Last Updated:
ಸಂಗೀತ ಕಾರ್ಯಕ್ರಮದ ವೇಳೆ ಖ್ಯಾತ ಗಾಯಕಿಯೊಬ್ಬರ ಮೇಲೆ ನಡೆದಿರುವ ದಾಳಿ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಂಗೀತ ಕಾರ್ಯಕ್ರಮದ ವೇಳೆ ಖ್ಯಾತ ಗಾಯಕಿಯೊಬ್ಬರ ಮೇಲೆ ನಡೆದಿರುವ ದಾಳಿ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಪೆರುವಿನಲ್ಲಿ ನಡೆದ ಸ್ಥಳೀಯ ಉತ್ಸವದಲ್ಲಿ ಸೊರಯಾ ನೀಟೊ (Soraya Nieto) ವೇದಿಕೆಯಲ್ಲಿ ಹಾಡುತ್ತಿದ್ದಾಗ, ಪ್ರೇಕ್ಷಕರಲ್ಲಿದ್ದ ವ್ಯಕ್ತಿಯೊಬ್ಬ ಗಾಜಿನ ಬಾಟಲಿಯನ್ನು ಅವರ ಮುಖದತ್ತ ಎಸೆದಿದ್ದಾನೆ. ಬಾಟಲಿ ನೇರವಾಗಿ ಮುಖಕ್ಕೆ ಬಡಿದ ಪರಿಣಾಮ ಗಾಯಕಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇನ್ನು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.














