Last Updated:
ಕನ್ನಡದ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗುತ್ತಿದೆ. ಇದು ಯವಾಗ ಅನ್ನುವ ಮಾಹಿತಿನೂ ಅಧಿಕೃತವಾಗಿಯೆ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ.
ರಾಜಕುಮಾರ್ (Rajkumar) ಅವರ ಬಾಂಡ್ ಸಿನಿಮಾಗಳು (Bond Movies) ಆಗ ಒಂದು ಹೊಸ ಸಂಚಲನ ಮೂಡಿಸಿದ್ದವು. ಆಪರೇಷನ್ ಡೈಮಂಡ್ ರಾಕೆಟ್, ಜೇಡರ ಬಲೆ, ಗೋವಾದಲ್ಲಿ ಸಿಐಡಿ 999 ಸಿನಿಮಾಗಳೆಲ್ಲ ರೋಚಕತೆ ಕ್ರಿಯೇಟ್ ಮಾಡಿದ್ದವು. ಆದರೆ, ಇಂತಹ ಸಿನಿಮಾಗಳೆಲ್ಲ ಈಗೆಲ್ಲಿ ಅನ್ನುವ ಪ್ರಶ್ನೆಗಳೂ ಇದ್ದವು. ಆದರೆ, ಡೈರೆಕ್ಟರ್ ಹೇಮಂತ್ ರಾವ್ (Hemanth Rao) ಆ ದಿನಗಳ ಬಾಂಡ್ ಸಿನಿಮಾದಿಂದಲೇ ಸ್ಪೂರ್ತಿ ಪಡೆದುಕೊಂಡಿದ್ದಾರೆ. ಅದರಿಂದಲೇ ಈಗೊಂದು ಸಿನಿಮಾ ಮಾಡಿದ್ದಾರೆ. ಇದಕ್ಕೆ 666 ಆಪರೇಷನ್ ಡ್ರೀಮ್ ಥಿಯೇಟರ್ (666 Operation Dream Theatre) ಅಂತ ಹೆಸರಿಟ್ಟಿದ್ದಾರೆ. ಈ ಚಿತ್ರ ಈಗೀನ ವಿಷಯ ಏನಂದ್ರೆ, ಇಲ್ಲಿವರೆಗೂ ಈ ಚಿತ್ರದ ಒಂದೇ ಒಂದು ಟೀಸರ್ ಬಂದಿಲ್ಲ. ಆದರೆ, ಅದು ಈಗ ಜುಲೈ-3 ರಂದು ರಿಲೀಸ್ ಆಗುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಪೋಸ್ಟರ್ಗಳೆ ಹೆಚ್ಚಾಗಿ ಬಂದಿರೋದು. ಟೀಸರ್ ಟ್ರೈಲರ್ಗಳು ಏನು ರಿಲೀಸ್ ಆಗಿಲ್ಲ. ಆದರೆ, ಈಗ ಈ ಚಿತ್ರದ ಟೀಸರ್ ರಿಲೀಸ್ ಪ್ಲಾನ್ ಆಗಿದೆ.
ಜುಲೈ-3 ರಂದು ಚಿತ್ರದ ಮೊದಲ ಟೀಸರ್ ರಿಲೀಸ್ ಆಗುತ್ತದೆ. ಇದರ ಮಾಹಿತಿ ಅಧಿಕೃತವಾಗಿಯೇ ಹೊರ ಬಂದಿದೆ. ಜುಲೈ-3 ರಂದು ಟೀಸರ್ ಬರುತ್ತದೆ ಅಂತಲೇ ಹೇಳಿದ್ದರು. ಆದರೆ, ಯಾವಾಗ ಅನ್ನುವ ಟೈಮ್ ಏನು ಗೊತ್ತಾಗಿರಲಿಲ್ಲ. ಈಗ ಅದು ರಿವೀಲ್ ಆಗಿದೆ.
ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಮೊದಲ ಟೀಸರ್ ರಿಲೀಸ್ ಫಿಕ್ಸ್ ಆಗಿದೆ. ಜುಲೈ-3 ಮಧ್ಯಾಹ್ನ1 ಗಂಟೆಗೆ ಇದು ರಿಲೀಸ್ ಆಗುತ್ತಿದೆ.

ಇದನ್ನ ಹೇಳುವ ಪೋಸ್ಟರ್ ಕೂಡ ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಇದರಲ್ಲಿ ಶಿವಣ್ಣನ ಕಣ್ಣುಗಳು ಮಾತ್ರ ಇವೆ. ಇಲ್ಲೊಂದು ಸಿರಿಂಜ್ ಕೂಡ ಇದೆ. ಕಪ್ಪು ಬಣ್ಣದ ಥೀಮ್ ಅಲ್ಲಿಯೇ ಇಡೀ ಪೋಸ್ಟರ್ ಇದೆ. ಇದು ಕುತೂಹಲ ಹೆಚ್ಚಿಸುತ್ತದೆ.
ಡೈರೆಕ್ಟರ್ ಹೇಮಂತ್ ರಾವ್ ಇತ್ತೀಚಿಗೆ ಒಂದು ಸಂದರ್ಶನ ಕೊಟ್ಟಿದ್ದಾರೆ. ಇದರಲ್ಲಿ ತಮ್ಮ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಕುರಿತು ಮಾತನಾಡಿದ್ದಾರೆ.
ಜುಲೈ-3 ರಂದು ಚಿತ್ರದ ಟೀಸರ್ ಬರ್ತಿದೆ. ಇದರಲ್ಲಿ ನಿಮಗೆ ಸುಮಾರು ವಿಚಾರ ಗೊತ್ತಾಗುತ್ತವೆ. ಇದು ಯಾವ ಸಿನಿಮಾದಿಂದ ಸ್ಪೂರ್ತಿ ಪಡೆದಿದೆ ಅನ್ನೋದು ತಿಳಿಯುತ್ತದೆ.
ಹಾಗೆ ಇದು ಸ್ಟ್ರೇಟ್ ಸಿನಿಮಾ ಅಲ್ಲ ಅನ್ನೋದು ಗೊತ್ತಾಗುತ್ತದೆ ಅಂತಲೂ ಹೇಳಿದ್ದಾರೆ. ಹಾಗೇನೆ ಈ ಚಿತ್ರದ ನಿರ್ಮಾಣ ಸಂಸ್ಥೆಯ ವೈಶಾಕ್ ಜೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್ಗೇನೆ ಈ ಒಂದು ಸಂದರ್ಶನ ಮಾಡಲಾಗಿದೆ. ಇಲ್ಲಿಯೇ ಇಡೀ ಸಂದರ್ಶನದ ವಿಡಿಯೋ ಇದೆ.
ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಪ್ರಕಾಶ್ ಅನ್ನುವ ಪಾತ್ರ ಮಾಡಿದ್ದಾರೆ. ರಾಜಕುಮಾರ್ ಅವರ ಬಾಂಡ್ ಸಿನಿಮಾಗಳಲ್ಲಿ ಪ್ರಕಾಶ್ ಹೆಸರಿನ ಪಾತ್ರವನ್ನೆ ಅಣ್ಣಾವ್ರು ಮಾಡಿದ್ದಾರೆ.
ಅದೇ ಹೆಸರಿನ ಪಾತ್ರವನ್ನೆ ಶಿವಣ್ಣ ಇಲ್ಲಿ ಮಾಡಿದ್ದಾರೆ. ಡಾಲಿ ಧನಂಜಯ್ ಇಲ್ಲಿ ಶಂಕರ್ ಅನ್ನುವ ಪಾತ್ರ ನಿರ್ವಹಿಸಿದ್ದಾರೆ. ಪ್ರಿಯಾಂಕಾ ಮೋಹನ್ ಸೇರಿದಂತೆ ಇನ್ನು ಹಲವು ಪಾತ್ರಗಳು ಇಲ್ಲಿವೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಅದ್ವೈತ ಗುರುಮೂರ್ತಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.
ಈ ಚಿತ್ರಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಒಂದು ಸೆಟ್ ಹಾಕಿದ್ದರು. ಇಲ್ಲಿಯೇ 100 ದಿನ ಶೂಟಿಂಗ್ ಮಾಡಿದ್ದಾರೆ. ಜೂಲಿ ಅನ್ನುವ ಹಾಡನ್ನು ಕೂಡ ಸೆಟ್ ಅಲ್ಲಿಯೇ ಮಾಡಿದ್ದಾರೆ.
ಇದಕ್ಕಾಗಿಯೇ ಕ್ಲಬ್ ಸೆಟ್ ಅನ್ನೆ ರೆಡಿ ಮಾಡಿದ್ದರು. ಇಮ್ರಾನ್ ಸರ್ದಾರಿಯಾ ಇದಕ್ಕೆ ಕೋರಿಯೋಗ್ರಾಫಿ ಮಾಡಿದ್ದಾರೆ. ಇದರ ಹೊರತಾಗಿ ಹೊಸ ಸುದ್ದಿ ಅಂದರೆ ಈ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗುತ್ತಿದೆ. ಇದರಲ್ಲಿ ಏನೆಲ್ಲ ಇರುತ್ತದೆ ಅನ್ನೋ ಕುತೂಹಲ ಹೆಚ್ಚಾಗಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













