Shiva Rajkuamar: ಕೊರಳು, ಕಿವಿಯಲ್ಲಿ ರುದ್ರಾಕ್ಷಿ, ಕಪ್ಪು ಬಣ್ಣದ ಡ್ರೆಸ್! ಶಿವನ ಆರಾಧಕರಂತೆ ಎಂಟ್ರಿ, ಶಿವಣ್ಣ ವಿಡಿಯೋ ವೈರಲ್! | | ACTPnews

ಕೊರಳು ಮತ್ತು ಕಿವಿಯಲ್ಲಿ ರುದ್ರಾಕ್ಷಿ, ಕಪ್ಪು ಬಣ್ಣದ ಡ್ರೆಸ್; ವಿಡಿಯೋ ವೈರಲ್!


Last Updated:

ಶಿವರಾಜ್ ಕುಮಾರ್ ಕೊರಳಲ್ಲಿ ರುದರಾಕ್ಷಿ ಇದೆ. ಕಿವಿಯಲ್ಲೂ ರುದ್ರಾಕ್ಷಿ ಕಾಣಿಸುತ್ತದೆ. ಕಪ್ಪು ಬಟ್ಟೆ ತೊಟ್ಟಿದ್ದಾರೆ. ತೇಟ್ ಶಿವನ ಆರಾಧಕರಂತೇನೆ ಕಾಣಿಸುತ್ತಿದ್ದಾರೆ. ಈ ಒಂದು ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕೊರಳು ಮತ್ತು ಕಿವಿಯಲ್ಲಿ ರುದ್ರಾಕ್ಷಿ, ಕಪ್ಪು ಬಣ್ಣದ ಡ್ರೆಸ್; ವಿಡಿಯೋ ವೈರಲ್!
ಕೊರಳು ಮತ್ತು ಕಿವಿಯಲ್ಲಿ ರುದ್ರಾಕ್ಷಿ, ಕಪ್ಪು ಬಣ್ಣದ ಡ್ರೆಸ್; ವಿಡಿಯೋ ವೈರಲ್!

ಶಿವರಾಜ್ ಕುಮಾರ್ (Shiva Rajkumar) ಎಂದು ಶಿವನ ರೀತಿ ಆಫ್ ಸ್ಕ್ರೀನ್ ಅಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಆದರೆ, ಶಿವಣ್ಣನ (Shivanna) ಮಹಾರುದ್ರನ ಆರಾಧಕರ ತರವೇ ಕಾಣಿಸಿಕೊಂಡಿದ್ದಾರೆ. ಹಣೆ ಮೇಲೆ ವಿಭೂತಿ ಇದೆ. ಕೊರಳಲ್ಲಿ ಮತ್ತು ಕಿವಿಯಲ್ಲಿ ರುದ್ರಾಕ್ಷಿಗಳಿವೆ. ಧರಿಸಿರೋ ಬಟ್ಟೆ ಕಪ್ಪು ಬಣ್ಣದಿಂದಲೇ ಕೂಡಿವೆ. ಈ ರೂಪದಲ್ಲಿ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shiva Rajkumar) ಅವರ ಜೊತೆಗೆ ಅಕುಲ್ ಬಾಲಾಜಿ (Akul Balaji) ಅವರ ಮನೆಗೆ ಹೋಗಿದ್ದಾರೆ. ಹೊಸದಾಗಿ ಕಟ್ಟಿದ ಮನೆಗೆ ಕಾಲಿಟ್ಟಿದ್ದಾರೆ. ಮನಸಾರೆ ಇಡೀ ಮನೆಯನ್ನು ನೋಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಶಿವರಾಜ್ ಕುಮಾರ್ ವಿಡಿಯೋ ವೈರಲ್

ಶಿವರಾಜ್ ಕುಮಾರ್ ಅವರ ಈ ಒಂದು ವಿಡಿಯೋ ವೈರಲ್ ಆಗಿದೆ. ಮಹಾರುದ್ರನ ಆರಾಧಕ ಅಘೋರಿಗಳ ತರವೇ ಶಿವಣ್ಣ ಇಲ್ಲಿ ಕಾಣಿಸಿಕೊಂಡಿದ್ದಾರೆ.
shiva rajkumar geetha shiva rajkumar visit akul balaji new house at bengaluru outskirts

ದೇವರ ಮನೆಯನ್ನು ನೋಡಿದ ಶಿವಣ್ಣ

(ಚಿತ್ರ ಕೃಪೆ: ಅಕುಲ್ ಬಾಲಾಜಿ ಇನ್‌ಸ್ಟಾಗ್ರಾಮ್)

ಆದರೆ, ಇದು ಯಾಕೆ ಅನ್ನುವ ಪ್ರಶ್ನೆನೂ ಇದೆ. ಶೂಟಿಂಗ್ ಸೆಟ್‌ನಿಂದ ನೇರವಾಗಿಯೇ ಅಕುಲ್ ಬಾಲಾಜಿ ಅವರ ಮನೆಗೆ ಬಂದಂತೆ ಇದೆ. ಜೊತೆಗೆ ಗೀತಾ ಶಿವರಾಜ್ ಕುಮಾರ್ ಅವರೂ ಇದ್ದಾರೆ. ಅಕುಲ್ ಬಾಲಾಜಿ ಅವರು ಪ್ರೀತಿಯಿಂದ ಕಟ್ಟಿದ ಮನೆಯನ್ನ ಅಷ್ಟೆ ಪ್ರೀತಿಯಿಂದಲೇ ನೊಡಿದ್ದಾರೆ.

ಅಕುಲ್ ಬಾಲಾಜಿ ಭವ್ಯ ಮನೆ ಎಲ್ಲಿರೋದು?

ಅಕುಲ್ ಬಾಲಾಜಿ ಅವರ ಈ ಮನೆ ಬೆಂಗಳೂರಿನ ಹೊರ ವಲಯದಲ್ಲಿಯೇ ಇದೆ. ತಮಗೆ ಇಷ್ಟವಾಗುವ ರೀತಿಯಲ್ಲಿಯೇ ಈ ಒಂದು ಮನೆಯನ್ನ ಕಟ್ಟಿಸಿದ್ದಾರೆ.

ಈ ಮನೆಯನ್ನ ವಿಶೇಷವಾಗಿಯೇ ಕಟ್ಟಿಸಿದ್ದಾರೆ. ಪ್ರಕೃತಿಯ ಮಡಿಲಲ್ಲಿಯೇ ಈ ಮನೆ ಇದೆ. ಅಕ್ಕಪಕ್ಕದಲ್ಲಿ ಮನೆಗಳೂ ಇವೆ. ಅದರ ಹೊರತಾಗಿಯೂ ಅಕುಲ್ ಅವರ ಮನೆ ವಿಶೇಷವಾಗಿಯೇ ಕಾಣಿಸುತ್ತದೆ.

ದೇವರ ಮನೆಯನ್ನು ನೋಡಿದ ಶಿವಣ್ಣ

ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ನಿರೂಪಕ ಅಕುಲ್ ಬಾಲಾಜಿ ಅವರ ಮನೆಯನ್ನ ಸುತ್ತಾಡಿದ್ದಾರೆ. ಪ್ರತಿಯೊಂದನ್ನು ಗಮನಿಸಿದ್ದಾರೆ.

shiva rajkumar geetha shiva rajkumar visit akul balaji new house at bengaluru outskirts

ಕೊರಳು ಮತ್ತು ಕಿವಿಯಲ್ಲಿ ರುದ್ರಾಕ್ಷಿ, ಕಪ್ಪು ಬಣ್ಣದ ಡ್ರೆಸ್

(ಚಿತ್ರ ಕೃಪೆ: ಅಕುಲ್ ಬಾಲಾಜಿ ಇನ್‌ಸ್ಟಾಗ್ರಾಮ್)

ಮನೆಯಲ್ಲಿ ಅಷ್ಟೆ ಸುಂದರವಾಗಿಯೇ ನಿರ್ಮಿಸಿರೋ ದೇವರ ಮನೆಯನ್ನು ನೋಡಿ ಖುಷಿಪಟ್ಟಿದ್ದಾರೆ. ಹಾಗೆ ಶಿವರಾಜ್ ಕುಮಾರ್ ಅವರು ಈ ಒಂದು ಮನೆಯನ್ನ ನೋಡಲು ಬಂದಿರೋ ವಿಡಿಯೋವನ್ನ ಸ್ವತಃ ಅಕುಲ್ ಬಾಲಾಜಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ಭೇಟಿಗಳು..

ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಮನೆಗೆ ಬಂದಿರೋ ವಿಡಿಯೋವನ್ನ ಅಕುಲ್ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಜೊತೆಗೆ ಕನ್ನಡದಲ್ಲಿ ಈ ಲೈನ್ ಬರೆದಿದ್ದಾರೆ.

“ಕೆಲವು ಭೇಟಿಗಳು ಜೀವನಪೂರ್ತಿ ನೆನಪಿನಲ್ಲಿ ಉಳಿಯುತ್ತವೆ” ಹೀಗೆ ಬರೆದ ಅಕುಲ್ ಬಾಲಾಜಿ, ಶಿವಣ್ಣ ಮತ್ತು ಗೀತಕ್ಕ ನಮ್ಮ ಈ ಪುಟ್ಟ ಮನೆಗೆ ಬಂದು ನಮಗೆ ಆಶೀರ್ವದಿಸಿದಕ್ಕೆ ಧನ್ಯವಾದಗಳು ಅಂತಲೂ ಹೇಳಿದ್ದಾರೆ.

ವಿಡಿಯೋಗೆ ಬಂದ ಕಾಂಪ್ಲಿಮೆಂಟ್ಸ್

ಅಕುಲ್ ಬಾಲಾಜಿ ಅವರು ಹಂಚಿಕೊಂಡ ಈ ವಿಡಿಯೋ ನೋಡಿದವರು ಮೆಚ್ಚಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಅದ್ಯಾರೋ ಹೀಗೆ ಬರೆದಿದ್ದಾರೆ, ನಮ್ಮ ಶಿವಣ್ಣ ಪಕ್ಕ ಶಿವನ ತರವೇ ಕಾಣಿಸುತ್ತಿದ್ದಾರೆ ಅಂತಲೇ ಹೇಳಿದ್ದಾರೆ. ಇನ್ನು ಕೆಲವ್ರು ಅಕುಲ್ ಬಾಲಾಜಿ ಅವರಿಗೆ Congratulation ಅಂತಲೂ ಹೇಳಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed