Shiva Rajkumar: ಶಿವರಾಜ್ ಕುಮಾರ್ ಹೊಸ ಅವತಾರಗಳು, ಒಂದಕ್ಕಿಂತ ಒಂದು ದಿ ಬೆಸ್ಟ್! | | ACTPnews

shiva rajkumar kannada telugu movies different roles


ಬಾಂಡ್ ಪ್ರಕಾಶ್…

ರಾಜಕುಮಾರ್ ಅವರು ಬಾಂಡ್ ಸಿನಿಮಾ ಮಾಡಿದ್ದರು. ಈ ಬಾಂಡ್ ಸಿನಿಮಾಗಳ ಸ್ಪೂರ್ತಿಯಿಂದಲೇ ಕನ್ನಡದಲ್ಲಿ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರ ಬರ್ತಿದೆ.

ಹೇಮಂತ್ ರಾವ್ ಸಿನಿಮಾ

(ಚಿತ್ರ ಕೃಪೆ: ಹೇಮಂತ್ ರಾವ್ ಇನ್‌ಸ್ಟಾಗ್ರಾಮ್)

ಇದರಲ್ಲಿ ಡಾಲಿ ಧನಂಜಯ್ ಇದ್ದಾರೆ. ಇವರೂ ಇಲ್ಲಿ ಏಜೆಂಟ್ ಪಾತ್ರವನ್ನ ಮಾಡಿದ್ದಾರೆ. ಶಿವಣ್ಣ ಇಲ್ಲಿ ಏಜೆಂಟ್ ಪ್ರಕಾಶ್ ಪಾತ್ರವನ್ನ ಮಾಡಿದ್ದಾರೆ. ರಾಜಕುಮಾರ್ ಅವರು ತಮ್ಮ ಬಾಂಡ್ ಸರಣಿ ಸಿನಿಮಾಗಳಲ್ಲಿ ಪ್ರಕಾಶ್ ಅನ್ನುವ ಪಾತ್ರವನ್ನ ಮಾಡಿದ್ದಾರೆ. ಆ ಹೆಸರನ್ನೆ ಇಲ್ಲಿ ಶಿವಣ್ಣನ ಪಾತ್ರಕ್ಕೆ ಇಡಲಾಗಿದೆ.
ಹೇಮಂತ್ ರಾವ್ ಸಿನಿಮಾ

ಡೈರೆಕ್ಟರ್ ಹೇಮಂತ್ ರಾವ್ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣನಿಗೆ ಒಂದು ಅದ್ಭುತ ಲುಕ್ ಕೊಟ್ಟಿದ್ದಾರೆ. ಡಾಲಿ ಧನಂಜಯ್ ಪಾತ್ರಕ್ಕೂ ಒಳ್ಳೆ ಲುಕ್ ಇದೆ.

ಈ ರೀತಿ ಶಿವಣ್ಣ ಹೊಸ ಹೊಸ ರೀತಿಯ ಚಿತ್ರಗಳನ್ನ ಮಾಡ್ತಾನೇ ಬಂದಿದ್ದಾರೆ. ಎಲ್ಲ ಚಿತ್ರಗಳನ್ನ ಒಟ್ಟಿಗೆ ಇಟ್ಟು ನೋಡಿದರೆ, ಎಲ್ಲೂ ಅದು ಒಂದೇ ರೀತಿ ಇರೋದಿಲ್ಲ ಅಂತ ಸ್ವತಃ ಶಿವಣ್ಣ ಹೇಳ್ತಾರೆ. ಶಿವಣ್ಣ ಹೇಳಿರೋ ಈ ಮಾತನ್ನ ಡೈರೆಕ್ಟರ್ ಪವನ್ ಒಡೆಯರ್ ಅವರು ಫಸ್ಟ್ ನ್ಯೂಸ್ ಚಿಟ್ ಚಾಟ್ ಅಲ್ಲಿ ಹೇಳಿಕೊಂಡಿದ್ದಾರೆ.

ಬೇಲ್ ಸಿನಿಮಾ

ಬೇಲ್ ಸಿನಿಮಾದಲ್ಲಿ ಶಿವಣ್ಣನ ಪಾತ್ರಕ್ಕೆ ಮೀಸ್ ಇದೆ. ದಪ್ಪ ಮೀಸೆಯಲ್ಲಿಯೇ ಶಿವಣ್ಣ ಕಾಣಿಸುತ್ತಿದ್ದಾರೆ. ವಿಜಿ ಅನ್ನುವ ಪಾತ್ರವನ್ನ ಈ ಚಿತ್ರದಲ್ಲಿ ಮಾಡುತ್ತಿದ್ದಾರೆ.

shiva rajkumar kannada telugu movies different roles

ಬೇಲ್ ಸಿನಿಮಾ-ಪೆದ್ದಿ ಸಿನಿಮಾ

ಈ ಪಾತ್ರದಲ್ಲಿ ಶಿವಣ್ಣ ಅದ್ಭುತವಾಗಿ ಕಾಣಿಸುತ್ತಿದ್ದಾರೆ. “ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಆಗೋದಿಲ್ಲ” ಅನ್ನುವ ಇವರ ಡೈಲಾಗ್ ಹೆಚ್ಚು ವೈರಲ್ ಆಗುತ್ತಿದೆ. ಇದು ಶಿವಣ್ಣನಿಗೆ ಬರೆದಂತೇನೆ ಇದೆ. ಇದನ್ನ ಎಲ್ಲರೂ ಹೆಚ್ಚು ಇಷ್ಟಪಡ್ತಿದ್ದಾರೆ.

ನಿವೃತ್ತ ಆಫೀಸರ್

ಶಿವಣ್ಣ ಈ ಚಿತ್ರದಲ್ಲಿ ನಿವೃತ್ತ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತವಾದ ಮಾಹಿತಿ ಇನ್ನಷ್ಟೆ ಹೊರಗೆ ಬರಬೇಕಿದೆ.

ಇನ್ನು ಈ ಚಿತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಮೊನ್ನೆ ಚಿತ್ರದ ಟೀಸರ್ ರಿಲೀಸ್ ಆದಾಗಲೇ ಈ ವಿಷಯ ಕೊನೆಯಲ್ಲಿ ರಿವೀಲ್ ಆಗಿದೆ.

shiva rajkumar kannada telugu movies different roles

ಶಿವರಾಜ್ ಕುಮಾರ್ ಹೊಸ ಅವತಾರಗಳು; ಒಂದಕ್ಕಿಂತ ಒಂದು ದಿ ಬೆಸ್ಟ್!
ಪೆದ್ದಿ ಸಿನಿಮಾ

ತೆಲುಗು ಪೆದ್ದಿ ಚಿತ್ರದಲ್ಲಿ ಶಿವಣ್ಣ ಅವರು ಗೌರ್ ನಾಯ್ಡು ಹೆಸರಿನ ಪಾತ್ರ ಮಾಡಿದ್ದಾರೆ. ಈ ಪಾತ್ರವಂತು ತುಂಬಾನೆ ಚೆನ್ನಾಗಿದೆ. ಇದರಲ್ಲಿ ಶಿವಣ್ಣ ಅದ್ಭುತವಾಗಿ ಕಾಣಿಸುತ್ತಿದ್ದಾರೆ.

ಶಿವರಾಜ್ ಕುಮಾರ್ ಅವರು ಇಲ್ಲಿ ಕುಸ್ತಿ ಉಸ್ತಾದ್ ಪಾತ್ರವನ್ನ ಮಾಡಿದ್ದಾರೆ. ಈ ಪಾತ್ರವೂ ಶಿವಣ್ಣನಿಗೆ ಸೂಕ್ತವಾಗಿಯೇ ಇದೆ. ಇದನ್ನ ನೋಡ್ತಾ ಹೋದ್ರೆ ಪಕ್ಕಾ ಕುಸ್ತಿ ಕಲಿಸಿಕೊಡುವ ಉಸ್ತಾದ್ ಅನಿಸಿ ಬಿಡ್ತಾರೆ.

ಖಡಕ್ ಡೈಲಾಗ್

ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಖಡಕ್ ಡೈಲಾಗ್ ಹೊಡೆದಿದ್ದಾರೆ. “ಆಟ ಗೆಲ್ಲೋದಲ್ಲ..ಬದುಕೋದು ಮುಖ್ಯ” ಅನ್ನುವ ಡೈಲಾಗ್ ಅನ್ನೆ ಶಿವಣ್ಣ ಇಲ್ಲಿ ಹೇಳ್ತಾರೆ.

ಇತ್ತೀಚಿಗೆ ರಿಲೀಸ್ ಆದ ಚಿತ್ರದ ಟ್ರೈಲರ್ ಅಲ್ಲಿಯೇ ಈ ಒಂದು ಪಾತ್ರ ಹೇಗಿದೆ ಅನ್ನೋದು ಗೊತ್ತಾಗಿದೆ. ಇನ್ನುಳಿದಂತೆ ಶಿವಣ್ಣ ಈ ವರ್ಷ ಒಂದಷ್ಟು ಸಿನಿಮಾ ಒಪ್ಪಿದ್ದಾರೆ. ಅದರಲ್ಲೂ ಮತ್ತೊಂದಷ್ಟು ಪ್ರಯೋಗ ಮಾಡಿದ್ದಾರೆ ಅನ್ನುವ ಸುದ್ದಿಗಳೂ ಇವೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed