Last Updated:
Sonia Gandhi’s Autobiography: ವರದಿಗಳ ಪ್ರಕಾರ, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಹಸ್ತಪ್ರತಿಯ ಕೆಲವು ಭಾಗಗಳಲ್ಲಿ ಸಂಪಾದಕೀಯ ಬದಲಾವಣೆ ಮತ್ತು ಕೆಲವು ಸಾಲುಗಳನ್ನು ತೆಗೆಯಬೇಕು ಎಂದು ಸೂಚಿಸಿತ್ತು. ಸೋನಿಯಾ ಗಾಂಧಿ ಆ ಬದಲಾವಣೆಗಳನ್ನು ಒಪ್ಪಲಿಲ್ಲ ಎನ್ನಲಾಗಿದೆ.
ದೆಹಲಿ: ಸೋನಿಯಾ ಗಾಂಧಿ ಅವರ ಆತ್ಮಕಥೆ (Sonia Gandhi’s autobiography) ಬಿಲಾಂಗಿಂಗ್ ಎ ಜರ್ನಿ ಆಫ್ ಲವ್ (Belonging: A Journey of Love) ಸುತ್ತ ಈಗ ದೊಡ್ಡ ಚರ್ಚೆ ನಡೆಯುತ್ತಿದೆ. ಅಮೆರಿಕದ ಪ್ರಕಾಶಕ ಆಲ್ಫ್ರೆಡ್ ಎ. ನಾಫ್ (Alfred A. Knopf) ಈ ಪುಸ್ತಕವನ್ನು ನವೆಂಬರ್ 10ರಂದು ಬಿಡುಗಡೆ ಮಾಡಲಿದೆ ಎಂದು ಘೋಷಿಸಿತ್ತು. ನಾಫ್ ಎನ್ನುವುದು ಪ್ರಸಿದ್ಧ ಪ್ರಕಾಶನ ಸಂಸ್ಥೆ ಪೆಂಗ್ವಿನ್ ರಾಂಡಮ್ ಹೌಸ್ನ (Penguin Random House) ವಿಭಾಗ. ಇದು ಸೋನಿಯಾ ಗಾಂಧಿಯವರ ಅತ್ಯಂತ ವೈಯಕ್ತಿಕ ಮತ್ತು ಪೂರ್ಣ ಜೀವನಕಥೆ ಎಂದು ಹೇಳಿದ್ದಾರೆ. ಮೊದಲ ಮುದ್ರಣದಲ್ಲಿ ಸುಮಾರು ಒಂದು ಲಕ್ಷ ಪ್ರತಿಗಳ ಯೋಜನೆ ಇತ್ತು. ಭಾರತದಲ್ಲಿ ಯಾರು ಪ್ರಕಟಿಸುವುದು ಎಂಬುದು ಇದೀಗ ವಿವಾದದ ಕೇಂದ್ರಬಿಂದುವಾಗಿದೆ.














