Last Updated:
ಶಿವರಾಜ್ ಕುಮಾರ್ ಅಭಿನಯದ ತಮಿಳು ಚಿತ್ರದ ಟೈಟಲ್ ರಿವೀಲ್ ಆಗಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈ ಸಿನಿಮಾಕ್ಕೆ ಸಾಥ್ ನೀಡಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಶಿವರಾಜ್ ಕುಮಾರ್ (Shiva Rajkumar) ಅಭಿನಯಿಸಿರೋ ತಮಿಳು ಚಿತ್ರದ ಟೈಟಲ್ ರಿವೀಲ್ ಆಗಿದೆ. ಪೋಸ್ಟರ್ ಕೂಡ ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಇದನ್ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ರಿಲೀಸ್ ಮಾಡಿದ್ದಾರೆ. ಈ ಮೂಲಕ ಚಿತ್ರಕ್ಕೆ ತಮ್ಮದೇ ರೀತಿಯಲ್ಲಿ ಸಪೋರ್ಟ್ ಮಾಡಿದ್ದಾರೆ. ತಮಿಳಿನ ಈ ಚಿತ್ರದಲ್ಲಿ ಶಿವಣ್ಣ (Shivanna) ಅಪ್ಪನ ಪಾತ್ರ ಮಾಡಿದ್ದಾರೆ. ಕಾಲಿವುಡ್ನ ಸೆನ್ಷೇಷನ್ ಅಭಿಶನ್ ಜೀವಿಂತ್ (Abishan Jeevinth) ಇಲ್ಲಿ ಮಗನ ರೋಲ್ ಮಾಡಿದ್ದಾರೆ. ಇವರ ಈ ಒಂದು ಕಾಂಬಿನೇಷನ್ನ ಚಿತ್ರದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.














