Shruti Haasan: ಮುಂಬೈ ನಂತರ ಚೆನ್ನೈನಲ್ಲಿ ಮನೆ ಖರೀದಿಸಿದ ಶ್ರುತಿ ಹಾಸನ್, ಗೃಹ ಪ್ರವೇಶ ಪೂಜೆ ಮಾಡಿದ ನಟಿ | Shruti Haasan buy new home in chennai performs pooja | | ACTPnews

ಶ್ರುತಿ ಹಾಸನ್


Last Updated:

Shruti Haasan: ಖ್ಯಾತ ನಟಿ ಶ್ರುತಿ ಹಾಸನ್ ಅವರು ಮುಂಬೈ ನಂತರ ಈಗ ಚೆನ್ನೈನಲ್ಲಿಯೂ ಹೊಸ ಮನೆ ಖರೀದಿ ಮಾಡಿದ್ದಾರೆ. ತಮ್ಮ ನೂತನ ಮನೆಯಲ್ಲಿ ಗೃಹ ಪ್ರವೇಶ ಪೂಜೆ ಮಾಡಿದ್ದಾರೆ.

ಶ್ರುತಿ ಹಾಸನ್
ಶ್ರುತಿ ಹಾಸನ್

ಬಹುಭಾಷಾ ನಟಿ, ಕಮಲ್ ಹಾಸನ್ ಅವರ ಮುದ್ದಿನ ಮಗಳು ಶ್ರುತಿ ಹಾಸನ್ ಚೆನ್ನೈನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ನಟಿ ತಮ್ಮ ಹೊಸ ಚೆನ್ನೈ ಮನೆಗೆ ಶಿಫ್ಟ್ ಆದರು. ಸಾಂಪ್ರದಾಯಿಕ ಪೂಜೆ ಮತ್ತು ಸಣ್ಣ ಫ್ಯಾಮಿಲಿ ಸೆಲೆಬ್ರೇಷನ್ ಜೊತೆ ನಟಿ ಹೊಸ ಮನೆಗೆ ಸಂಭ್ರಮದಿಂದ ಕಾಲಿಟ್ಟಿದ್ದಾರೆ.

ಕಳೆದ ವರ್ಷ, ಫರಾ ಖಾನ್ ಮುಂಬೈನಲ್ಲಿ ಶ್ರುತಿ ಹಾಸನ್ ಅವರನ್ನು ಭೇಟಿಯಾದಾಗ, ನಟಿ ಬಾಲಿವುಡ್​ ಖ್ಯಾತ ನಿರ್ಮಾಪಕಿಗೆ ನಗರದಲ್ಲಿನ ತಮ್ಮ ಸುಂದರವಾದ ಮನೆಯ ಹೋಮ್ ಟೂರ್ ನೀಡಿದ್ದರು.

ಈ ವರ್ಷ, ನಟಿ ತಮ್ಮ ಊರಿಗೆ ಹತ್ತಿರವಿರುವ ಚೆನ್ನೈನಲ್ಲಿ ಹೊಸ ಮನೆಯನ್ನು ಖರೀದಿಸಿದ್ದು ಇತ್ತೀಚೆಗೆ ಶ್ರುತಿ ತಮ್ಮ ಹೊಸ ಮನೆಯಲ್ಲಿ ಸಾಂಪ್ರದಾಯಿಕ ಗೃಹಪ್ರವೇಶ ಸಮಾರಂಭ ಮಾಡಿದ್ದಾರೆ.

ಶ್ರುತಿ ತನ್ನ ಹೊಸ ಮನೆಯೊಳಗೆ ನೆಲದ ಮೇಲೆ ಕುಳಿತು ಪೂಜೆಯಲ್ಲಿ ಭಾಗವಹಿಸುತ್ತಿರುವುದು ಕಂಡುಬಂದಿತು. ಫೋಟೋದಲ್ಲಿ ಈ ಶುಭ ಸಂದರ್ಭಕ್ಕಾಗಿ ಜೋಡಿಸಲಾದ ಸಿಹಿತಿಂಡಿಗಳು ಮತ್ತು ಅವರ ಹೊಸ ಮನೆಯ ಕೀಲಿಗಳನ್ನು ತೋರಿಸಿದವು. ಫೋಟೋಗಳನ್ನು ಅವರ ಫ್ಯಾನ್ಸ್ ಪೇಜ್​ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿವೆ.

“ಶ್ರುತಿ ಹಾಸನ್ ಸುಂದರವಾದ ಹೊಸ ಮನೆಗೆ ಹೆಜ್ಜೆ ಹಾಕಿದ್ದಾರೆ! ನಟಿ-ಗಾಯಕಿ ತಮ್ಮ ಚೆನ್ನೈನ ಹೊಸ ಮನೆಗೆ ಸಾಂಪ್ರದಾಯಿಕ ಗೃಹ ಪ್ರವೇಶ ಪೂಜೆ ಮಾಡಿದ್ದಾರೆ, ಪ್ರೀತಿ, ಆಶೀರ್ವಾದ ಮತ್ತು ಹೊಸ ಆರಂಭದಿಂದ ನಟಿ ಖುಷಿಯಾಗಿದ್ದಾರೆ ಎಂದು ಅಭಿಮಾನಿಗಳು ಈ ಫೋಟೋಸ್ ಶೇರ್ ಮಾಡಿದ್ದರು.

ಶ್ರುತಿಯ ಮುಂಬೈ ಮನೆಯು ಸಂಗೀತದ ಮೇಲಿನ ಅವರ ಉತ್ಸಾಹ, ಗೋಥಿಕ್ ಮತ್ತು ಹಳ್ಳಿ ಸೊಗಡಿನ ಅಲಂಕಾರದ ಮೇಲಿನ ಅವರ ಪ್ರೀತಿ ಮತ್ತು ಆದರದ ಬಗ್ಗೆ ಹೇಳುತ್ತದೆ. ಸಂಗೀತ ಕೊಠಡಿ, ಹಾಲ್ ಪ್ರದೇಶ ಮತ್ತು ಊಟದ ಮನೆ ಸೇರಿದಂತೆ ಮೂರು ವಿಭಾಗಗಳಾಗಿ ವಿಂಗಡಿಸಲಾದ ಲಿವಿಂಗ್ ರೂಮ್, ಬಣ್ಣ ಬಳಿಯದ ಗೋಡೆಗಳು, ಎತ್ತರದ ಛಾವಣಿಗಳು, ನೈಸರ್ಗಿಕ ಬೆಳಕು ಒಳಗೆ ಬರುವಂತೆ ಇಡಲಾಗಿರುವ ದೊಡ್ಡ ಕಿಟಕಿಗಳು, ರೋಮಾಂಚಕ ವರ್ಣಚಿತ್ರಗಳು ಮನೆಗೆ ಅದ್ಭುತವಾದ ಫೀಲ್ ಕೊಡುತ್ತದೆ.

ಪ್ರಪಂಚದಾದ್ಯಂತದ ಬೇರೆ ಬೇರೆ ಸ್ಥಳಗಳ ವಸ್ತುಗಳ ಸಂಗ್ರಹ ಮತ್ತು ಅವರು ಸಂಗ್ರಹಿಸಿದ ವೈಯಕ್ತಿಕ ಆಭರಣಗಳಿಗೆ ಮೀಸಲಾಗಿರುವ ಸ್ಥಳವೂ ಇದೆ. ಇದು ಕಮಲ್ ಹಾಸನ್ ಉಡುಗೊರೆಯಾಗಿ ನೀಡಿದ ಚಾಕು, ಪುಸ್ತಕಗಳು, ಪೋಸ್ಟರ್‌ಗಳು, ಡಿಸ್ಕೋ ಬಾಲ್‌ಗಳು ಮತ್ತು ಅನಿಮೆ ಪ್ರತಿಮೆಗಳನ್ನು ಒಳಗೊಂಡಿದೆ.

ನಟಿ 2025 ರಲ್ಲಿ ಮಣಿರತ್ನಂ ಅವರ ‘ಥಗ್ ಲೈಫ್’ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ನಟಿ ಸದ್ಯ ಕಮಲ್ ಹಾಸನ್, ರಜನಿಕಾಂತ್ ಅವರೊಂದಿಗೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಲಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed