Side No Ball: ಸೈಡ್ ನೋ ಬಾಲ್ ಎಂದರೇನು? ರವಿ ಬಿಷ್ಣೋಯ್ ಮಾಡಿದ ಬ್ಲಂಡರ್ ಏನು? | ಕ್ರೀಡಾ ಸುದ್ದಿ | ACTPnews

ಏನಿದು ಸೈಡ್ ಲೈನ್ ನೋ ಬಾಲ್?


Last Updated:

ಶ್ರೇಯಸ್ ಅಯ್ಯರ್ ಪ್ರಕಾರ, 17ನೇ ಓವರ್ ಟೀಂ ಇಂಡಿಯಾ ಸೋಲಿಗೆ ಕಾರಣ. ರವಿ ಬಿಷ್ಣೋಯ್ ತಪ್ಪುಗಳಿಂದ ಕಲಿಯುತ್ತಾರೆ. ಇಂಗ್ಲೆಂಡ್ ವಿರುದ್ಧದ 2ನೇ ಟಿ20ಯಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದೆ.

ಏನಿದು ಸೈಡ್ ಲೈನ್ ನೋ ಬಾಲ್?
ಏನಿದು ಸೈಡ್ ಲೈನ್ ನೋ ಬಾಲ್?

ಟೀಂ ಇಂಡಿಯಾ (Team India) ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ (Shreyas Iyer), 17ನೇ ಓವರ್ ತಮಗೆ ತೀವ್ರ ಹೊಡೆತ ನೀಡಿತ್ತು. ಆದರೆ ಯುವ ಆಟಗಾರ ರವಿ ಬಿಷ್ಣೋಯ್ (Ravi Bishnoi) ಈ ತಪ್ಪುಗಳಿಂದ ಕಲಿತುಕೊಳ್ಳುವುದು ಭವಿಷ್ಯದಲ್ಲಿ ಮತ್ತೆ ಕಮ್ ಬ್ಯಾಕ್ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜುಲೈ 07 ರಂದು ನಾಟಿಂಗ್ಹ್ಯಾಮ್ ನಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ಭಾರತ (ENG vs IND) ತಿರುಗೇಟು ನೀಡುವ ವಿಶ್ವಾಸವಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಕೈಯಲ್ಲಿದ್ದ ಪಂದ್ಯವನ್ನು ಒಂದೇ ಓವರ್ ನಲ್ಲಿ ಮಿಸ್ ಮಾಡಿಕೊಂಡಿತ್ತು. ಭಾರತದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಮಾಡಿದ 17ನೇ ಓವರ್ ಪಂದ್ಯದ ಸ್ವರೂಪವನ್ನೇ ಬದಲಾವಣೆ ಮಾಡಿತ್ತು. ಈ ಓವರ್ ನಲ್ಲಿ ಬಿಷ್ಣೋಯ್ ಮಾಡಿದ ನೋ ಬಾಲ್ ತಪ್ಪು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

17ನೇ ಓವರ್​​ನಲ್ಲಿ ಆಗಿದ್ದೇನು?

ಭಾರತ ನೀಡಿದ್ದ 191 ರನ್ ಗಳ ಭಾರೀ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ಟೀಂ ಇಂಡಿಯಾ ಶಾಕ್ ನೀಡಿತ್ತು. ಇನ್ನಿಂಗ್ಸ್ ನಲ್ಲಿ 16 ನೇ ಓವರ್ ಮುಕ್ತಾಯ ಆಗುವ ವೇಳೆಗೆ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ ತೀವ್ರ ಒತ್ತಡದಲ್ಲಿತ್ತು. ಭಾರತ ಗೆಲುವು ಖಚಿತ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ 17ನೇ ಓವರ್ ಅನ್ನು ರವಿ ಬಿಷ್ಣೋಯ್ ಗೆ ನೀಡಿದ್ದು, ಟೀಂ ಇಂಡಿಯಾ ಗೆಲುವನ್ನೇ ಕಸಿದುಕೊಂಡಿತ್ತು. ಈ ಓವರ್ ನಲ್ಲಿ ಬಿಷ್ಣೋಯ್ ಮಾಡಿದ ಎರಡು ನೋ ಬಾಲ್ ಗಳನ್ನು ಇಂಗ್ಲೆಂಡ್ ಬ್ಯಾಟರ್ ಜಾಕಬ್ ಬೆಥಲ್ ಗೆ ವರವಾಗಿ ಪರಿಣಮಿಸಿತ್ತು. ಫ್ರೀ ಹಿಟ್ ಲಾಭ ಪಡೆದ ಬೆಥಲ್, ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ್ದರು. ಈ ಓವರ್ ನಲ್ಲಿ 29 ರನ್ ಗಳು ಹರಿದು ಬಂದಿತ್ತು. ಇದರೊಂದಿಗೆ ಮ್ಯಾಚ್ ಸಂಪೂರ್ಣವಾಗಿ ಇಂಗ್ಲೆಂಡ್ ಕಡೆಗೆ ವಾಲಿತ್ತು. ಈ ಪಂದ್ಯದಲ್ಲಿ ಬಿಷ್ಣೋಯ್ ನಾಲ್ಕು ಓವರ್ ಗಳಲ್ಲಿ ಯಾವುದೇ ವಿಕೆಟ್ ಇಲ್ಲದೇ 60 ರನ್ ನೀಡಿದ್ದರು.

ಏನಿದು ಸೈಡ್ ನೋ ಬಾಲ್? ನಿಯಮಗಳು ಏನು ಹೇಳುತ್ತೆ?

ಸಾಮಾನ್ಯವಾಗಿ ಬೌಲರ್ ಮೊದಲ ಹೆಜ್ಜೆ ಕ್ರೀಸ್​ ಲೈನ್ ದಾಟಿದರೆ ನೋ ಬಾಲ್ ಎಂದು ನೀಡುತ್ತಾರೆ. ಆದರೆ ರವಿ ಬಿಷ್ಣೋಯ್​ ನೋ ಬಾಲ್ ಸ್ವಲ್ಪ ಭಿನ್ನವಾಗಿತ್ತು. ಇದನ್ನು ಕ್ರಿಕೆಟ್ ನಿಯಮಗಳ ಅನ್ವಯ, ‘ಸೈಡ್ ನೋ ಬಾಲ್’ ಎಂದು ಅಥವಾ ‘ರಿಟರ್ನ್ ಕ್ರೀಸ್ ಇನ್ಫ್ರಾಕ್ಷನ್’ ಎಂದು ಕರೆಯುತ್ತಾರೆ. ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ನಿಯಮಗಳ ಅನ್ವಯ, ಬೌಲರ್ ಬೌಲ್ ಮಾಡುವ ಪ್ರಕ್ರಿಯೆಯಲ್ಲಿ ಆತನ ಹಿಂದಿನ ಹೆಜ್ಜೆ ಬೌಲಿಂಗ್ ಕ್ರೀಸ್ ಪಕ್ಕ ಇರುವ ಬಿಳಿ ಗೆರೆಯ (ರಿಟರ್ನ್ ಕ್ರೀಸ್)ಗೆ ಟಚ್ ಆಗುವಂತೆ ಇಲ್ಲ ಎಂದು ಹೇಳುತ್ತದೆ.

ಅಲ್ಲದೆ, ಬೌಲರ್‌ನ ಮುಂಭಾಗದ ಪಾದವು ವಿಕೆಟ್‌ಗಳ ನಡುವಿನ ಕಾಲ್ಪನಿಕ ನೇರ ರೇಖೆಯ ಹೊರಗೆ ತುಂಬಾ ಅಗಲವಾಗಿ ಬೀಳಬಾರದು. ಬಿಷ್ಣೋಯ್ ತನ್ನ ಬ್ಯಾಕ್‌ಫೂಟ್ ಅನ್ನು ಪಕ್ಕದ ರಿಟರ್ನ್ ಕ್ರೀಸ್ ಲೈನ್‌ನಲ್ಲಿ, ಲೈನ್‌ನ ಆಚೆ ಇರಿಸಿದಾಗ ಟಿವಿ ಅಂಪೈರ್ ಅದನ್ನು ನೋ ಬಾಲ್ ಎಂದು ಘೋಷಿಸಿದರು. ಇಂತಹ ತಪ್ಪುಗಳು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಪರೂಪವಾಗಿ ನಡೆಯುತ್ತದೆ.

ನಿರಾಸೆ ಮೂಡಿಸಿದ ಬ್ಯಾಟಿಂಗ್ ಆರ್ಡರ್! ಬೆಥಲ್ ಏಕಾಂಗಿ ಹೋರಾಟ!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ನಿಗದಿತ 20 ಓವರ್ ಗಳಲ್ಲಿ 190 ರನ್ ಗಳಿಸಿತ್ತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 43 ರನ್, ವಿಕೆಟ್ ಕೀಪರ್ ಇಶಾನ್ ಕಿಶನ್ 49 ರನ್ ಗಳೊಂದಿಗೆ ಮಿಂಚಿದ್ದರು. 15 ವರ್ಷ ಯುವ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಪಾದಾರ್ಪಣೆ ಪಂದ್ಯದಲ್ಲಿ 14 ರನ್ ಗಳಿಸಿ ನಿರಾಸೆ ಮೂಡಿಸಿದ್ದರು.

ಇದನ್ನೂ ಓದಿ: ENG vs IND: ಆತನಿಗೆ ಕ್ಷಮೆಯೇ ಇಲ್ಲ! 7 ತಿಂಗಳ ಬಳಿಕ ಅವಕಾಶ ಕೊಟ್ಟರೆ ನಡುನೀರಿನಲ್ಲಿ ಮುಳುಗಿಸಿದ!

ಭಾರೀ ಗುರಿಯೊಂದಿಗೆ ಕಣಕ್ಕೆ ಇಳಿದ ಇಂಗ್ಲೆಂಡ್ ತಂಡ ಮೊದಲ ಓವರ್ ನಲ್ಲಿ ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಇಂಗ್ಲೆಂಡ್ ಯುವ ಆಟಗಾರ ಜಾಕಬ್ ಬೆಥಲ್ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಕೇವಲ 46 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಗಳೊಂದಿಗೆ ಅಜೇಯರಾಗಿ ಉಳಿದಿದ್ದರು. ಬಿಷ್ಣೋಯ್ ನೋ ಬಾಲ್ಸ್ ನೀಡಿದ್ದ ಉತ್ಸಾಹದೊಂದಿಗೆ ಬೆಥಲ್ ಪಂದ್ಯವನ್ನು ಒಂದು ಓವರ್ ಬಾಕಿ ಇರುವಂತೆಯೇ ಗೆದ್ದು ಬೀಗಿದ್ದರು. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಯೊಂದಿಗೆ ಮುನ್ನಡೆಯನ್ನು ಪಡೆದುಕೊಂಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports