ರಾವೆನ್ ಅನ್ನೊದು ಇಲ್ಲಿ ಕಾಗೆ ಹೆಸರಾಗಿದೆ. ಈ ಕಾಗೆಯ ಅಟ್ಟಹಾಸ ಬೇರೆ ಇದೆ. ಇದರ ಕಪ್ಪು ಬಣ್ಣವು ಭಯಗೊಳಿಸುತ್ತದೆ. ಸುಚೇಂದ್ರ ಪ್ರಸಾದ್ ಅವರ ಕಂಚಿನ ಕಂಠವು ಇಲ್ಲಿ ಗಮನ ಸೆಳೆಯುತ್ತದೆ.
ಪಿತೃಪಕ್ಷದ ದಿನ
(ಚಿತ್ರ ಕೃಪೆ: ರಾವೆನ್ ಸಿನಿಮಾ ಟೀಮ್)
ಇಡೀ ಚಿತ್ರದಲ್ಲಿ ಕಾಗೆ ಎಲ್ಲರಿಗೂ ಭಯ ಹುಟ್ಟಿಸುತ್ತದೆ. ಆ ರೀತಿಯ ಕಂಟೆಂಟ್‌ನ ಕತೆಯನ್ನ ನಿರ್ದೇಶಕ ವೇದ್ ಇಲ್ಲಿ ಮಾಡಿದ್ದಾರೆ. ಇದು ಇವರ ಚಿತ್ರ ಜೀವನದ ಎರಡು ಚಿತ್ರವೇ ಆಗಿದೆ.
ಇಲ್ಲಿ ಇನ್ನೂ ಒಂದು ವಿಶೇಷ ಇದೆ. ಪಿತೃಪಕ್ಷದ ಸಮಯದಲ್ಲಿ ಈ ಒಂದು ಚಿತ್ರದ ಟ್ರೈರಲ್ ಹಾಗೂ ಟೈಟಲ್ ಸಾಂಗ್ ರಿಲೀಸ್ ಆಗಿದೆ.
ಈ ಚಿತ್ರದಲ್ಲಿ ದಿಲೀಪ್ ಪೈ ಮತ್ತು ದೇವ್ ದೇವಯ್ಯ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಸ್ವಪ್ನ ಶೆಟ್ಟಿಗಾರ್, ರಾಣಿ, ಸುಚೇಂದ್ರ ಪ್ರಸಾದ್ ಇದ್ದಾರೆ.
ಲೀಲಾ ಮೋಹನ್, ದಿನೇಶ್ ಮಂಗಳೂರು, ವಿಶ್ವನಾಥ್ ಜಿ ಪಿ, ಚೈತ್ರಾ ರಾಮ್, ರಾಘವೇಂದ್ರ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ರಾವೆನ್ ಎಂಬ ಕಾಗೆ
(ಚಿತ್ರ ಕೃಪೆ: ರಾವೆನ್ ಸಿನಿಮಾ ಟೀಮ್)
ಕನ್ನಡದ ರಾವೆನ್ ಸಿನಿಮಾ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ತೆಲುಗು, ತಮಿಳು ಭಾಷೆಯಲ್ಲಿ ರಿಲೀಸ್ ಆಗುತ್ತದೆ. ಕೊರಿಯನ್ ಹಾಗೂ ಚೈನೀಸ್ ಭಾಷೆಯಲ್ಲೂ ಈ ರಾವೆನ್ ಸಿನಿಮಾ ತೆರೆ ಕಾಣುತ್ತಿದೆ.
;
ಈ ಚಿತ್ರದಲ್ಲಿ ದೇವ್ ದೇವಯ್ಯ ಪ್ರಮುಖ ಪಾತ್ರ ಮಾಡಿದ್ದಾರೆ. ಇವರ ಪಾತ್ರವು ಚೆನ್ನಾಗಿಯೆ ಇದೆ. ಈ ವಿಷಯವನ್ನ ಸ್ವತಃ ದೇವ್ ದೇವಯ್ಯ ಹೇಳಿಕೊಂಡಿದ್ದಾರೆ.
ಈ ಚಿತ್ರಕ್ಕೆ ಸಂಗೀತ ನಿರ್ದೇಶಕ MAD D ಮ್ಯೂಸಿಕ್ ಮಾಡಿದ್ದಾರೆ. ರಾಕೇಶ್ ಸಿ.ತಿಲಕ್ ಕ್ಯಾಮರಾವರ್ಕ್ ಮಾಡಿದ್ದಾರೆ. ಇವರು ತಮ್ಮ ಈ ರಾವೆನ್ ಚಿತ್ರದ ಕುರಿತು ಹೇಳಿಕೊಂಡಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ ಅಂತ ಹೇಳಬಹುದು.













