Lanka Premier league: ಕೊನೆಯ ಓವರ್​​​ನಲ್ಲಿ ಗೆಲ್ಲಲು ಬೇಕಿತ್ತು 22 ರನ್​​! ವಿಕೆಟ್ ಮೇಡನ್ ಕೊಟ್ಟು ಟ್ರೋಲ್ ಆದ ಮಾಜಿ ಸಿಎಸ್​ಕೆ ಪ್ಲೇಯರ್ | ಕ್ರೀಡಾ ಸುದ್ದಿ | ACTPnews

ವಿಜಯ್ ಶಂಕರ್


Last Updated:

ಎಡಗೈ ವೇಗಿ ದಿಲ್ಶನ್ ಮಧುಶಂಕ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದರು. ಆದರೆ ಶಂಕರ್ ಕೊನೆಯ ಓವರ್​​ನ ಮೊದಲ ಐದು ಎಸೆತಗಳಲ್ಲಿ ಡಾಟ್ ಬಾಲ್ ಮಾಡಿ, ಕೊನೆಯ ಎಸೆತದಲ್ಲಿ ಔಟಾದರು. ಮಧುಶಂಕ ನಿರ್ಣಾಯಕ ಓವರ್​​ನಲ್ಲಿ ಮೆಡನ್ ಓವರ್​ ಮಾಡಿ ಜಾಫ್ನಾಗೆ ಪಂದ್ಯವನ್ನ ಗೆಲ್ಲಿಸಿದರು.

ವಿಜಯ್ ಶಂಕರ್
ವಿಜಯ್ ಶಂಕರ್

2019ರ ವಿಶ್ವಕಪ್ ಸಮಯದಲ್ಲಿ “3D ಪ್ಲೇಯರ್” ಎಂದೇ ಖ್ಯಾತಿ ಪಡೆದ ವಿಜಯ್ ಶಂಕರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಭಾರತೀಯ ಆಲ್‌ರೌಂಡರ್ ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದರು. ಈಗ, ನಿನ್ನೆ ರಾತ್ರಿ ಟೂರ್ನಮೆಂಟ್‌ನ 18ನೇ ಪಂದ್ಯದಲ್ಲಿ, ವಿಜಯ್ ಶಂಕರ್ ತಮ್ಮ ಕೆಟ್ಟ ಪ್ರದರ್ಶನದ ಮೂಲಕ ಅಪಹಾಸ್ಯಕ್ಕೊಳಗಾಗಿದ್ದಾರೆ.

ಜಾಫ್ನಾ ಕಿಂಗ್ಸ್ ಮತ್ತು ಕ್ಯಾಂಡಿ ರಾಯಲ್ಸ್ ನಡುವೆ ಹೈ ಸ್ಕೋರಿಂಗ್ ಪಂದ್ಯ ನಡೆದಿತ್ತು. ಮೊದಲು ಬ್ಯಾಟ್ ಮಾಡಿದ ಜಾಫ್ನಾ ಕಿಂಗ್ಸ್ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 221 ರನ್ ಗಳಿಸಿತು. ಅಂದರೆ ಕ್ಯಾಂಡಿ ಗೆಲ್ಲಲು 222 ರನ್‌ಗಳ ಅಗತ್ಯವಿತ್ತು. 19 ಓವರ್‌ಗಳ ಅಂತ್ಯದ ವೇಳೆಗೆ, ಕ್ಯಾಂಡಿ 9 ವಿಕೆಟ್‌ಗಳ ನಷ್ಟಕ್ಕೆ 200 ರನ್ ಗಳಿಸಿತ್ತು. ಅಂದರೆ ಕೊನೆಯ ಓವರ್‌ನಲ್ಲಿ ಗೆಲ್ಲಲು 22 ರನ್‌ಗಳ ಅಗತ್ಯವಿತ್ತು.

ಎಡಗೈ ವೇಗಿ ದಿಲ್ಶನ್ ಮಧುಶಂಕ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದರು. ಆದರೆ ಶಂಕರ್ ಕೊನೆಯ ಓವರ್​​ನ ಮೊದಲ ಐದು ಎಸೆತಗಳಲ್ಲಿ ಡಾಟ್ ಬಾಲ್ ಮಾಡಿ, ಕೊನೆಯ ಎಸೆತದಲ್ಲಿ ಔಟಾದರು. ಮಧುಶಂಕ ನಿರ್ಣಾಯಕ ಓವರ್​​ನಲ್ಲಿ ಮೆಡನ್ ಓವರ್​ ಮಾಡಿ ಜಾಫ್ನಾಗೆ ಪಂದ್ಯವನ್ನ ಗೆಲ್ಲಿಸಿದರು.

ಕೊನೆಯ ಓವರ್​ ವೇಳೆಗೆ ವಿಜಯ್ ಶಂಕರ್ 15 ಎಸೆತಗಳಲ್ಲಿ 25 ರನ್ ಗಳಿಸಿದ್ದರು. ಅವರು ತಮ್ಮ ತಂಡಕ್ಕೆ ಗೆಲುವು ಸಾಧಿಸಲು ಅಗತ್ಯವಿರುವ 22 ರನ್ ಗಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಗೆಲ್ಲಿಸುವುದು ಬಿಡಿ ಆ ಓವರ್‌ನ ಮೊದಲ ಐದು ಎಸೆತಗಳಲ್ಲಿ ಒಂದೇ ಒಂದು ರನ್​ ತೆಗೆಯಲು ವಿಜಯ್ ವಿಫಲರಾದರು. ಕೊನೆಯ ಎಸೆತದಲ್ಲಿ ಅವರನ್ನು ಔಟ್ ಆದರು. ಈ ಪಂದ್ಯದ ಬಳಿಕ ವಿಜಯ್ ಶಂಕರ್ ಸಾಕಷ್ಟು ಟ್ರೋಲ್ಗೆ ತುತ್ತಾಗಿದ್ದಾರೆ.

2019ರಲ್ಲಿ ಹೆಚ್ಚು ಸದ್ದು ಮಾಡಿದ್ದ ಶಂಕರ್

ವಿಜಯ್ ಶಂಕರ್ ಅಂತಾರಾಷ್ಟ್ರೀಯ ವೃತ್ತಿ ಜೀವನ ಅಷ್ಟೇನು ಉತ್ತಮವಾಗಿಲ್ಲ. 2019ರ ವಿಶ್ವಕಪ್ ವೇಳೆ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್ ಅವರು 3D ಆಟಗಾರ ಎಂದು ಕರೆದು ತಂಡದಲ್ಲಿ ಅವಕಾಶ ನೀಡಿದ್ದರು. 2019ರ ವಿಶ್ವಕಪ್‌ಗೆ ತಂಡದಲ್ಲಿ ಖಾಯಂ ಸದಸ್ಯರಾಗಿದ್ದ ಅಂಬಟಿ ರಾಯುಡು ಅವರನ್ನು ನಿರ್ಲಕ್ಷಿಸಿ ವಿಜಯ್​ ಶಂಕರ್​​ಗೆ ಅವಕಾಶ ನೀಡಿದ್ದರು ಇದು ದೇಶಾದ್ಯಂತ ವ್ಯಾಪಕ ಟೀಕೆಗೆ ಕಾರಣವಾಯಿತು. ಆದರೆ ವಿಶ್ವಕಪ್‌ನಲ್ಲಿ ಶಂಕರ್ ಅವರ ಪ್ರದರ್ಶನ ಸಾಧಾರಣವಾಗಿತ್ತು. ಅಭ್ಯಾಸದ ಸಮಯದಲ್ಲಿ ಗಾಯಗೊಂಡು ಅವರನ್ನು ಪಂದ್ಯಾವಳಿಯಿಂದ ಹೊರಬೀಳುವ ಮೊದಲು ಅವರು ಮೂರು ಪಂದ್ಯಗಳಲ್ಲಿ ಕೇವಲ 58 ರನ್ ಮತ್ತು ಎರಡು ವಿಕೆಟ್‌ಗಳನ್ನು ಪಡೆದಿದ್ದರು.

ಅಂತರರಾಷ್ಟ್ರೀಯ ವೃತ್ತಿಜೀವನ ಹೇಗಿತ್ತು?

35 ವರ್ಷದ ವಿಜಯ್ ಶಂಕರ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು 2018-2019 ರ ನಡುವೆ ಭಾರತಕ್ಕಾಗಿ 12 ಏಕದಿನ ಮತ್ತು ಒಂಬತ್ತು ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ, 2014 ರಿಂದ 2025 ರವರೆಗೆ, ಅವರು ನಾಲ್ಕು ತಂಡಗಳಿಗಾಗಿ 78 ಪಂದ್ಯಗಳನ್ನಾಡಿ 1233 ರನ್ ಗಳಿಸಿದ್ದಾರೆ. ಈ ವೇಳೆ ಕೇವಲ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ, ಅವರು ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ದೆಹಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಪರ ಆಡಿದ್ದರು. ಈ ವರ್ಷ ಐಪಿಎಲ್​​​ ಮುಗಿಯುತ್ತಿದ್ದಂತೆ ಎಲ್ಲಾ ಮಾದರಿಗೂ ನಿವೃತ್ತಿ ಘೋಷಿಸಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed