Renukaswamy Case: ಡಿ ಗ್ಯಾಂಗ್​​ಗೆ ಬಿಗ್ ಶಾಕ್? ದರ್ಶನ್, ಪವಿತ್ರಾರಂತೆ ಮತ್ತೆ ಕಂಬಿ ಹಿಂದೆ ಸೇರ್ತಾರಾ ಆ ಐದು ಜನ? | Renukaswamy case update | | ACTPnews

ರೇಣುಕಾಸ್ವಾಮಿ ಕೇಸ್


Last Updated:

Renukaswamy Case: ದರ್ಶನ್, ಪವಿತ್ರಾ ಗೌಡರಿಂದಾಗಿ ಆ ಐವರಿಗೂ ಸಂಕಷ್ಟ? ದಿಢೀರ್ ಆಗಿ ಸಪ್ರೀಂ ಕದ ತಟ್ಟೋ ನಿರ್ಧಾರ ಮಾಡಿದ್ಯಾಕೆ?

ರೇಣುಕಾಸ್ವಾಮಿ ಕೇಸ್
ರೇಣುಕಾಸ್ವಾಮಿ ಕೇಸ್

ರೇಣುಕಾಸ್ವಾಮಿ ಕೊಲೆ (Renukaswamy) ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಅಪ್ಡೇಟ್​ಗಳು (Update) ಬರುತ್ತಲೇ ಇವೆ. ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಸಹಚರರಿಗೆ ಮತ್ತೆ ಬಿಗ್ ಶಾಕ್ ಸಿಗುವ ಎಲ್ಲಾ ಸಾಧ್ಯತೆಯೂ ಕಂಡು ಬರುತ್ತಿದೆ.

ಇತ್ತೀಚೆಗೆ ಹೈಕೋರ್ಟ್ ರೇಣುಕಾಸ್ವಾಮಿ ಕೇಸ್​​ನ ಐವರು ಆರೋಪಿಗಳಿಗೆ ರಿಲೀಫ್ ಕೊಟ್ಟಿತ್ತು. ಅವರ ಜಾಮೀನು ರದ್ದತಿಗೆ ತಡೆಯಾಗಿ ದೊಡ್ಡ ರಿಲೀಫ್ ಸಿಕ್ಕಿತ್ತು. ಆದರೆ ಈಗ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಪ್ರಾಸಿಕ್ಯೂಷನ್ ಸಿದ್ದತೆ ಮಾಡಿಕೊಂಡಿದೆ.

ಎಸ್ ಪಿಪಿ ಪ್ರಸನ್ನ ಕುಮಾರ್ ಹಾಗೂ ತಂಡ ಹೈಕೋರ್ಟ್ ರಿಲೀಫ್ ನೀಡಿದ ಐವರು ಆರೋಪಿಗಳಿ ಜಾಮೀನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರೋಕೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಾಸಿಕ್ಯೂಷನ್ ಐವರು ಆರೋಪಿಗಳ ಜಾಮೀನು ರದ್ದು ಮಾಡುವಂತೆ ಹೈಕೋರ್ಟ್ ಸಲ್ಲಿಸಿತ್ತು.

ಹೈಕೋರ್ಟ್ ಏಕಸದಸ್ಯ ‌ಪೀಠ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ವಜಾ ಮಾಡಿ ಆದೇಶ ನೀಡಿತ್ತು. ಅಲ್ಲಿಗೆ ಐವರಿಗೆ ರಿಲೀಫ್ ಸಿಕ್ಕಿತ್ತು. ಇದೀಗ ಆರೋಪಿಗಳ ಜಾಮೀನು ರದ್ದು ಮಾಡುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಲು ಪ್ರಾಸಿಕ್ಯೂಷನ್ ನಿರ್ಧಾರ‌‌ ಮಾಡಿದೆ.

ಆರೋಪಿಗಳಾದ ಧನರಾಜು, ರಾಘವೇಂದ್ರ, ವಿನಯ್ , ನಂದೀಶ್ ಮತ್ತು ಪವನ್ ಜಾಮೀನು ರದ್ದು ಮಾಡುವಂತೆ ಸುಪ್ರೀಂಗೆ ಮನವಿ ಸಲ್ಲಿಸಲು ತಯಾರಿ ನಡೆಸಿದ್ದಾರೆ.

2024ರಲ್ಲಿ ಸಿಕ್ಕಿದ್ದ ಜಾಮೋನು

ಸೆಷನ್ಸ್ ಕೋರ್ಟ್ 2024 ರಲ್ಲಿ ಐವರು ಆರೋಪಿಗಳಿಗೆ ಜಾಮೀನು ನೀಡಿತ್ತು. ಅದನ್ನು ರದ್ದು ಮಾಡಬೇಕೆಂದು ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿದ್ದು ಅದು ವಜಾ ಆಗಿದೆ. ಹಾಗಾಗಿ ಪ್ರಾಸಿಕ್ಯೂಷನ್ ಮತ್ತು ಕಾಮಾಕ್ಷಿ ಪಾಳ್ಯ ಪೊಲೀಸರು ಮೇಲ್ಮನವಿ ಸಲ್ಲಿಸುವ ಸಂಬಂಧ ಗೃಹ ಇಲಾಖೆಗೆ ಅನುಮತಿ ಕೇಳಿದೆ.

ಈಗ ಜಾಮೀನು ರದ್ದು ಮಾಡುವಂತೆ ಸುಪ್ರೀಂಕೋರ್ಟ್​ಗೆ ಹೋಗಿಲ್ಲ ಎಂದಾದರೆ ಅದು ಬೇರೆ ಸಂದೇಶಕ್ಕೆ ದಾರಿ ಮಾಡಿಕೊಡುತ್ತದೆ. ದರ್ಶನ್, ಪವಿತ್ರಗೌಡ ಅವರ ಜಾಮೀನು ರದ್ದು ಮಾಡುವಂತೆ ಪ್ರಾಸಿಕ್ಯೂಷನ್ ಸುಪ್ರೀಂಕೋರ್ಟ್ ಗೆ ಮೊರೆ ಹೋಗಿದ್ದರು.

ಈಗ ಇವರ ಜಾಮೀನು ರದ್ದು ಮಾಡುವಂತೆ ಹೋಗದಿದ್ದರೆ ಇಲಾಖೆ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಗೃಹ ಇಲಾಖೆ ಅನುಮತಿ ನೀಡಿದ ಬಳಿಕ ಐವರ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಕೆ ಮಾಡಲು ಪ್ರಾಸಿಕ್ಯೂಷನ್ ಸಜ್ಜಾಗಿದೆ. ಬಹುತೇಕ ಮುಂದಿನ ವಾರದಲ್ಲೇ ಸುಪ್ರಿಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗಲಿದೆ

ವರದಿ: ಗಂಗಾಧರ ವಾಗಟ, ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports