Last Updated:
Melody: ಶೃಂಗಸಭೆಗಳು ಅಂದ್ರೆ ಯಾವಾಗಲೂ ಗಂಭೀರ ಚರ್ಚೆಗಳು, ದ್ವಿಪಕ್ಷೀಯ ಒಪ್ಪಂದಗಳ ನಡುವೆ ಕೆಲವೊಮ್ಮೆ ನಾಯಕರ ನಡುವಿನ ಒಂದು ನಗು, ಒಂದು ಸೆಲ್ಫಿ ಕೂಡ ಜಗತ್ತಿನ ಗಮನ ಸೆಳೆಯುತ್ತದೆ. ಅದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಘಟನೆಯೇ ಸಾಕ್ಷಿ! ಆ ಕುರಿತ ವರದಿ ಇಲ್ಲಿದೆ.
ಏವಿಯನ್-ಲೆಸ್-ಬೈನ್ಸ್ (ಫ್ರಾನ್ಸ್): ಶೃಂಗಸಭೆಗಳು (Summit) ಅಂದ್ರೆ ಯಾವಾಗಲೂ ಗಂಭೀರ ಚರ್ಚೆಗಳು, ದ್ವಿಪಕ್ಷೀಯ ಒಪ್ಪಂದಗಳ ನಡುವೆ ಕೆಲವೊಮ್ಮೆ ನಾಯಕರ ನಡುವಿನ ಒಂದು ನಗು, ಒಂದು ಸೆಲ್ಫಿ ಕೂಡ ಜಗತ್ತಿನ ಗಮನ ಸೆಳೆಯುತ್ತದೆ. ಅದಕ್ಕೆ ಭಾರತದ ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಮತ್ತು ಇಟಲಿಯ ಪ್ರಧಾನಿ (Italian PM) ಜಾರ್ಜಿಯಾ ಮೆಲೋನಿ (Giorgia Meloni) ಅವರ ಘಟನೆಯೇ ಸಾಕ್ಷಿ! ಆ ಕುರಿತ ವರದಿ ಇಲ್ಲಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಬ್ಬರ ಹೆಸರು ಒಟ್ಟಿಗೆ ಬಂತೂ ಅಂದ್ರೆ ಸಾಕು, ಅಲ್ಲಿ “ಮೆಲೋಡಿ” (Melody) ಎಂಬ ಹೆಸರು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಅದರಂತೆ, ಸಾಮಾಜಿಕ ಜಾಲತಾಣದಲ್ಲಿ ಮೆಲೋಡಿ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಮೀಮ್ಸ್ಗಳು, ರೀಲ್ಸ್ಗಳು ವೈರಲ್ ಆಗುತ್ತದೆ. ಯಾಕಂದ್ರೆ, ಈ ಇಬ್ಬರು ನಾಯಕರ ನಡುವಿನ ಈ ಆತ್ಮೀಯತೆ, ಪರಸ್ಪರ ಗೌರವ ಮತ್ತು ಲವಲವಿಕೆಯ ಮಾತುಕತೆ ನೆಟ್ಟಿಗರಿಗೆ ಭಾರೀ ಇಷ್ಟ.
ಫ್ರಾನ್ಸ್‌ನಲ್ಲಿ ನಡೆದ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಜಗತ್ತಿನ ಪ್ರಭಾವಿ ನಾಯಕರೆಲ್ಲರೂ ಒಗ್ಗೂಡಿದ್ದರು. ಈ ವೇಳೆ, ಪ್ರಮುಖ ನಾಯಕರ ಗುಂಪು ಫೋಟೋ ತೆಗೆಯುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಪರಸ್ಪರ ಎದುರಾದರು. ಈ ವೇಳೆ ಇಬ್ಬರೂ ಅತ್ಯಂತ ಆತ್ಮೀಯವಾಗಿ ನಗುಮುಖದಿಂದಲೇ ಸ್ವಾಗತ ಕೋರಿ ಹಸ್ತಲಾಘವ ಮಾಡಿದರು. ಈ ಸಂದರ್ಭದಲ್ಲಿ ನಡೆದ ಚಿಕ್ಕ ಸಂಭಾಷಣೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಕೇವಲ ರಾಜಕೀಯ ವಿಚಾರಗಳಷ್ಟೇ ಅಲ್ಲದೆ, ವೈಯಕ್ತಿಕ ಮಟ್ಟದಲ್ಲೂ ಇಬ್ಬರು ನಾಯಕರ ನಡುವೆ ಇರುವ ಉತ್ತಮ ಬಾಂಧವ್ಯವನ್ನು ಈ ವಿಡಿಯೋ ಮತ್ತೊಮ್ಮೆ ಜಗತ್ತಿಗೆ ಎತ್ತಿ ತೋರಿಸಿದೆ.
ಸದ್ಯ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿರುವ ಈ ವೈರಲ್ ವಿಡಿಯೋದಲ್ಲಿ ಮೆಲೋನಿ ಅವರು ಪ್ರಧಾನಿ ಮೋದಿಯವರನ್ನು ನೋಡಿ, “ನಿಮ್ಮನ್ನು ಮತ್ತೊಮ್ಮೆ ಇಲ್ಲಿ ಭೇಟಿಯಾಗುತ್ತಿರುವುದು ತುಂಬಾ ಸಂತೋಷ ತಂದಿದೆ, ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಪ್ರಸಿದ್ಧ ಜೋಡಿಗಳು” ಎಂದು ನಗುಮುಖದಿಂದಲೇ ಹೇಳಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಕೂಡ ಅದೇ ರೀತಿಯಲ್ಲಿ ನಗುತ್ತಲೇ ಸ್ಪಂದಿಸಿದ್ದಾರೆ.
ಇದೇ ವರ್ಷದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಗೆ ಭೇಟಿ ನೀಡಿದ್ದಾಗ ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ಪ್ರಸಿದ್ಧ ಮೆಲೋಡಿ ಚಾಕಲೇಟ್ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ವಿಡಿಯೋವನ್ನು ಸ್ವತಃ ಮೆಲೋನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು, ಪ್ರಧಾನಿ ಮೋದಿ ನಮಗಾಗಿ ಉಡುಗೊರೆ ತಂದಿದ್ದಾರೆ, ಇದು ಮೆಲೋಡಿ ಎಂದು ಅವರು ಅತ್ಯಂತ ಸಂಭ್ರಮದಿಂದ ಹೇಳುವ ವಿಡಿಯೋ ಬರೋಬ್ಬರಿ 13 ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಪಡೆದು ಇತಿಹಾಸ ಸೃಷ್ಟಿಸಿತ್ತು.
ಇನ್ನೂ, ಮೋದಿ ಹಾಗೂ ಮೆಲೋನಿ ಎಂಬ ಇಬ್ಬರ ಹೆಸರುಗಳನ್ನು ಸೇರಿಸಿ ಮೆಲೋಡಿ ಎಂಬ ಪದವನ್ನು ಸೃಷ್ಟಿಸಲಾಗಿದ್ದು, 2024ರಲ್ಲಿ ಮೆಲೋನಿ ಅವರು ಮೆಲೋಡಿ ತಂಡದಿಂದ ನಮಸ್ಕಾರ ಎಂದು ಬರೆದುಕೊಂಡಿದ್ದ ಪೋಸ್ಟ್ ಕೂಡ ಭಾರಿ ಸದ್ದು ಮಾಡಿತ್ತು. ಮೆಲೋಡಿ ಎಂಬುದು ಯಾವುದೇ ಅಧಿಕೃತ ರಾಜತಾಂತ್ರಿಕ ಪದವಲ್ಲದಿದ್ದರೂ, ಇದು ಜನರ ಬಾಯಲ್ಲಿ ಸದಾ ಉಳಿಯುವ ಟ್ರೆಂಡ್ ಆಗಿದೆ.














