Shiva Rajkumar: ಬೆಂಗಳೂರಿನಲ್ಲಿ ಅದ್ಧೂರಿ ಸೆಟ್, ಶಿವರಾಜ್‌ಕುಮಾರ್ ಮಸ್ತ್ ಲುಕ್! ಒರಿಜಿನಲ್ ಮಾನ್‌ಸ್ಟರ್ ಶೂಟಿಂಗ್ ಬಿಗ್ ಅಪ್‌ಡೇಟ್‌ | | ACTPnews

ಒರಿಜಿನಲ್ ಮಾನ್‌ಸ್ಟರ್ ಶೂಟಿಂಗ್ ಬಿಗ್ ಅಪ್‌ಡೇಟ್‌!(ಚಿತ್ರ ಕೃಪೆ: ಒರಿಜಿನಲ್ ಮಾನ್‌ಸ್ಟರ್ ಸಿನಿಮಾ ಟೀಮ್)


Last Updated:

ಶಿವರಾಜ್ ಕುಮಾರ್ ಅಭಿನಯದ ಒರಿಜಿನಲ್ ಮಾನ್‌ಸ್ಟರ್ ಚಿತ್ರದ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಆಗಿದೆ. ಡೈರೆಕ್ಟರ್ ಆರ್.ಚಂದ್ರು ಈ ಚಿತ್ರವನ್ನ ಅಷ್ಟೆ ತೀವ್ರಗತಿಯಲ್ಲಿಯೇ ತೆಗೆಯುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಒರಿಜಿನಲ್ ಮಾನ್‌ಸ್ಟರ್ ಶೂಟಿಂಗ್ ಬಿಗ್ ಅಪ್‌ಡೇಟ್‌!(ಚಿತ್ರ ಕೃಪೆ: ಒರಿಜಿನಲ್ ಮಾನ್‌ಸ್ಟರ್ ಸಿನಿಮಾ ಟೀಮ್)
ಒರಿಜಿನಲ್ ಮಾನ್‌ಸ್ಟರ್ ಶೂಟಿಂಗ್ ಬಿಗ್ ಅಪ್‌ಡೇಟ್‌!(ಚಿತ್ರ ಕೃಪೆ: ಒರಿಜಿನಲ್ ಮಾನ್‌ಸ್ಟರ್ ಸಿನಿಮಾ ಟೀಮ್)

ಡೈರೆಕ್ಟರ್ ಆರ್. ಚಂದ್ರು (R Chandru) ತೀವ್ರಗತಿಯಲ್ಲಿಯೆ ಒರಿಜಿನಲ್ ಮಾನ್‌ಸ್ಟರ್ (Original Monster) ಚಿತ್ರದ ಶೂಟಿಂಗ್ ಮಾಡುತ್ತಿದ್ದಾರೆ. ಮೊದಲ ಹಂತದ ಶೂಟಿಂಗ್ ಮುಗಿಸಿಯೇ ಬಿಟ್ಟಿದ್ದಾರೆ. ಮೈಲಾರಿ ಆದ್ಮೇಲೆ ಶಿವರಾಜ್‌ ಕುಮಾರ್ (Shiva Rajkumar) ಅವರನ್ನ ಕಬ್ಜ ಚಿತ್ರದಲ್ಲೂ ಡೈರೆಕ್ಷನ್ ಮಾಡಿದ್ದರು. ಆದರೆ, ಈ ಚಿತ್ರದಲ್ಲಿ ಶಿವಣ್ಣ ಗೆಸ್ಟ್ ರೋಲ್ ಮಾಡಿದ್ದರು. ಇದೀಗ ಒರಿಜಿನಲ್ ಮಾನ್‌ಸ್ಟರ್ ಚಿತ್ರದಲ್ಲಿ ಶಿವಣ್ಣನೇ (Shivanna) ಹೀರೋ ನೋಡಿ. ಈ ಚಿತ್ರದಲ್ಲಿ ಶಿವಣ್ಣನ ಗೆಟಪ್ ಬೇರೆ ಇದೆ. ಲುಕ್ ಮತ್ತು ಫೀಲ್ ಕೂಡ ಬೇರೆ ಇದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮೊದಲ ಹಂತದ ಶೂಟಿಂಗ್ ಕಂಪ್ಲೀಟ್

ಒರಿಜಿನಲ್ ಮಾನ್‌ಸ್ಟರ್ ಚಿತ್ರದ ಮೊದಲ ಹಂತದ ಶೂಟಿಂಗ್ ಪೂರ್ಣ ಆಗಿದೆ. ಇತ್ತೀಚಿಗಷ್ಟೆ ಈ ಚಿತ್ರಕ್ಕೆ ಮುಹೂರ್ತ ಆಗಿದೆ. ಬೆಂಗಳೂರಿನಲ್ಲಿಯೇ ಇದು ನಡೆದಿದೆ.
Shivarajkumar R Chandru Original Monster Movie Latest Updates

ಬೆಂಗಳೂರಿನಲ್ಲಿ ಅದ್ಧೂರಿ ಸೆಟ್, ಶಿವಣ್ಣನ ಮಸ್ತ್ ಲುಕ್

(ಚಿತ್ರ ಕೃಪೆ: ಒರಿಜಿನಲ್ ಮಾನ್‌ಸ್ಟರ್ ಸಿನಿಮಾ ಟೀಮ್)

ಆದರೆ, ಚಿತ್ರದ ಟೈಟಲ್ ಪೋಸ್ಟರ್ ಮುಂಬೈಯಲ್ಲಿ ರಿಲೀಸ್ ಆಗಿದೆ. ಈ ಚಿತ್ರ ಕನ್ನಡ ಮತ್ತು ಹಿಂದಿಯಲ್ಲಿ ತಯಾರಾಗುತ್ತಿದೆ. ಎರಡು ಭಾಷೆಯಲ್ಲಿ ತಯಾರಾಗುತ್ತಿರೋ ಈ ಚಿತ್ರದ ಮೊದಲ ಹಂತದ ಕೆಲಸ ತೀವ್ರಗತಿಯಲ್ಲಿಯೇ ಆಗಿದೆ.

ಬೆಂಗಳೂರಲ್ಲಿ ಅದ್ಧೂರಿ ಸೆಟ್

ಒರಿಜಿನಲ್ ಮಾನ್‌ಸ್ಟರ್ ಚಿತ್ರಕ್ಕಾಗಿಯೇ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ನಿರ್ಮಾಣ ಆಗಿದ್ದವು. ಈ ಒಂದು ಸೆಟ್ ಅಲ್ಲಿಯೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಆಗಿದೆ.

ಆರ್.ಚಂದ್ರು ಮಹತ್ವದ ಚಿತ್ರ

ಆರ್. ಚಂದ್ರು ಅವರು ಈ ಒಂದು ಮಹತ್ವದ ಪ್ರಾಜೆಕ್ಟ್ ಅನ್ನ ದೊಡ್ಡ ಬಜೆಟ್ ಅಲ್ಲಿಯೇ ತೆಗೆಯುತ್ತಿದ್ದಾರೆ. ತುಂಬಾ ದಿನಗಳಾದ್ಮೇಲೆ ಡೈರೆಕ್ಷನ್ ಮಾಡುತ್ತಿದ್ದಾರೆ.

ಶಿವಣ್ಣನ ವಿಚಾರದಲ್ಲಿ ಈ ಹಿಂದೆ ಮೈಲಾರಿ ಡೈರೆಕ್ಷನ್ ಮಾಡಿದ್ದರು. ಅದಾದ್ಮೇಲೆ ಕಬ್ಜ ಚಿತ್ರದಲ್ಲೂ ಡೈರೆಕ್ಷನ್ ಮಾಡಿದ್ದರು. ಇದೀಗ ಆರ್‌.ಚಂದ್ರು ಅವರು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

Shivarajkumar R Chandru Original Monster Movie Latest Updates

ಒರಿಜಿನಲ್ ಮಾನ್‌ಸ್ಟರ್ ಶೂಟಿಂಗ್ ಬಿಗ್ ಅಪ್‌ಡೇಟ್‌

(ಚಿತ್ರ ಕೃಪೆ: ಒರಿಜಿನಲ್ ಮಾನ್‌ಸ್ಟರ್ ಸಿನಿಮಾ ಟೀಮ್)

ಈ ಚಿತ್ರಕ್ಕೆ OM ಟೈಟಲ್

ಡೈರೆಕ್ಟರ್ ಆರ್.ಚಂದ್ರು ತಮ್ಮ ಈ ಚಿತ್ರಕ್ಕೆ ಚಿಕ್ಕದಾಗಿ OM ಅಂತಲೂ ಕರೆಯುತ್ತಿದ್ದಾರೆ. ಅಂದ್ರೆ ಒರಿಜಿನಲ್ ಮಾನ್‌ಸ್ಟರ್ ಅಂತಲೇ ಇದರ ಅರ್ಥ ಬರುತ್ತದೆ.

ಆದರೆ, ಶಿವಣ್ಣನ ಈ ಹಿಂದಿನ ಕಲ್ಟ್ ಓಂ ಚಿತ್ರಕ್ಕೂ ಇದಕ್ಕೂ ಏನು ಸಂಬಂಧ ಇಲ್ಲ. ಹಾಗೆ ಈ ಚಿತ್ರದ ಶಿವಣ್ಣ ಪೋಸ್ಟರ್‌ಗಳು ಗಮನ ಸೆಳೆಯುತ್ತಿವೆ. ಆ ಈ ರೀತಿನೇ ಈ ಒಂದು ಚಿತ್ರದಲ್ಲಿ ಶಿವಣ್ಣನ ಪಾತ್ರ ಇದೆ.

ಇಲ್ಲೂ ಲಾಂಗ್..

ಶಿವರಾಜ್ ಕುಮಾರ್ ಇಲ್ಲೂ ಲಾಂಗ್ ಹಿಡಿದಿದ್ದಾರೆ. ಹೆಗಲ ಮೇಲೆ ಲಾಂಗ್ ಇಟ್ಟುಕೊಂಡು ಬೈಕ್ ರೈಡ್ ಮಾಡ್ತಿರೋ ಪೋಸ್ಟರ್ ಕೂಡ ಇದೆ.

ಇನ್ನೂ ಒಂದು ಪೋಸ್ಟರ್ ಇದೆ. ಇದರಲ್ಲೂ ಶಿವಣ್ಣ ಲಾಂಗ್ ಹಿಡಿದಿದ್ದಾರೆ. ಇಲ್ಲಿ ಹೆಣಗಳು ಉರುಳಿರುವ ಚಿತ್ರಣವೂ ಇದೆ. ಒಟ್ಟಾರೆ, ಇಲ್ಲೂ ಶಿವಣ್ಣನ ಲಾಂಗ್ ಝಳಪಿಸಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed