S Janaki: ಗಾಯಕಿಯಾಗಿ ಮಾತ್ರವಲ್ಲ, ನಟಿಯಾಗಿಯೂ ಮಿಂಚಿದ್ದ ಎಸ್. ಜಾನಕಿ; ’96’ ಸಿನಿಮಾದಲ್ಲಿ ಉಳಿದಿದೆ ಅಪರೂಪದ ನೆನಪು | | ACTPnews

ಎಸ್. ಜಾನಕಿ


Last Updated:

ಸಾವಿರಾರು ಹಾಡುಗಳನ್ನು ಹಾಡಿದ್ದರೂ ನಟನೆಯಿಂದ ದೂರವೇ ಉಳಿದಿದ್ದ ಎಸ್. ಜಾನಕಿ ಅವರು ನಿರ್ದೇಶಕ ಸಿ. ಪ್ರೇಮ್ ಕುಮಾರ್ ಅವರ 96 ಚಿತ್ರದ ಮೂಲಕ ಮೊದಲ ಬಾರಿಗೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು.

ಎಸ್. ಜಾನಕಿ
ಎಸ್. ಜಾನಕಿ

ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸಂಗೀತ ಲೋಕವನ್ನು ತಮ್ಮ ಮಧುರ ಕಂಠದಿಂದ ಶ್ರೀಮಂತಗೊಳಿಸಿದ ಗಾನಕೋಗಿಲೆ ಎಸ್. ಜಾನಕಿ (S. Janaki) ಅವರು ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಸಾವಿರಾರು ಅಮರ ಗೀತೆಗಳ ಮೂಲಕ ಸಂಗೀತ ಪ್ರೇಮಿಗಳ ಮನ ಗೆದ್ದಿದ್ದ ಅವರು, ಬೆಳ್ಳಿಪರದೆಯ ಮೇಲೆ ನಟಿಸುವ ಅವಕಾಶಗಳು ಬಂದರೂ ಅದರಿಂದ ದೂರವೇ ಉಳಿದಿದ್ದರು. ಆದರೆ ಎಲ್ಲರನ್ನೂ ಅಚ್ಚರಿಗೊಳಿಸುವಂತೆ 2018ರಲ್ಲಿ ಬಿಡುಗಡೆಯಾದ ತಮಿಳಿನ ಸೂಪರ್ ಹಿಟ್ ಸಿನಿಮಾ 96ನಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿಯಾಗಿದ್ದ ಎಸ್. ಜಾನಕಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದರು. ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡ ಅವರು, ಅನೇಕ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದು ಸಂಗೀತ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ್ದರು.

ಸಾವಿರಾರು ಹಾಡುಗಳನ್ನು ಹಾಡಿದ್ದರೂ ನಟನೆಯಿಂದ ದೂರವೇ ಉಳಿದಿದ್ದ ಎಸ್. ಜಾನಕಿ ಅವರು ನಿರ್ದೇಶಕ ಸಿ. ಪ್ರೇಮ್ ಕುಮಾರ್ ಅವರ 96 ಚಿತ್ರದ ಮೂಲಕ ಮೊದಲ ಬಾರಿಗೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು.

ಹೀಗಿರುವಾಗ ಒಂದು ದಿನ (ರಾಮ್) ವಿಜಯ್ ಸೇತುಪತಿ ಹಾಗೂ ಜಾನು(ತ್ರಿಶಾ) ಎಸ್. ಜಾನಕಿ ಅವರ ಮನೆ ಮುಂದೆ ಹೋಗಿ ಫೋಟೋ ತೆಗೆದುಕೊಳ್ಳುತ್ತಿರುತ್ತಾರೆ. ಈ ವೇಳೆ ಎಸ್. ಜಾನಕಿ ಅವರು ಕಾರಿನಲ್ಲಿ ಅಲ್ಲಿಗೆ ಬರುತ್ತಾರೆ. ಆ ವೇಳೆ ಜಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿಕೊಳ್ಳುತ್ತಾರೆ. ಆಗ ಎಸ್. ಜಾನಕಿ ಅವರು ಇಬ್ಬರನ್ನೂ ತಮ್ಮ ಮನೆಗೆ ಕರೆಯುತ್ತಾರೆ. ಜೊತೆಗೆ ಮನೆಯಲ್ಲಿ ಒಟ್ಟಾಗಿ ಕೂತು ಕೆಲ ಹೊತ್ತು ಸಮಯ ಕಳೆಯುವ ಸೀನ್ ಆಗಿರುತ್ತದೆ.

ಚಿತ್ರದ ಪ್ರಮುಖ ಆಕರ್ಷಣೆಯಾಗಬಹುದಾದ ಈ ದೃಶ್ಯವನ್ನು ಅಂತಿಮವಾಗಿ ಥಿಯೇಟರ್‌ನಲ್ಲಿ ಬಿಡುಗಡೆಯಾದ ಆವೃತ್ತಿಯಿಂದ ತೆಗೆದುಹಾಕಲಾಗಿತ್ತು.

ನಂತರ ಈ ಡಿಲೀಟೆಡ್ ದೃಶ್ಯವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಲಕ್ಷಾಂತರ ಮಂದಿ ಈ ದೃಶ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವಿಶೇಷವಾಗಿ ಎಸ್. ಜಾನಕಿ ಅವರ ಅಭಿಮಾನಿಗಳಿಗೆ ಇದು ಅಮೂಲ್ಯ ನೆನಪಾಗಿ ಉಳಿಯಿತು.

ಎಸ್. ಜಾನಕಿ ಅವರು 2016ರಲ್ಲಿ ಹಿನ್ನೆಲೆ ಗಾಯನಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದರು. ದಶಕಗಳ ಕಾಲ ಭಾರತೀಯ ಸಂಗೀತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ಅವರು, ತಮ್ಮ ಹಾಡುಗಳ ಮೂಲಕ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಜೀವಂತವಾಗಿದ್ದಾರೆ.

ಇಂದು ಜಾನಕಿಯಮ್ಮ ನಮ್ಮೊಂದಿಗಿಲ್ಲದಿದ್ದರೂ, ಅವರ ಮಧುರ ಧ್ವನಿ, ಅಮರ ಗೀತೆಗಳು ಸಂಗೀತ ಹಾಗೂ ಚಿತ್ರರಂಗದ ಇತಿಹಾಸದಲ್ಲಿ ಸದಾ ವಿಶೇಷ ಸ್ಥಾನವನ್ನು ಪಡೆದುಕೊಂಡಿರಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed