Last Updated:
ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಕಳಪೆಯಾಗಿತ್ತು. ಸತತ ಎರಡು ಸರಣಿಗಳನ್ನು ಸೋತಿತು. ಈ ಪ್ರವಾಸಗಳಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ತಂಡವು ಆಡಿದ ಏಳು ಪಂದ್ಯಗಳಲ್ಲಿ ಒಂದನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ.
ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದಲ್ಲಿ ಟೀಮ್ ಇಂಡಿಯಾ (Team India), ಐರ್ಲೆಂಡ್ (Ireland) ಮತ್ತು ಇಂಗ್ಲೆಂಡ್ (England) ಪ್ರವಾಸದಲ್ಲಿ ಟಿ20 ಸರಣಿಗಳನ್ನು ಸೋತಿದೆ. ವಿಶ್ವ ಚಾಂಪಿಯನ್ (Champion) ಭಾರತ ತಂಡವು ಸತತ 2 ಎರಡು ಟಿ20 ಸರಣಿಗಳನ್ನು ಸೋತಿದೆ. ಭಾರತ ಆಡಿದ ಒಟ್ಟು ಏಳು ಪಂದ್ಯಗಳಲ್ಲಿ ಯಾವುದನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಭಾರತ ತಂಡ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಒಟ್ಟು ಏಳು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿತು. ಆದರೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಕೆಟ್ಟ ಪ್ರದರ್ಶನ(Performance)ದ ನಂತರ ಟೀಮ್ ಇಂಡಿಯಾವನ್ನು ಬಹಳ ತೀವ್ರವಾಗಿ ಟೀಕಿಸಲಾಗುತ್ತಿದೆ.
ಭಾರತ ಮೊದಲು ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯನ್ನು 0-2 ಅಂತರದಿಂದ ಸೋತಿತು. ನಂತರ ಇಂಗ್ಲೆಂಡ್ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತವನ್ನು 4-0 ಅಂತರದಿಂದ ಸೋಲಿಸಿತು. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಈಗ ನಡುವೆ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಸರಣಿ ಸೋಲಿಗೆ ಶ್ರೇಯಸ್ ಅಯ್ಯರ್ ಕಾರಣ ಕೊಟ್ಟಿದ್ದಾರೆ.
ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂಬುದಕ್ಕೆ ಶ್ರೇಯಸ್ ಪ್ರತಿಕ್ರಿಯಿಸಿದರು. ನಾವು ಒಂದು ಮೈದಾನದಿಂದ ಇನ್ನೊಂದಕ್ಕೆ ಆಡಬೇಕಾಗಿತ್ತು. ವಿವಿಧ ಮೈದಾನಗಳ ಗಾತ್ರ ಮತ್ತು ಪರಿಸ್ಥಿತಿಗಳಿಗೆ ನಾವು ನಿರೀಕ್ಷಿಸಿದಷ್ಟು ಬೇಗ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ ಎದುರಾಳಿ ತಂಡವು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ನಮ್ಮ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿತು. ಇವೆಲ್ಲವೂ ಒಟ್ಟಾಗಿ ಈ ಫಲಿತಾಂಶಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.
ವಿದೇಶಿ ಪ್ರವಾಸಕ್ಕೆ ಹೋದಾಗ ಸುಲಭವಾಗಿ ಸರಣಿ ಗೆಲ್ಲುತ್ತೇವೆ ಎಂದು ಭಾವಿಸಿದರೆ ಸಾಲದು. ಪರಿಸ್ಥಿತಿಗೆ ತಕ್ಕಂತೆ ಹೆಚ್ಚು ಶ್ರಮಿಸಬೇಕು. ಒತ್ತಡದಲ್ಲಿ ಕಲಿಯುವುದು ನನ್ನನ್ನು ಉತ್ತಮ ಆಟಗಾರ ಮತ್ತು ನಾಯಕನನ್ನಾಗಿ ಮಾಡುತ್ತದೆ. ವಿದೇಶಿ ಪರಿಸ್ಥಿತಿಗಳಿಗೆ ತಂಡವನ್ನು ಚೆನ್ನಾಗಿ ಸಿದ್ಧಪಡಿಸುವುದು ಮತ್ತು ಆಟಗಾರರ ನಡುವೆ ಉತ್ತಮ ಸಮನ್ವಯ ಬೆಳೆಸುವುದೇ ನಮ್ಮ ಮುಖ್ಯ ಗುರಿ. ಆ ದಿಕ್ಕಿನಲ್ಲಿ ನಾವು ಮುಂದುವರಿಯುತ್ತೇವೆ ಎಂದು ನಾಯಕ ಶ್ರೇಯಸ್ ಅಯ್ಯರ್ ಭರವಸೆ ನೀಡಿದ್ದಾರೆ.
ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 23ರಂದು ಪ್ರಾರಂಭವಾಗಲಿದೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಘೋಷಿಸಲಾಗಿದೆ. ಈಗಾಗಲೇ ಭಾರತ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಗಾಯಗೊಂಡಿದ್ದರು. ಇದರಿಂದಾಗಿ ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಿಂದ ಹೊರಗುಳಿದಿದ್ದರು. ವರುಣ್ ಚಕ್ರವರ್ತಿಯನ್ನು ಹೊರಗಿಡಲಾಗಿರುವುದರಿಂದ, ರವಿ ಬಿಷ್ಣೋಯ್ ಜಿಂಬಾಬ್ವೆ ವಿರುದ್ಧದ ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.














