Shubman Gill: ಚರಿತ್ರೆ ಸೃಷ್ಟಿಸಿದ ಶುಭ್​ಮನ್ ಗಿಲ್! ಏಕದಿನದಲ್ಲಿ ವೇಗವಾಗಿ ದ್ವಿಶತಕ ಸಿಡಿಸಿ ಸಾರ್ವಕಾಲಿಕ ದಾಖಲೆ ಬ್ರೇಕ್ ಮಾಡಿದ ಕ್ಯಾಪ್ಟನ್ | ಕ್ರೀಡಾ ಸುದ್ದಿ | ACTPnews

ಶುಭ್​ಮನ್ ಗಿಲ್ (PTI Photo)


Last Updated:

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 117 ಎಸೆತಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್​ಮನ್ ಗಿಲ್ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಶುಭ್​ಮನ್ ಗಿಲ್ (PTI Photo)
ಶುಭ್​ಮನ್ ಗಿಲ್ (PTI Photo)

ವೆಸ್ಟ್​ ಇಂಡೀಸ್ ವಿರುದ್ಧ ಗುವಾಹಟಿಯಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್​ಮನ್ ಗಿಲ್ ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೇವಲ 117 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಚರಿತ್ರೆ ಸೃಷ್ಟಿಸಿದ್ದಾರೆ.  406 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಈ ಗುರಿ ಕಠಿಣವಾಗಬಹುದು ಎಂದೇ ಭಾವಿಸಲಾಗಿತ್ತು. ಆದರೆ ರೋಹಿತ್ ಶರ್ಮಾ (101) ಹಾಗೂ ಶುಭ್​ಮನ್ ಗಿಲ್ ದ್ವಿಶತಕ ಸಿಡಿಸಿ ಲೆಕ್ಕಾಚಾರ ಉಲ್ಟಾ ಮಾಡಿದ್ದಾರೆ.  ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ವೇಗದ ಗಿಲ್ ವೇಗದ ದ್ವಿಶತಕ ಸಿಡಿಸಿದ ಬ್ಯಾಟರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್‌ ತಂಡ ಜಾನ್ ಕ್ಯಾಂಪ್ಬೆಲ್ (101 ರನ್), ಶಾಯ್ ಹೋಪ್ (104 ರನ್) ಮತ್ತು ಅಮೀರ್ ಜಂಗೂ (114 ರನ್) ಅವರ ಶತಕಗಳ ನೆರವಿನಿಂದ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್​ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇದು ಏಕದಿನ ಕ್ರಿಕೆಟ್​​ನಲ್ಲಿ ಕೆರಿಬಿಯನ್ ಪಡೆಯ ಗರಿಷ್ಠ ಮೊತ್ತವಾಗಿತ್ತು.

406 ರನ್​ಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಭರ್ಜರಿ ಆರಂಭ ಪಡೆದುಕೊಂಡಿತು. ರೋಹಿತ್ ಶರ್ಮಾ (101) ಹಾಗೂ ನಾಯಕ ಗಿಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ  255 ರನ್​ಗಳ ಬೃಹತ್ ಜೊತೆಯಾಟ ನಡೆಸಿದರು.  ಆರಂಭಿಕನಾಗಿ ಕಣಕ್ಕಿಳಿದಿದ್ದ ಗಿಲ್  117 ಎಸೆತಗಳಲ್ಲಿ  24 ಬೌಂಡರಿ ಹಾಗೂ 7 ಸಿಕ್ಸರ್​ಗಳ ಸಹಿತ ದ್ವಿಶತಕ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ದ್ವಿಶತಕ ಸಾಧನೆ ಮಾಡಿದ ವಿಶ್ವದ ಕೇವಲ 2ನೇ ಬ್ಯಾಟರ್ ಎನಿಸಿಕೊಂಡರು.

ಶುಭ್ಮನ್ ಗಿಲ್ ಇದಕ್ಕೂ ಮುನ್ನ ನ್ಯೂಜಿಲ್ಯಾಂಡ್ ವಿರುದ್ಧ ದ್ವಿಶತಕ ಸಾಧನೆ ಮಾಡಿದ್ದರು. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 3 ಬಾರಿ  ದ್ವಿಶತಕ ಸಿಡಿಸಿದ ವಿಶ್ವದಾಖಲೆ ಹೊಂದಿದ್ದಾರೆ. ಒಟ್ಟಾರೆ ಇದು ಭಾರತೀಯ ಬ್ಯಾಟರ್​ಗಳಿಂದ ಬಂದ 8ನೇ ದ್ವಿಶತಕವಾಗಿದೆ. ಗಿಲ್ ಅಲ್ಲದೆ  ಸಚಿನ್​, ಸೆಹ್ವಾಗ್, ರೋಹಿತ್ ಹಾಗೂ ಇಶಾನ್ ಕಿಶನ್ ಭಾರತದ ಪರ ದ್ವಿಶತಕ ಸಾಧನೆ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed