Shiv Sena Crisis: ಉದ್ಧವ್ ಠಾಕ್ರೆ ಬಣದಲ್ಲಿ ಮತ್ತೆ ಅಲ್ಲೋಕಲ್ಲೋಲ! 6 ಬಂಡಾಯ ಸಂಸದರಿಂದ ಶಿಂಧೆಗೆ ಬೆಂಬಲ! ಸ್ಪೀಕರ್‌ಗೆ ಬರೆದ ಪತ್ರದಲ್ಲೇನಿದೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Major Split in Shiv Sena UBT: ಶಿವಸೇನೆ (ಯುಬಿಟಿ) ಟಿಕೆಟ್‌ನಲ್ಲಿ ಗೆದ್ದ 9 ಸಂಸದರ ಪೈಕಿ ಆರು ಸಂಸದರು ಪ್ರತ್ಯೇಕ ಬಣ ಮಾಡಿಕೊಂಡು ಉದ್ಧವ್ ಠಾಕ್ರೆ ವಿರುದ್ಧ ತಿರುಗಿ ಬಿದ್ದಿದ್ದು, ಆದರೆ ಮೂವರು ಸಂಸದರು ಇನ್ನೂ ಉದ್ಧವ್ ಠಾಕ್ರೆ ಅವರೊಂದಿಗೆ ನಿಂತು ಪ್ರಾಮಾಣಿಕತೆ ಮರೆದಿದ್ದಾರೆ.

News18
News18

ಮುಂಬೈ: ಮಹಾರಾಷ್ಟ್ರ (Maharashtra Politics) ರಾಜಕೀಯದಲ್ಲಿ ಉದ್ಧವ್ ಠಾಕ್ರೆ (Uddhav Thackeray) ಮತ್ತೊಮ್ಮೆ ದೊಡ್ಡ ರಾಜಕೀಯ ಹಿನ್ನಡೆ ಅನುಭವಿಸಿದ್ದಾರೆ. ಒಂಬತ್ತು ಶಿವಸೇನೆ (UBT) ಲೋಕಸಭಾ ಸಂಸದರಲ್ಲಿ ಆರು ಮಂದಿ ಠಾಕ್ರೆ ಅವರನ್ನು ತೊರೆದು ತಮ್ಮದೇ ಆದ ಬಣವನ್ನು ರಚಿಸಲು ನಿರ್ಧರಿಸಿದ್ದಾರೆ.

ಆರು ಶಿವಸೇನೆ (UTB) ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ತಮ್ಮನ್ನು ಪ್ರತ್ಯೇಕ ಗುಂಪಾಗಿ ಪರಿಗಣಿಸಬೇಕೆಂದು ವಿನಂತಿಸಿದ್ದಾರೆ. ಸ್ಪೀಕರ್‌ಗೆ ಪತ್ರ ಬರೆದಿರುವ ಶಿವಸೇನೆ (ಯುಬಿಟಿ) ಸಂಸದರಲ್ಲಿ ಸಂಜಯ್ ಜಾಧವ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕಚೌರೆ ಮತ್ತು ಸಂಜಯ್ ದಿನಾ ಪಾಟೀಲ್ ಸೇರಿದ್ದಾರೆ.

ಏಕನಾಥ್ ಶಿಂಧೆ ಜೊತೆ ವಿಲೀನ?

ಮಹಾರಾಷ್ಟ್ರದಲ್ಲಿ ನಂಬಿದವರೇ ಉದ್ಧವ್ ಠಾಕ್ರೆ ಅವರಿಗೆ ಮೋಸ ಮಾಡಿದ್ದು, ಶಿವಸೇನೆಯ ಒಂಬತ್ತು (ಯುಬಿಟಿ) ಸಂಸದರಲ್ಲಿ ಆರು ಮಂದಿ ಬುಧವಾರ ಬೆಳಿಗ್ಗೆ 9:30 ಕ್ಕೆ ಸ್ಪೀಕರ್‌ಗೆ ಪತ್ರ ಸಲ್ಲಿಸಿ, ಏಕನಾಥ್ ಶಿಂಧೆ ಅವರ ಪಕ್ಷದೊಂದಿಗೆ ವಿಲೀನಗೊಳ್ಳುವಂತೆ ಒತ್ತಾಯಿಸಿದ್ದಾರೆ. ಉದ್ಧವ್ ಠಾಕ್ರೆ ಅವರ ಆರು ಸಂಸದರು ತಮ್ಮದೇ ಆದ ಬಣವನ್ನು ರಚಿಸಿ ಏಕನಾಥ್ ಶಿಂಧೆ ಅವರ ಶಿವಸೇನೆಯೊಂದಿಗೆ ವಿಲೀನಗೊಂಡಿದ್ದಾರೆ.

ಉದ್ಧವ್ ಠಾಕ್ರೆ ಅವರ ಪಕ್ಷದ ಆರು ಬಂಡಾಯ ಸಂಸದರು ಬುಧವಾರ ಬೆಳಿಗ್ಗೆ ನಾಂದೇಡ್, ಪುಣೆ ಮತ್ತು ಮುಂಬೈನಿಂದ ಖಾಸಗಿ ವಿಮಾನದ ಮೂಲಕ ದೆಹಲಿಗೆ ಬಂದರು. ಅವರೊಂದಿಗೆ ಏಕನಾಥ್ ಶಿಂಧೆ ಅವರ ಶಿವಸೇನೆಯ ಹಿರಿಯ ನಾಯಕರೊಬ್ಬರು ಇದ್ದರು, ಅವರು ದೆಹಲಿಗೆ ಬಂದು ಸ್ಪೀಕರ್‌ಗೆ ಬೆಂಬಲ ಪತ್ರವನ್ನು ಸಲ್ಲಿಸಿದರು.

ಉದ್ಧವ್ ಜೊತೆ ಕೇವಲ 3 ಸಂಸದರು ಮಾತ್ರ ಬಾಕಿ!

ಯುಟಿಬಿಯಲ್ಲಿ ಬಂಡಾಯ ಏಳಬಹುದೆಂಬ ಊಹಾಪೋಹಗಳ ನಡುವೆ, ದೆಹಲಿಯ ಸಂಜಯ್ ರಾವತ್ ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅರವಿಂದ್ ಸಾವಂತ್, ಮುಖ್ಯ ಸಚೇತಕ ಅನಿಲ್ ದೇಸಾಯಿ ಮತ್ತು ನಾಸಿಕ್ ಸಂಸದ ರಾಜಭಾವು ಹಾಜರಿದ್ದರು. ಹೀಗಾಗಿ, ಶಿವಸೇನೆಯ (ಯುಟಿಬಿ) ಒಂಬತ್ತು ಲೋಕಸಭಾ ಸಂಸದರಲ್ಲಿ ಕೇವಲ ಮೂವರು ಮಾತ್ರ ಹಾಜರಿದ್ದರು, ಆರು ಮಂದಿ ಗೈರು ಹಾಜರಾಗಿದ್ದರು. ಇದು ಉದ್ಧವ್ ಠಾಕ್ರೆ ಅವರ ಪಕ್ಷದೊಳಗಿನ ವಿಭಜನೆಯ ಬೆದರಿಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಈತನ್ಮಧ್ಯೆ, ಶಿವಸೇನೆ (ಯುಬಿಟಿ) ಟಿಕೆಟ್‌ಗಳಲ್ಲಿ ಗೆದ್ದ ಒಂಬತ್ತು ಸಂಸದರಲ್ಲಿ ಆರು ಮಂದಿ ಶಿಂಧೆ ಬಣಕ್ಕೆ ಸೇರ್ಪಡೆಗೊಂಡಿದ್ದಾರೆ, ಆದರೆ ಮೂವರು ಉದ್ಧವ್ ಠಾಕ್ರೆ ಜೊತೆ ಇದ್ದಾರೆ. ಎಲ್ಲಾ ಒಂಬತ್ತು ಸಂಸದರು ತಮ್ಮ ಪಕ್ಷದ ಟಿಕೆಟ್‌ನಲ್ಲಿ ಗೆದ್ದಿದ್ದಾರೆ. ಉದ್ಧವ್ ಠಾಕ್ರೆ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ಹಗಲಿರುಳು ಶ್ರಮಿಸಿದರು. ನಾವು ಅವರಿಗೆ ಸಾಧ್ಯವಾದಷ್ಟು ಸಂಪನ್ಮೂಲಗಳನ್ನು ಒದಗಿಸಿದ್ದೇವೆ ಎಂದು ಸಂಜಯ್ ರಾವತ್ ಅವರು ಹೇಳಿದ್ದಾರೆ.

ಉದ್ಧವ್ ಠಾಕ್ರೆ ಅವರ ಪಕ್ಷದೊಳಗಿನ ವಿಭಜನೆಯ ರಾಜಕೀಯ ಇನ್ನೂ ಮುಗಿದಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports