Last Updated:
ಪೆದ್ದಿ ಚಿತ್ರ ಎಲ್ಲೆಡೆ ರಿಲೀಸ್ ಆಗುತ್ತಿದೆ. ಪ್ರಚಾರವೂ ಜೋರಾಗಿಯೇ ಆಗಿದೆ. ಕಟೌಟ್‌ಗಳನ್ನು ನಿಲ್ಲಿಸಲಾಗಿದೆ. ಈ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ ಜೋರಾಗಿಯೇ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಶಿವರಾಜ್ ಕುಮಾರ್ (Shiva Rajkumar) ಮತ್ತು ರಾಮ್ ಚರಣ್ (Ram Charan) ಅಭಿನಯದ ಪೆದ್ದಿ ಚಿತ್ರದ (Peddi Movie) ಕ್ರೇಜ್ ಇದ್ದೇ ಇದೆ. ಈ ಸಿನಿಮಾದ ಪ್ರಚಾರವನ್ನು ಸಿನಿಮಾ ತಂಡ ಜೋರಾಗಿಯೇ ಮಾಡಿದೆ. ದಕ್ಷಿಣದ ಅಷ್ಟು ಭಾಷೆಯಲ್ಲೂ ಈ ಸಿನಿಮಾದ ಪ್ರಚಾರ ಆಗಿದೆ. ಬಾಲಿವುಡ್ ಅಲ್ಲೂ ಈ ಸಿನಿಮಾದ ಪ್ರಮೋಷನ್ ಆಗಿದೆ. ಅಷ್ಟೊಂದು ಪ್ರಮೋಟ್ ಮಾಡಿರೋ ಈ ಚಿತ್ರ ತಂಡ ಇಲ್ಲಿ ರಾಮ್ ಚರಣ್ (Ram Charan) ಪಾತ್ರಕಷ್ಟೆ ಮಹತ್ವ ಕೊಟ್ಟಿಲ್ಲ. ಶಿವಣ್ಣನ ಪಾತ್ರಕ್ಕೂ ಗೌರವ ಕೊಟ್ಟಿದ್ದಾರೆ. ಥಿಯೇಟರ್ ಅಲ್ಲಿ ಶಿವಣ್ಣ ಕಟೌಟ್ ದೊಡ್ಡದಿದೆ. ರಾಮ್ ಚರಣ್ ಕಟೌಟ್ ಕಳೆಗಡೆ ಬರುತ್ತದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಶಿವಣ್ಣನ ಕಟೌಟ್ ಅಬ್ಬರ
ಪೂರ್ಣ ಪ್ರಮಾಣದ ಈ ಒಂದು ಪಾತ್ರದಿಂದಲ್ಲಿ ತೆಲುಗು ಪ್ರೇಕ್ಷಕರ ದಿಲ್ ಅನ್ನ ಶಿವಣ್ಣ ಈಗಾಗಲೇ ಒಂದು ಹಂತಕ್ಕೆ ಕದ್ದು ಬಿಟ್ಟಿದ್ದಾರೆ. ಕನ್ನಡಿಗರಂತೂ ಹಬ್ಬ ಮಾಡುತ್ತಿದ್ದಾರೆ. “ಆಟ ಗೆಲ್ಲೋದಲ್ಲ….ಬದುಕುವುದು ಮುಖ್ಯ” ಅನ್ನುವ ಡೈಲಾಗ್ ವೈರಲ್ ಆಗಿದೆ.
ಬೆಂಗಳೂರಿನ ಥಿಯೇಟರ್ ಅಲ್ಲಿ ಕಟೌಟ್ ನಿಲ್ಲಿಸಲಾಗಿದೆ. ಇಲ್ಲಿ ಪೆದ್ದಿ ರಾಮ್ ಚರಣ್ ಹಾಗೂ ಶಿವಣ್ಣ ಕಟೌಟ್ ಒಟ್ಟಿಗೆ ನಿಲ್ಲಿಸಲಾಗಿದೆ.
ಇಲ್ಲಿ ಒಂದು ವಿಶೇಷ ಇದೆ. ಸಾಮಾನ್ಯವಾಗಿ ಚಿತ್ರದ ನಾಯಕನ ಕಟೌಟ್ ನಿಲ್ಲಿಸಲಾಗುತ್ತದೆ. ಅದು ಇಲ್ಲೂ ಆಗಿದೆ. ಆದರೆ, ಇಲ್ಲಿ ಶಿವಣ್ಣನ ಕಟೌಟ್ ಕೂಡ ಇದೆ. ಶಿವಣ್ಣನ ಕಟೌಟ್ ಎತ್ತರವಾಗಿದೆ. ರಾಮ್ ಚರಣ್ ಕಟೌಟ್ ಅದರ ಕೆಳಗೆ ಇದೆ. ಹೀಗೆ ಶಿವಣ್ಣನಿಗೆ ಪೆದ್ದಿ ತಂಡ ಗೌರವ ಸಲ್ಲಿಸಿದೆ.
ಗೌರ್ ನಾಯ್ಡು ಪಾತ್ರ ಇಲ್ಲಿ ಮಹತ್ವ ಪಾತ್ರವೇ ಆಗಿದೆ. ಪೆದ್ದಿಯ ಜರ್ನಿಯಲ್ಲಿ ಬರುವ ಒಂದು ಪ್ರಮುಖ ರೋಲ್ ಕೂಡ ಆಗಿದೆ. ಆದರೆ, ಅಷ್ಟೆ ಎಫೆಕ್ಟಿವ್ ರೋಲ್ ಕೂಡ ಇದಾಗಿದೆ.
ಬೆಂಗಳೂರಿನಲ್ಲಿ ಕಟೌಟ್
ಈ ಒಂದು ಪಾತ್ರದ ಒಟ್ಟು ಸಮಯ 20 ನಿಮಿಷ ಅನ್ನುವ ಸುದ್ದಿನೂ ಇದೆ. ರಾಮ್ ಚರಣ್ ಹೇಳುವಂತೆ ಸುಮಾರು ನಾಲ್ಕು ದೃಶ್ಯದಲ್ಲಿ ಶಿವಣ್ಣ ಬರ್ತಾರೆ ನೋಡಿ.
ಪೆದ್ದಿ ಚಿತ್ರದ ಕಟೌಟ್ ಹೈದ್ರಾಬಾದ್ ಅಲ್ಲೂ ಇವೆ. ಈ ಚಿತ್ರ ರಿಲೀಸ್ ಆಗುತ್ತಿರೋ ಗೋಕುಲಂ ಥಿಯೇಟರ್ ಅಲ್ಲಿ ಕಟೌಟ್ ಇವೆ. ಬ್ಯಾನರ್ ಕೂಡ ಕಟ್ಟಿದ್ದಾರೆ. ಇಲ್ಲೂ ಶಿವಣ್ಣನ ಪಾತ್ರದ ಕ್ಯಾರೆಕ್ಟರ್ ಹೈಲೈಟ್ ಆಗಿದೆ.
ಈ ಚಿತ್ರದಲ್ಲಿ ಪೆದ್ದಿ ರಾಮ್ ಚರಣ್ ಅವರಿಗೆ ಜಾನ್ವಿ ಕಪೂರ್ ಜೋಡಿ ಆಗಿದ್ದಾರೆ. ಚಿತ್ರದಲ್ಲಿ ಇನ್ನು ಹಲವು ಪಾತ್ರಗಳೂ ಇವೆ. ಜಗಪತಿ ಬಾಬು ನಿಮಗೆ ಗುರುತೇ ಸಿಗೋದಿಲ್ಲ.
ಆ ರೀತಿನೇ ಈ ಒಂದು ರೋಲ್ ಇದೆ. ಶಿವಣ್ಣನ ರೋಲ್ ಹೇಗಿದೆ ಅನ್ನೋದು ತಿಳಿದೇ ಇದೆ. ಕ್ರೀಡಾಧರಿಸಿದ ಈ ಚಿತ್ರವನ್ನ ಬುಚಿ ಬಾಬು ಸನಾ ಡೈರೆಕ್ಷನ್ ಮಾಡಿದ್ದಾರೆ. ರತ್ನವೇಲು ಕ್ಯಾಮರಾವರ್ಕ್ ಮಾಡಿದ್ದಾರೆ.
ಎ.ಆರ್.ರೆಹಮಾನ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಈ ಚಿತ್ರ ಇತರರಿಗೂ ಸ್ಪೂರ್ತಿ ಆಗುವ ರೀತಿನೇ ಇದೆ ಅಂತ ರಾಮ್ ಚರಣ್ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 03, 2026 10:39 PM IST













