Simple Suni: 10 ವರ್ಷ ಜೊತೆಗಿದ್ದ ಕೋ ಡೈರೆಕ್ಟರ್‌ರನ್ನೆ ಹೀರೋ ಮಾಡಿದ ಸಿಂಪಲ್ ಸುನಿ! ಯಾವ ಮೂವಿ? | | ACTPnews

10 ವರ್ಷ ಜೊತೆಗಿದ್ದ ಕೋ ಡೈರೆಕ್ಟರ್‌ರನ್ನೆ ಹೀರೋ ಮಾಡಿದ ಸಿಂಪಲ್ ಸುನಿ!


Last Updated:

ಸಿಂಪಲ್ ಸುನಿ ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದಾರೆ. ಕಳೆದ 10 ವರ್ಷದಿಂದ ಜೊತೆಗೇನೆ ಇರೋ ಕೋ ಡೈರೆಕ್ಟರ್ ಅನ್ನ ಹೀರೋ ಮಾಡಿದ್ದಾರೆ. ಮೋಡ ಕವಿದ ವಾತಾವರಣ ಅಂತಲೂ ಸಿನಿಮಾ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರದ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

10 ವರ್ಷ ಜೊತೆಗಿದ್ದ ಕೋ ಡೈರೆಕ್ಟರ್‌ರನ್ನೆ ಹೀರೋ ಮಾಡಿದ ಸಿಂಪಲ್ ಸುನಿ!
10 ವರ್ಷ ಜೊತೆಗಿದ್ದ ಕೋ ಡೈರೆಕ್ಟರ್‌ರನ್ನೆ ಹೀರೋ ಮಾಡಿದ ಸಿಂಪಲ್ ಸುನಿ!

ಡೈರೆಕ್ಟರ್ ಸಿಂಪಲ್ ಸುನಿ (Simple Suni) ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದಾರೆ. ಕಳೆದ 10 ವರ್ಷದಿಂದಲೂ ತಮ್ಮ ಜೊತೆಗೆ ಕೋ ಡೈರೆಕ್ಟರ್ ಆಗಿದ್ದ ಶೀಲಂ ಎಂ.ಸ್ವಾಮಿ (Sheelam M Swamy) ಅವರನ್ನ ನಾಯಕರನ್ನಾಗಿ ಮಾಡಿದ್ದಾರೆ. ಈ ಮೂಲಕ ಎಲ್ಲರೂ ವ್ಹಾವ್ ಅನ್ನುವ ರೀತಿನೇ ಮಾಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಶೀಲಂ ಅವರನ್ನ ನಾಯಕರಾಗಿಸಿದರೂ ಕೂಡ ಅವರಿಗೆ ಇನ್ನೂ ಅದೇ ಫೀಲ್ ಇದೆ. ಶೀಲಂ (Sheelam) ತಮ್ಮ ಚಿತ್ರದ ಕೋ ಡೈರೆಕ್ಟರ್ ಅನ್ನುವ ಭಾವನೆ ಇದೆ. ಅದನ್ನ ತಮ್ಮದೇ ಶೈಲ್ಲಿಯೇ ಹೇಳಿಕೊಂಡಿದ್ದಾರೆ. ಚಿತ್ರದ ನಾಯಕನ ಪರಿಚಯಿಸೋ ಟೀಸರ್ ರಿಲೀಸ್ (Teaser Release) ಸಮಯದಲ್ಲಿಯೇ ಈ ಎಲ್ಲದನ್ನ ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮೋಡ ಕವಿದ ವಾತಾವರಣ

ಈ ಚಿತ್ರದ ಕತೆನೇ ನೀವು ಇಲ್ಲಿವರೆಗೂ ಓದಿರೋದು. ಶೀಲಂ ಎಂ ಸ್ವಾಮಿ ಈ ಚಿತ್ರದ ನಾಯಕರಾಗಿದ್ದಾರೆ. ಕಳೆದ 10 ವರ್ಷ ದಿಂದಲೂ ಶೀಲಂ ಎಂ. ಸ್ವಾಮಿ ಅವರು ಸಿಂಪಲ್ ಸುನಿ ಅವರ ಜೊತೆಗೆ ಇದ್ದಾರೆ.

Moda Kavida Vaatavarana Simple Suni Sheelam M Swamy Movie Interesting Facts

ಜೂನ್-26 ರಂದು ಚಿತ್ರ ರಿಲೀಸ್

(ಚಿತ್ರ ಕೃಪೆ: ಸಿಂಪಲ್ ಸುನಿ ಇನ್‌ಸ್ಟಾಗ್ರಾಮ್)

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ನಟಿಸಬೇಕು ಅಂತಲೇ ಶೀಲಂ ಬಂದಿದ್ದರು. ಆದರೆ, ಸಿಂಪಲ್ ಸುನಿ ಇವರನ್ನ ಡೈರೆಕ್ಷನ್ ವಿಭಾಗಕ್ಕೆ ಹಾಕಿದ್ದರು. ಅಂದಿನಿಂದಲೂ ಶೀಲಂ ಡೈರೆಕ್ಷನ್ ವಿಭಾಗದಲ್ಲಿಯೇ ಕೆಲಸ ಮಾಡಿದ್ದಾರೆ. ಆಗೊಂದು ಈಗೊಂದು ಅನ್ನುವ ಹಾಗೆ ನಟನೆ ಕೂಡ ಮಾಡಿದ್ದಾರೆ.

ಕಥೆ ಬೇಡಿರೋದಕ್ಕೆ ನಾಯಕ

ಸಿಂಪಲ್ ಸುನಿ ಇಲ್ಲಿವರೆಗೂ ಹೆಚ್ಚು ಹೊಸಬರ ಜೊತೆಗೆ ಕೆಲಸ ಮಾಡಿದ್ದಾರೆ. ಆದರೆ, ಸಿಂಪಲ್ಲಾಗ್ ಒಂದ್ ಲವ್ ಚಿತ್ರ ಬಿಟ್ರೆ, ಹೊಸಬರು ಬೇಕು ಅಂತ ಹೋಗಿದ್ದು ಈ ಮೋಡ ಕವಿದ ವಾತಾವರಣ ಚಿತ್ರವೇ ಆಗಿದೆ.

ಅಂದ್ರೆ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರಕ್ಕಾಗಿಯೇ ರಕ್ಷಿತ್ ಅವರನ್ನ ಅಪ್ರೋಚ್ ಮಾಡಿದ್ದರು. ಈ ಮೋಡ ಕವಿದ ವಾತಾವರಣಕ್ಕೆ ಶೀಲಂ ಬೇಕು ಅಂತಲೇ ಅವರನ್ನ ನೇರವಾಗಿಯೇ ಕೇಳಿದ್ದಾರೆ. ಇತರ ಚಿತ್ರಗಳ ಹೊಸಬರ ವಿಚಾರದಲ್ಲಿ ಆ ನವ ಕಲಾವಿದರು ಇವರನ್ನ ಹುಡುಕಿಕೊಂಡು ಬಂದಿರೋದೇ ಇದೆ.

ಶೀಲಂ ಇನ್ನೂ ಕೋ ಡೈರೆಕ್ಟರ್ ಅನಿಸ್ತಾರೆ

ಮೋಡ ಕವಿದ ವಾತಾವರಣ ಚಿತ್ರದ ನಾಯಕ ಶೀಲಂ ಎಂ. ಸ್ವಾಮಿ ಇನ್ನು ಕೋ ಡೈರೆಕ್ಟರ್ ಅನಿಸುತ್ತಾರೆ. ಎಲ್ಲರೂ ಇವರನ್ನ ಹೀರೋ ಅಂತಲೇ ಹೇಳ್ತಾರೆ.

Moda Kavida Vaatavarana Simple Suni Sheelam M Swamy Movie Interesting Facts

ಕಥೆ ಬೇಡಿರೋದಕ್ಕೆ ನಾಯಕ

(ಚಿತ್ರ ಕೃಪೆ: ಸಿಂಪಲ್ ಸುನಿ ಇನ್‌ಸ್ಟಾಗ್ರಾಮ್)

ಆದರೆ, ಶೀಲಂ ನನಗೆ ಹೀರೋ ಅನಿಸೋದೇ ಇಲ್ಲ. ಚಿತ್ರದ ಕೆಲಸದಲ್ಲಿ ಇಬ್ಬರೂ ಇನ್ವಾಲ್ವ್ ಆಗಿದ್ದೇವೆ. ಯುಎಫ್ಓ ಕ್ಯೂಬ್‌ಗೆ ಒಟ್ಟಿಗೇನೆ ಹೋಗಿ ಸಿನಿಮಾ ಅಪ್‌ಲೋಡ್ ಮಾಡಿಸಿದ್ದೇವೆ.

ನನಗೆ ಗೊತ್ತು ಈ ಟ್ರೈಲರ್ ಬೆಸ್ಟ್ ಅಲ್ಲ..

ನನಗೆ ಗೊತ್ತಿದೆ. ನಮ್ಮ ಈ ಚಿತ್ರದ ಟ್ರೈಲರ್ ಬೆಸ್ಟ್ ಅಲ್ವೇ ಅಲ್ಲ. ನಾನು ಟ್ರೈಲರ್ ತುಂಬಾನೆ ಚೆನ್ನಾಗಿ ಕಟ್ ಮಾಡಿಸ್ತೇನೆ ಅಂತ ಹೇಳ್ತಾರೆ. ಆದರೆ, ಈ ಚಿತ್ರದ ಟ್ರೈಲರ್ ಅಷ್ಟು ಚೆನ್ನಾಗಿ ಕಟ್ ಆಗಿಲ್ಲ.

ಜೂನ್-26 ರಂದು ಚಿತ್ರ ರಿಲೀಸ್

ಮೋಡ ಕವಿದ ವಾತಾವರಣ ಜೂನ್-26 ರಂದು ರಿಲೀಸ್ ಆಗುತ್ತಿದೆ. ಮೋಕ್ಷಾ ಕುಶಾಲ್, ಸಾತ್ವಿಕಾ, ಶೀಲಂ ಎಂ.ಸ್ವಾಮಿ ಈ ಚಿತ್ರದಲ್ಲಿದ್ದಾರೆ. ಜುಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.

ಬಾಕಿ ಉಳಿದಂತೆ ಸಿಂಪಲ್ ಸುನಿ ಇಲ್ಲೂ ಒಳ್ಳೆ ಕತೆಯನ್ನ ಹೇಳ್ತಾರೆ ಅನ್ನುವ ನಂಬಿಕೆನೂ ಇದೆ. ಈ ಹಿಂದಿನ ಇವರ ಚಿತ್ರಗಳಲ್ಲಿ ಒಳ್ಳೆ ಕತೆ ಮತ್ತು ಉತ್ತಮ ಅನಿಸೋ ಹಾಡುಗಳು ಇವೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports