Singer Hanumantha: ಸಿಂಗರ್ ಹನುಮಂತ ಸಿನಿಮಾಗಳಿಂದ ದೂರ ಇರೋದ್ಯಾಕೆ? | | ACTPnews

ಸಿಂಗರ್ ಹನುಮಂತ ಸಿನಿಮಾಗಳಿಂದ ದೂರ ಇರೋದ್ಯಾಕೆ; ಹೇಳಿದ ಆ ಸತ್ಯ ಏನು?


Last Updated:

ಬಿಗ್ ಬಾಸ್ ವಿನ್ನರ್ ಹನುಮಂತನ ಮಾತು ಹೆಚ್ಚು ವೈರಲ್ ಆಗಿದೆ. ದೊಡ್ಡವರ ಚಿತ್ರಗಳೇ ಓಡ್ತಿಲ್ಲ. ನನ್ನ ಚಿತ್ರ ಓಡ್ತವಾ ಅಂತ ಕೇಳಿರೋದು ಹೆಚ್ಚು ಗಮನ ಸೆಳೆಯುತ್ತಿದೆ. ಹನುಮಂತನ ಮಾತಿನ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಸಿಂಗರ್ ಹನುಮಂತ ಸಿನಿಮಾಗಳಿಂದ ದೂರ ಇರೋದ್ಯಾಕೆ; ಹೇಳಿದ ಆ ಸತ್ಯ ಏನು?
ಸಿಂಗರ್ ಹನುಮಂತ ಸಿನಿಮಾಗಳಿಂದ ದೂರ ಇರೋದ್ಯಾಕೆ; ಹೇಳಿದ ಆ ಸತ್ಯ ಏನು?

ಬಿಗ್ ಬಾಸ್ (Bigg Boss) ಮನೆಯಲ್ಲಿ ಇಬ್ಬರು ತುಂಬಾನೆ ಹತ್ತಿರ ಅನಿಸಿದರು. ಗೆಲ್ಲೋಕೆ ನಾಟಕ ಮಾಡ್ತಿದ್ದಾರೆ ಅನಿಸಲೇ ಇಲ್ಲ. ಆ ಇಬ್ಬರಲ್ಲಿ ಒಬ್ಬರು ಗಿಲ್ಲಿ ನಟ (Gilli Nata) ಆಗಿದ್ದಾರೆ. ಮತ್ತೊಬ್ಬರು ಸಿಂಗರ್ ಹನುಮಂತ (Singer Hanumantha) ಅಂತ ಹೇಳಬಹುದು. ಗಿಲ್ಲಿ ನಟ ಹೀರೋ ಆಗ್ತಿದ್ದಾರೆ. ಅದು ಬೇರೆ ಮಾತು. ಆದರೆ, ಸಿಂಗರ್ ಹನುಮಂತ ಸಿನಿಮಾರಂಗದಿಂದ ದೂರವೇ ಉಳಿದಿದ್ದಾರೆ. ಸಿನಿಮಾ ಆಫರ್ಸ್ (Cinema Offers) ಬಂದ್ರು ಬೇಡ ಅಂತ ಹೇಳಿದ್ದಾರೆ. ದೊಡ್ಡವರ ಚಿತ್ರಗಳೇ ಓಡ್ತಿಲ್ಲ. ಇನ್ನು ನನ್ನ ಸಿನಿಮಾ ಯಾರ್ ನೋಡ್ತಾರೆ ಅಂತಲೇ ಹೇಳಿಕೊಳ್ಳುತ್ತಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಬಿಗ್ ಬಾಸ್ ವಿನ್ನರ್….

ಬಿಗ್ ಬಾಸ್ ವಿನ್ನರ್ ಹನುಮಂತನ ಬೇಡಿಕೆ ಇಂದಿಗೂ ಇದೆ. ಆದರೆ, ಅದು ನಾಲ್ಕು ದಿನ ಇರುತ್ತದೆ. ನನ್ನ ನಂಬಿಕೊಂಡು ದುಡ್ಡು ಹಾಕಿದ್ರೆ ಚಿತ್ರ ಗೆದ್ದರೆ ಸರಿ. ಒಂದು ವೇಳೆ ಚಿತ್ರವೇ ಸೋತರೇ?
Why is Singer Hanumantha staying away from movies what is that truth he revealed

ಎರಡ್ಮೂರು ಚಿತ್ರಗಳಿಗೆ ಸಿಂಗಿಂಗ್

(ಚಿತ್ರ ಕೃಪೆ: ಹನುಮಂತನ ಇನ್‌ಸ್ಟಾಗ್ರಾಮ್)

ಸುಮ್ನೆ ನನ್ನ ನಂಬಿಕೊಂಡು ದುಡ್ಡು ಕಳೆದುಕೊಳ್ಳುವುದೇ ಬೇಡ. ಇದನ್ನೆಲ್ಲ ವಿಚಾರ ಮಾಡಿಯೇ ನಾನು ಸಿನಿಮಾಗಳ ಆಫರ್ ಒಪ್ಪಲಿಲ್ಲ ಅಂತ ಸಿಂಗರ್ ಹನುಮಂತ ಹೇಳಿಕೊಂಡಿದ್ದಾರೆ.

ಎಷ್ಟು ಆಫರ್ ಬಂದಿತ್ತು

ಹನುಮಂತ ಬಿಗ್ ಬಾಸ್ ಗೆದ್ದು ಬಂದ್ಮೇಲೆ ಆಫರ್‌ಗಳು ಬಂದಿವೆ. ಹನುಮಂತನ ಮನೆಗೂ ಕೆಲವರು ಹೋಗಿದ್ದಾರೆ. ನಿಮ್ಮನ್ನ ಹಾಕಿಕೊಂಡು ಸಿನಿಮಾ ಮಾಡ್ತೀವಿ ಅಂತಲೂ ಹೇಳಿದ್ದಾರೆ.

ಆದರೆ, ಹನುಮಂತನೇ ಬೇಡವೇ ಬೇಡ ಅಂತ ಹೇಳಿದ್ದಾರೆ. ಇದರಿಂದ ಸಿನಿಮಾ ಮಾಡ್ಬೇಕು ಅಂದವರು ನಿರಾಶೆಯಿಂದಲೇ ಹೋಗಿದ್ದಾರೆ.

ಹನುಮಂತ ಪಕ್ಕಾ ಪ್ರ್ಯಾಕ್ಟಿಕಲ್

ಹನುಮಂತ ಪಕ್ಕಾ ಪ್ರ್ಯಾಕ್ಟಿಕಲ್ ಆಗಿದ್ದಾರೆ. ತಮ್ಮ ನೇಮ್ ಆ್ಯಂಡ್ ಫೇಮ್ ನಾಲ್ಕು ದಿನ ಇರುತ್ತದೆ. ಇದು ಹೋದ್ಮೇಲೆ ಮುಗಿತು. ಇದನ್ನ ನಂಬಿಕೊಂಡು ಸಿನಿಮಾ ಮಾಡಿದ್ರೆ ಮುಗಿದೇ ಹೋಯಿತು.

Why is Singer Hanumantha staying away from movies what is that truth he revealed

ಹನುಮಂತ ಪಕ್ಕಾ ಪ್ರ್ಯಾಕ್ಟಿಕಲ್

(ಚಿತ್ರ ಕೃಪೆ: ಹನುಮಂತನ ಇನ್‌ಸ್ಟಾಗ್ರಾಮ್)

ದೊಡ್ಡ ದೊಡ್ಡವರ ಸಿನಿಮಾಗಳೇ ಓಡುತ್ತಿಲ್ಲ. ಅಂತಹದ್ರಲ್ಲಿ ನನ್ನ ಚಿತ್ರಗಳು ಎಲ್ಲಿ ಓಡ್ತವೆ. ಅದಕ್ಕೇನೆ ನಾನು ಚಿತ್ರಗಳ ಆಫರ್ ಅನ್ನ ಒಪ್ಪಿಕೊಳ್ಳಲಿಲ್ಲ ಅಂತ ಹನುಮಂತ ಹೇಳಿಕೊಂಡಿದ್ದಾರೆ.

ಎರಡ್ಮೂರು ಚಿತ್ರಗಳಿಗೆ ಸಿಂಗಿಂಗ್

ಸಿಂಗರ್ ಹನುಮಂತ ಎರಡ್ಮೂರು ಚಿತ್ರಗಳಿಗೆ ಹಾಡಿದ್ದಾರೆ. ಆ ಚಿತ್ರಗಳು ಇನ್ನು ರಿಲೀಸ್ ಆಗಿಲ್ಲ ಅಂತಲೂ ಹನುಮಂತ ಹೇಳಿಕೊಂಡಿದ್ದಾರೆ.

ಕ್ವಾಟ್ಲೆ ಕಿಚನ್ ಸೀಸನ್-2

ಕ್ವಾಟ್ಲೆ ಕಿಚನ್ ಸೀಸನ್-2 ಶುರು ಆಗಿದೆ. ಡೈರೆಕ್ಟರ್ ಓಂ ಪ್ರಕಾಶ್ ರಾವ್, ನಟ ಚೇತನ್ ಕುಮಾರ್, ಸಿಂಗರ್ ಹನುಮಂತ ಸೇರಿದಂತೆ ಇನ್ನು ಹಲವರು ಈ ಶೋಕ್ಕೆ ಬಂದಿದ್ದಾರೆ.

ಅನುಪಮಾ ಗೌಡ ಬದಲು ಈ ಸಲ ಈ ಶೋವನ್ನ ಸುಷ್ಮಾ ಮಾಡುತ್ತಿದ್ದಾರೆ. ಜಡ್ಜ್ ವಿಚಾರದಲ್ಲಿ ಶ್ರುತಿ ಅವರ ಜಾಗದಲ್ಲಿ ಮೇಘನಾ ರಾಜ್ ಆಗಮಿಸಿದ್ದಾರೆ. ಹೀಗೆ ಈ ಸಲದ ಶೋ ಅಷ್ಟೆ ಮಜಾವಾಗಿಯೂ ಇದೆ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed