Last Updated:
ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಹೀರೋ ಆಗಿದ್ದಾರೆ. ತಾವು ಕಂಡ ವಿಷಯವನ್ನೆ ಕತೆ ಮಾಡಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯಿಂದಲೇ ಇದನ್ನ ನಿರ್ಮಿಸಿದ್ದಾರೆ. ಆದರೆ, ಡೈರೆಕ್ಷನ್ ಹೊಣೆಯನ್ನು ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರದ ಡೈರೆಕ್ಟರ್ಗೆ ಕೊಟ್ಟಿದ್ದಾರೆ. ಇನ್ನು ಸುಮಾರು ವಿಷಯ ಇದೆ. ಅದರ ವಿವರ ಮುಂದೆ ಇದೆ ಓದಿ.
ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ (Shine shetty) ಬಸ್ ಡ್ರೈವರ್ ಆಗಿದ್ದಾರೆ. ಆದರೆ, ಇದು ಸಿನಿಮಾ ಒಂದರ ಕತೆಯಲ್ಲಿ ಬರುವ ಬಸ್ನ ಡ್ರೈವರ್ (Bus Driver) ಆಗಿದ್ದಾರೆ. ತಮ್ಮ ಜೀವನದಲ್ಲಿ ಕಂಡ ವಿಷಯಗಳನ್ನ ಸೇರಿಸಿಯೇ ಇವರೇ ಕಥೆ ಮಾಡಿದ್ದಾರೆ. ಆ ಕಥೆಯನ್ನ ಸ್ವತಃ ಶೈನ್ ಶೆಟ್ಟಿ (Shine Shetty) ಪ್ರೊಡ್ಯೂಸ್ ಮಾಡಿದ್ದಾರೆ. ಇದಕ್ಕಾಗಿ ರಂಗಸ್ಥಳ ಸ್ಟುಡಿಯೋ ಅನ್ನುವ ಒಂದು ನಿರ್ಮಾಣ ಸಂಸ್ಥೆ ಕೂಡ ಶುರು ಮಾಡಿದ್ದಾರೆ. ಇಷ್ಟೆಲ್ಲ ಮಾಡಿರೋ ಶೈನ್ ಶೆಟ್ಟಿ ನಿರ್ದೇಶನದ ಹೊಣೆಯನ್ನು ಸುಮಂತ್ ಭಟ್ ಅವರಿಗೆ ಕೊಟ್ಟಿದ್ದಾರೆ. ಸುಮಂತ್ ಭಟ್ (Sumanth Bhat) ಯಾರು ಅನ್ನೋದು ಮುಂದೆ ಇದೆ ಓದಿ…














