Singer Death: ಕನ್ನಡ ಸೇರಿ 6,000ಕ್ಕೂ ಹೆಚ್ಚು ಗೀತೆಗೆ ಧ್ವನಿಯಾಗಿದ್ದ ದಕ್ಷಿಣ ಭಾರತದ ಖ್ಯಾತ ಗಾಯಕಿ ನಿಧನ | | ACTPnews

ಜಮುನಾ ರಾಣಿ


Last Updated:

ತಮಿಳು, ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಕೋಟ್ಯಂತರ ಸಂಗೀತಾಭಿಮಾನಿಗಳ ಮನ ಗೆದ್ದಿದ್ದ ಹಿರಿಯ ಹಿನ್ನೆಲೆ ಗಾಯಕಿ ಕೆ. ಜಮುನಾ ರಾಣಿ (K. Jamuna Rani) ಅವರು 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಜಮುನಾ ರಾಣಿ
ಜಮುನಾ ರಾಣಿ

ತಮಿಳು, ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಕೋಟ್ಯಂತರ ಸಂಗೀತಾಭಿಮಾನಿಗಳ ಮನ ಗೆದ್ದಿದ್ದ ಹಿರಿಯ ಹಿನ್ನೆಲೆ ಗಾಯಕಿ ಕೆ. ಜಮುನಾ ರಾಣಿ (K. Jamuna Rani) ಅವರು 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವೃದ್ಧಾಶ್ರಮದಲ್ಲಿ ಶುಕ್ರವಾರ ಬೆಳಗಿನ ಜಾವ ಸುಮಾರು 5.30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಆಂಧ್ರ ಪ್ರದೇಶದವರಾದ ಜಮುನಾ ರಾಣಿ ಅವರು ತಮ್ಮ ಜೀವನದ ಬಹುಭಾಗವನ್ನು ಸಂಗೀತಕ್ಕೆ ಸಮರ್ಪಿಸಿದ್ದರು. ಬಾಲ್ಯದಿಂದಲೇ ಗಾಯನದತ್ತ ಅಪಾರ ಆಸಕ್ತಿ ಹೊಂದಿದ್ದ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿ ತಮ್ಮ ವಿಶಿಷ್ಟ ಗಾಯನದ ಮೂಲಕ ಗಮನ ಸೆಳೆದರು. ಕಾಲ ಬದಲಾದರೂ ಅವರ ಧ್ವನಿಯ ಮೇಲಿನ ಅಭಿಮಾನ ಮಾತ್ರ ಎಂದಿಗೂ ಕಡಿಮೆಯಾಗಲಿಲ್ಲ.

ಏಳನೇ ವಯಸ್ಸಿನಲ್ಲೇ ಹಿನ್ನೆಲೆ ಗಾಯನಕ್ಕೆ ಪ್ರವೇಶ

ಜಮುನಾ ರಾಣಿ ಅವರ ಸಂಗೀತ ಪಯಣ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಆರಂಭವಾಗಿತ್ತು. ಕೇವಲ ಏಳು ವರ್ಷದವರಾಗಿದ್ದಾಗ ತೆಲುಗಿನ ತ್ಯಾಗಯ್ಯ ಚಿತ್ರದ ಮೂಲಕ ಹಿನ್ನೆಲೆ ಗಾಯನ ಆರಂಭಿಸಿದರು. ಬಾಲ್ಯದಲ್ಲಿಯೇ ಅವರ ಧ್ವನಿಯಲ್ಲಿದ್ದ ಮಧುರತೆ ಮತ್ತು ಸ್ಪಷ್ಟತೆ ಸಂಗೀತ ನಿರ್ದೇಶಕರನ್ನು ಆಕರ್ಷಿಸಿತು. ಇದೇ ಅವಕಾಶ ಅವರ ಮುಂದಿನ ಯಶಸ್ವಿ ಸಂಗೀತ ಬದುಕಿಗೆ ಭದ್ರ ಅಡಿಪಾಯವಾಯಿತು.

6,000ಕ್ಕೂ ಹೆಚ್ಚು ಹಾಡುಗಳ ಸಾಧನೆ

ಜಮುನಾ ರಾಣಿ ಅವರು ತಮ್ಮ ವೃತ್ತಿಜೀವನದಲ್ಲಿ 6,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅಪರೂಪದ ಸಾಧನೆ ಮಾಡಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಅವರು ತಮ್ಮ ಧ್ವನಿಯ ಮೂಲಕ ಅಸಂಖ್ಯಾತ ಹಾಡುಗಳಿಗೆ ಜೀವ ತುಂಬಿದರು. ಭಾರತದ ವಿವಿಧ ಭಾಷೆಗಳ ಜೊತೆಗೆ ಶ್ರೀಲಂಕಾದ ಚಿತ್ರರಂಗದಲ್ಲಿಯೂ ಹಾಡುವ ಅವಕಾಶ ಪಡೆದ ಕೆಲವೇ ಕೆಲವು ಭಾರತೀಯ ಗಾಯಕರಲ್ಲಿ ಅವರೂ ಒಬ್ಬರು.

ಕನ್ನಡದಲ್ಲೂ ಅಮರವಾದ ಹಾಡುಗಳು

ಜಮುನಾ ರಾಣಿ ಕನ್ನಡ ಚಿತ್ರರಂಗದಲ್ಲಿಯೂ ಹಲವು ಸ್ಮರಣೀಯ ಹಾಡುಗಳನ್ನು ನೀಡಿದ್ದಾರೆ. ಸ್ಕೂಲ್ ಮಾಸ್ಟರ್ ಚಿತ್ರದ ಅತಿ ಮಧುರ ಅನುರಾಗ ಹಾಡಿನ ಮೂಲಕ ಕನ್ನಡ ಸಿನಿರಸಿಕರ ಮನಸೆಳೆದ ಅವರು, ರತ್ನಮಂಜರಿ ಚಿತ್ರದ ಯಾರು ಯಾರು ನೀ ಯಾರು ಹಾಡಿನ ಮೂಲಕ ಶಾಶ್ವತ ನೆನಪಾಗಿದ್ದಾರೆ.

ಭಾರತದ ವಿವಿಧ ಭಾಷೆಗಳ ಸಿನಿಮಾಗಳಷ್ಟೇ ಅಲ್ಲದೆ ಶ್ರೀಲಂಕಾದ ಚಿತ್ರರಂಗದಲ್ಲಿಯೂ ಜಮುನಾ ರಾಣಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಸಂಗೀತ ನಿರ್ದೇಶಕ ಆನಂದ ಸಮರಕೂನ್ ಅವರ ಸಂಗೀತದಲ್ಲಿ 1953ರ ಸುಜಾತಾ ಚಿತ್ರದ ಹಾಡುಗಳನ್ನು ಹಾಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಗಾಯನ ಸಾಮರ್ಥ್ಯವನ್ನು ಪರಿಚಯಿಸಿದ್ದರು.

ಚಿತ್ರರಂಗದ ಕಂಬನಿ

ಜಮುನಾ ರಾಣಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಅನೇಕ ಕಲಾವಿದರು, ಸಂಗೀತ ನಿರ್ದೇಶಕರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿ ಅವರ ಕೊಡುಗೆಯನ್ನು ಸ್ಮರಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed