ ಇನ್‌ಸ್ಟಾಗ್ರಾಮ್)
ನಾನು ಕ್ಷಮೆ ಕೇಳೋದೇ ಇಲ್ಲ

ಇದರಲ್ಲಿ ಹುಡುಗರೆಲ್ಲ ಕಳ್ಳನನ್ನ ಮಕ್ಕಳು ಅಂತ ಹೇಳಿರೋದು ವೈಲರ್ ಆಗಿದೆ. ಆದರೆ, ಈ ವಿಚಾರವಾಗಿ ಕ್ಷಮೆ ಕೇಳ್ಬೇಕು ಅನ್ನೋದು ಕೇಳಿ ಬರ್ತಿದೆ.

ಹಾಗಾಗಿಯೇ ಸ್ಟೇಷನ್ ಮೆಟ್ಟಿಲೇರಿದ್ದೇನೆ ಅಂತ ಸೋನು ಶ್ರೀನಿವಾಸ್ ಗೌಡ ಟಿವಿ-9 ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿರೋರ ವಿರುದ್ಧ ಎಫ್‌ಐಆರ್ ಮಾಡಿಸಿದ್ದೇನೆ ಅಂತಲೂ ಮಾಧ್ಯಮಗಳಿಗೆ ಹೇಳಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed