Last Updated:
ಅನುರಾಗ್ ಕಶ್ಯಪ್ ತಮ್ಮ ವೈಯಕ್ತಿಕ ಜೀವನ, 11 ವರ್ಷಗಳ ಪ್ರೀತಿ ಹಾಗೂ ತಮಗಿಂತ 20 ವರ್ಷ ಕಿರಿಯ ಶುಭ್ರಾ ಶೆಟ್ಟಿ (Shubhra Shetty) ಅವರೊಂದಿಗಿನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಬಾಲಿವುಡ್‌ನ (Bollywood) ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಅನುರಾಗ್ ಕಶ್ಯಪ್ (Anurag Kashyap) ತಮ್ಮ ಸಿನಿಮಾಗಳಿಂದಷ್ಟೇ ಅಲ್ಲದೆ, ನೇರ ಮಾತುಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅನುರಾಗ್ ಕಶ್ಯಪ್ ತಮ್ಮ ವೈಯಕ್ತಿಕ ಜೀವನ, 11 ವರ್ಷಗಳ ಪ್ರೀತಿ ಹಾಗೂ ತಮಗಿಂತ 20 ವರ್ಷ ಕಿರಿಯ ಶುಭ್ರಾ ಶೆಟ್ಟಿ (Shubhra Shetty) ಅವರೊಂದಿಗಿನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅನುರಾಗ್ ಹಾಗೂ ಶುಭ್ರಾ ತಮ್ಮ ಪ್ರೇಮಕಥೆಯ ಹಲವು ಆಸಕ್ತಿದಾಯಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.














