Last Updated:
Sonia Gandhi: ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಪಮಾನ ಮಾಡಿದ್ರಾ? ಸದ್ಯ ಈ ರೀತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಇದ್ದ ವಿಡಿಯೋದಲ್ಲಿ, ವಂದೇ ಮಾತರಂ ಗೀತೆ ಮೊಳಗುತ್ತಿದ್ದಂತೆ ಸೋನಿಯಾ ಗಾಂಧಿ ಕೈಸನ್ನೆ ಮಾಡುತ್ತಿರೋದು ವಿಡಿಯೋದಲ್ಲಿ ಸೆರೆಯಾಗಿದೆ.
ದೆಹಲಿ: ವಂದೇ ಮಾತರಂ (Vande Mataram) ಗೀತೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಅಪಮಾನ ಮಾಡಿದ್ರಾ? ಸದ್ಯ ಈ ರೀತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ (Mallikarjun Kharge), ರಾಹುಲ್ ಗಾಂಧಿ (Rahul Gandhi) ಇದ್ದ ವಿಡಿಯೋದಲ್ಲಿ, ವಂದೇ ಮಾತರಂ ಗೀತೆ ಮೊಳಗುತ್ತಿದ್ದಂತೆ ಸೋನಿಯಾ ಗಾಂಧಿ ಕೈಸನ್ನೆ ಮಾಡುತ್ತಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಇಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡುವಾಗ ಸೋನಿಯಾ ಗಾಂಧಿ ಈ ರೀತಿ ಕೈ ಸನ್ನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಬಿಜೆಪಿ (BJP) ಕಿಡಿಕಾರಿದ್ದು, ಬಿಜೆಪಿ ಆರೋಪಗಳಿಗೆ ಕಾಂಗ್ರೆಸ್ (Congress) ಸ್ಪಷ್ಟನೆ ನೀಡಿದೆ.














