Shiva Rajkumar: ಶಿವಣ್ಣನ ‘ಫನ್’ ಟಾಸ್ಟಿಕ್ ಕ್ಷಣಗಳು; ಮಗಳು ನಿವೇದಿತಾ ಫುಲ್ ಖುಷ್! | | ACTPnews

ಶಿವಣ್ಣನ 'ಫನ್' ಟಾಸ್ಟಿಕ್ ಕ್ಷಣಗಳು; ಮಗಳು ನಿವೇದಿತಾ ಫುಲ್ ಖುಷ್!


Last Updated:

ಶಿವರಾಜ್ ಕುಮಾರ್ ರಾಕ್ಸ್, ಗೀತಾ ಶಿವರಾಜ್ ಕುಮಾರ್ ಶಾಕ್. ಈ ಲೈನ್‌ ಕಾಮೆಂಟ್ ಬಾಕ್ಸ್ ಅಲ್ಲಿಯ ಇದೆ. ಇದನ್ನ ಬರೆಯೋಕೆ ಕಾರಣವೂ ಇದೆ. ಶಿವಣ್ಣನ ಆ ಒಂದು ಫನ್ ವಿಡಿಯೋ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಅದರ ವಿವರ ಇಲ್ಲಿದೆ ಓದಿ.

ಶಿವಣ್ಣನ 'ಫನ್' ಟಾಸ್ಟಿಕ್ ಕ್ಷಣಗಳು; ಮಗಳು ನಿವೇದಿತಾ ಫುಲ್ ಖುಷ್!
ಶಿವಣ್ಣನ ‘ಫನ್’ ಟಾಸ್ಟಿಕ್ ಕ್ಷಣಗಳು; ಮಗಳು ನಿವೇದಿತಾ ಫುಲ್ ಖುಷ್!

ಶಿವರಾಜ್ ಕುಮಾರ್ (Shiva Rajkumar) ಅವರು ಒಂದು ಕ್ಯಾಂಡಲ್ ತೆಗೆದುಕೊಂಡಿದ್ದಾರೆ. ಕೈಯಲ್ಲಿ ಮೊದಲೆ ಇದ್ದ ಸ್ಪೂನ್ ಮೇಲೆ ಅದನ್ನ ಇಟ್ಟಿದ್ದಾರೆ. ಅದನ್ನ ಹಚ್ಚಿದ್ದಾರೆ. ಆ ಸ್ಪೂನ್ ಅನ್ನ ಬಾಯಲ್ಲಿ ಇಟ್ಟುಕೊಂಡು ನಿಧಾನಕ್ಕೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಹಿಂದೆ ನಿಂತ ಮಗಳು ನಿವೇದಿತಾ ಶಿವರಾಜ್‌ ಕುಮಾರ್ (Niveditha Shiva Rajkumar) ಅಪ್ಪನ ಖುಷಿ ಕಂಡು ಸಂತೋಷಪಟ್ಟಿದ್ದಾರೆ. ಆದರೆ, ಪಕ್ಕದಲ್ಲಿಯೇ ಇದ್ದ ಪತ್ನಿ ಗೀತಾ ಶಿವರಾಜ್‌ (Geetha Shiva Rajkumar) ಅವರು ಶಿವಣ್ಣನ (Shivanna) ಆಟವನ್ನ ನೋಡ್ತಾನೇ ಇದ್ದಾರೆ. ಈ ಎಲ್ಲ ದೃಶ್ಯ ಕಂಡು ಬಂದಿರೋದು ಬೇರೆ ಎಲ್ಲೋ ಅಲ್ಲ. ಗೀತಾ ಅವರ ಜನ್ಮ ದಿನದ ಸಂಭ್ರಮದಲ್ಲಿಯೇ ಶಿವಣ್ಣ ಇಷ್ಟು ಖುಷಿಯಲ್ಲಿಯೇ ಕಾಣಿಸಿಕೊಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿಷಯ ಮುಂದೆ ಇದೆ ಓದಿ.

ಶಿವಣ್ಣನ ಫನ್‌ಗಳು…

ಶಿವರಾಜ್ ಕುಮಾರ್ ತಮಾಷೆ ಮಾಡ್ತಾರೆ. ಜಾಲಿ ಜಾಲಿ ಆಗಿಯೂ ಇರ್ತಾರೆ. ಸಿಟ್ಟು ಮಾಡಿಕೊಳ್ಳುವುದು ಇದೆ. ಮನೆಯಲ್ಲೂ ಹಾಗೆ ಇರ್ತಾರೆ. ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬದ ದಿನವೂ ಅಷ್ಟೆ ಖುಷಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ.
geetha birthday celebration Shivanna Fun Moments video viral

ವಿಡಿಯೋ ನೋಡಿದವ್ರು ಏನಂದ್ರು

(ಚಿತ್ರ ಕೃಪೆ: ಸುದ್ದಿ ಮನೆ ಯುಟ್ಯೂಬ್ ಇನ್‌ಸ್ಟಾಗ್ರಾಮ್)

ಗೀತಾ ಶಿವರಾಜ್ ಕುಮಾರ್ ಜನ್ಮ ದಿನವನ್ನ ಮನೆಯಲ್ಲಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಮನೆಯ ಮಂದಿಯೆಲ್ಲ ಇದರಲ್ಲಿ ಭಾಗಿ ಆಗಿದ್ದಾರೆ. ಮಗಳು ನಿವೇದಿತಾ, ಶಿವಣ್ಣ, ಗೀತಾ ಎಲ್ರೂ ಸೇರಿಯೇ ಕೇಕ್ ಕಟ್ ಮಾಡಿದ್ದಾರೆ.

ಶಿವಣ್ಣನ ಕ್ಯಾಂಡಲ್ ಫನ್

ಶಿವಣ್ಣ ಒಂದು ಕೆಲಸ ಮಾಡಿದ್ದಾರೆ. ಇಲ್ಲಿ ಕೇಕ್ ತಿನ್ನಲು ಸ್ಪೂನ್ ಇಟ್ಟಿದ್ದಾರೆ. ಅದರಲ್ಲಿಯೇ ಒಂದನ್ನ ತೆಗೆದುಕೊಂಡಿದ್ದಾರೆ. ಅದರ ಮೇಲೆ ಪುಟ್ಟ ಕ್ಯಾಂಡಲ್ ಹಚ್ಚಿದ್ದಾರೆ.

ಆ ಸ್ಪೂನ್ ಅನ್ನ ಬಾಯಲ್ಲಿ ಇಟ್ಟುಕೊಂಡಿದ್ದಾರೆ. ಅಷ್ಟೆ ನೋಡಿ, ನಿಂತಲ್ಲಿಯೇ ನಿಧಾನಕ್ಕೆ ಡ್ಯಾನ್ಸ್ ಮಾಡಿದ್ದಾರೆ. ಹಿಂದೆ ನಿಂತ ಮಗಳು ನಿವೇದಿತಾ ಶಿವರಾಜ್ ಕುಮಾರ್ ಇದನ್ನ ಕಂಡು ತುಂಬಾನೆ ಖುಷಿಪಟ್ಟಿದ್ದಾರೆ.

ಗೀತಾ ಅವರೇನು ಮಾಡಿದ್ರು

ಗೀತಾ ಶಿವರಾಜ್ ಕುಮಾರ್ ಸುಮ್ನೆ ನೋಡ್ತಾನೆ ಇದ್ದಾರೆ. ಆದರೆ, ಶಿವಣ್ಣ ತಮ್ಮ ಫನ್‌ ಮುಂದುವರೆಸಿದ್ದಾರೆ. ಈ ಕ್ಷಣದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಆಗಿದೆ. ಸುದ್ದಿ ಮನೆ ಯುಟ್ಯೂಬ್ ಚಾನೆಲ್ ಕೂಡ ತನ್ನ ಪೇಜ್ ಅಲ್ಲಿ ಇದನ್ನ ಹಂಚಿಕೊಂಡಿದೆ.

geetha birthday celebration Shivanna Fun Moments video viral

ಪೆಬ್ಬಾರ್ ಟೀಮ್ ವಿಶ್

(ಚಿತ್ರ ಕೃಪೆ: ಗೀತಾ ಪಿಕ್ಚರ್ಸ್ ಇನ್‌ಸ್ಟಾಗ್ರಾಮ್)

ಈ ಫನ್ ಪಾರ್ಟ್ ಬಿಟ್ರೆ ಇಲ್ಲೊಂದು ವಿಶೇಷವಾದ ಕ್ಷಣವೂ ಇದೆ. ಮನೆಯ ಸದಸ್ಯರಂತೇನೆ ಗೀತಾ ಅವರು ಮನೆಯ ಸಿಬ್ಬಂದಿಯನ್ನ ಕರೆದಿದ್ದಾರೆ. ಬರ್ತ್ ಡೇ ಸೆಲೆಬ್ರೇಷನ್ ಅಲ್ಲಿ ಎಲ್ಲರಿಗೂ ತಾವೇ ಕೇಕ್ ತಿನ್ನಿಸಿದ್ದಾರೆ. ಇದು ಕೂಡ ಗಮನ ಸೆಳೆಯುತ್ತದೆ.

ವಿಡಿಯೋ ನೋಡಿದವ್ರು ಏನಂದ್ರು

ಶಿವರಾಜ್ ಕುಮಾರ್ ಅವರ ಫನ್ ವಿಡಿಯೋ ಎಲ್ಲರೂ ಎಂಜಾಯ್ ಮಾಡಿದ್ದಾರೆ. ಒಂದಷ್ಟು ಚೆಂದದ ಕಾಂಪ್ಲಿಮೆಂಟ್ಸ್ ಕೂಡ ಬಂದಿವೆ.

ಆ ಕಾಂಪ್ಲಿಮೆಂಟ್‌ಗಳು ಹೀಗೆ ಇವೆ. ಇನ್ನು ಮಗು ತರ ಶಿವಣ್ಣ ಅಂತ ಅದ್ಯಾರೋ ಹೇಳಿದ್ದಾರೆ. ಆದರೆ, ಇಲ್ಲಿ ಇನ್ನೂ ಒಂದು ಕಾಂಪ್ಲಿಮೆಂಟ್ ಇದೆ. ಇದು ಮಜವಾಗಿಯೇ ಇದೆ. “ಶಿವಣ್ಣ ರಾಕ್ಸ್..ಗೀತಕ್ಕ ಶಾಕ್” ಅನ್ನೋದೇ ಈ ಕಾಂಪ್ಲಿಮೆಂಟ್ ಆಗಿದೆ. ಇನ್ನುಳಿದಂತೆ ಗೀತಾ ಅವರ ಜನ್ಮ ದಿನಕ್ಕೆ ಅನೇಕರು ವಿಶ್ ಮಾಡಿದ್ದಾರೆ.

ಪೆಬ್ಬಾರ್ ಟೀಮ್ ವಿಶ್

ಗೀತಾ ಶಿವರಾಜ್ ಕುಮಾರ್ ಅವರ ಜನ್ಮ ದಿನಕ್ಕೆ ಪೆಬ್ಬಾರ್ ಚಿತ್ರ ತಂಡವೂ ವಿಶ್ ಮಾಡಿದೆ. ಪೆಬ್ಬಾರ್ ಚಿತ್ರವನ್ನ ಶಿವಣ್ಣನ ಬ್ಯಾನರ್ ಅಲ್ಲಿಯೇ ನಿರ್ಮಿಸಲಾಗುತ್ತಿದೆ.

ವಿಶೇಷವಾಗಿ ಈ ಚಿತ್ರದಲ್ಲಿ ಧೀರೇನ್ ರಾಮ್‌ಕುಮಾರ್ ನಾಯಕರಾಗಿದ್ದಾರೆ. ಈ ಚಿತ್ರದ ಟೀಸರ್ ಮತ್ತು ಫೋಟೋಗಳು ಹೆಚ್ಚು ಗಮನ ಸೆಳೆದಿವೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed