Shocking News: 13 ವರ್ಷದ ಬಾಲಕಿಯ ಮೇಲೆ 30 ಕಾಮುಕರಿಂದ 4 ದಿನಗಳ ಕಾಲ ನಿರಂತರ ಗ್ಯಾಂಗ್ ರೇಪ್! ಬೆಚ್ಚಿಬೀಳಿಸುತ್ತೆ ಕ್ರೌರ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಐದು ದಿನಗಳ ಕಾಲ ನಗರದಾದ್ಯಂತ ಹಲವಾರು ಹೋಟೆಲ್‌ಗಳಲ್ಲಿ 30 ಕ್ಕೂ ಹೆಚ್ಚು ಪುರುಷರು ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

News18
News18

ಜೈಸಲ್ಮೇರ್: 13 ವರ್ಷದ ಶಾಲಾ ಬಾಲಕಿಯ ಮೇಲೆ ನಾಲ್ಕು ದಿನಗಳ ಕಾಲ ಸುಮಾರು 30ಕ್ಕೂ ಮಂದಿ ನಿರಂತರವಾಗಿ ಲೈಂಗಿಕ ದೌರ್ಜನ್ಯ (Sexual Harassment) ಎಸಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ (Gang Rape) ನಡೆದಿದೆ ಎಂದು ತಿಳಿದು ಬಂದಿದೆ.

ಶ್ರೀಗಂಗಾನಗರದಲ್ಲಿ 8 ನೇ ತರಗತಿ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕಾಮುಕರ ಪೈಕಿ 12 ಮಂದಿಯನ್ನು ಬಂಧಿಸಲಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವ್ಯಾಪಕ ತನಿಖೆ ನಡೆಸಿದ್ದು, ಕಳೆದ ವಾರ ಶನಿವಾರ ಈ ಘಟನೆ ಬೆಳಕಿಗೆ ಬಂದ ನಂತರ ಇಡೀ ಸಂಚಲನ ಸೃಷ್ಟಿಸಿದೆ.

ಹೋಟೆಲ್‌ಗಳು ನೆಲಸಮ

ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎನ್ನಲಾದ ನಾಲ್ಕು ಹೋಟೆಲ್‌ಗಳನ್ನು ಕಳೆದ ಮಂಗಳವಾರ ತಡರಾತ್ರಿ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ರಾಜಸ್ಥಾನದಲ್ಲಿ ನಡೆದ ಇತ್ತೀಚಿನ ಅತ್ಯಂತ ಆಘಾತಕಾರಿ ಅತ್ಯಾಚಾರ ಪ್ರಕರಣಗಳಲ್ಲಿ ಇದು ಒಂದಾಗಿದ್ದು, ಕೃತ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಲೇ ಇದೆ.

ನಾಲ್ಕು ಹೋಟೆಲ್‌ಗಳನ್ನು ನೆಲಸಮಗೊಳಿಸಿರುವ ನಿರ್ಧಾರವನ್ನು ಜಿಲ್ಲಾಡಳಿತ ಮತ್ತು ಪೊಲೀಸರು ಮಾಡಿದ್ದು, ಆಪಾದಿತ ಅಪರಾಧಕ್ಕೆ ಸಂಬಂಧಿಸಿದ ಹೋಟೆಲ್ ಕಟ್ಟಡಗಳನ್ನು ನೆಲಸಮಗೊಳಿಸಲು ಬುಲ್ಡೋಜರ್‌ಗಳನ್ನು ನಿಯೋಜಿಸಲಾಗಿದೆ. ಆರೋಪಿಗಳು ಸಾಧ್ಯವಾದಷ್ಟು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರಿಶಂಕರ್ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಜೂನ್ 18 ರಂದು ಬಾಲಕಿ ಮನೆಯಿಂದ ಕಾಣೆಯಾದ ನಂತರ ರಿಕ್ಷಾ ಚಾಲಕನೊಬ್ಬ ಆಕೆಯನ್ನು ಹೋಟೆಲ್ ಮಾಲೀಕರಿಗೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಐದು ದಿನಗಳ ಕಾಲ ನಗರದಾದ್ಯಂತ ಹಲವಾರು ಹೋಟೆಲ್‌ಗಳಲ್ಲಿ 30 ಕ್ಕೂ ಹೆಚ್ಚು ಪುರುಷರು ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ಪೊಲೀಸರು ಇದುವರೆಗೆ 12 ಆರೋಪಿಗಳನ್ನು ಬಂಧಿಸಿದ್ದು, ಉಳಿದ ಶಂಕಿತರನ್ನು ಗುರುತಿಸಲು ಮತ್ತು ಬಂಧಿಸಲು ತನಿಖೆ ಮುಂದುವರೆದಿದೆ.

ಆಪಾದಿತ ಸಾಮೂಹಿಕ ಅತ್ಯಾಚಾರ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಅಕ್ರಮ ಹೋಟೆಲ್‌ಗಳನ್ನು ಕೆಡವಿ, ಅದಕ್ಕೆ ಕಾರಣರಾದವರಿಗೆ ಮರಣದಂಡನೆ ವಿಧಿಸಬೇಕೆಂದು ಜನರು ಒತ್ತಾಯಿಸಿದ್ದಾರೆ. ಆಡಳಿತವು ಅಪರಾಧವನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಮತ್ತು ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಕೂಡ ಪ್ರತಿಭಟನೆಗಳನ್ನು ನಡೆಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed