Shamita Shetty: ಮದುವೆಯಾಗದ ನಟಿಗೆ ಒಂದಾದ್ರೂ ಮಗು ಮಾಡ್ಕೊಳ್ಳಿ ಎಂದ ಡಾಕ್ಟರ್! | Doctor suggests shamita shetty to concieve and have baby | | ACTPnews

Shamita Shetty: ಮದುವೆಯಾಗದ ನಟಿಗೆ ಒಂದಾದ್ರೂ ಮಗು ಮಾಡ್ಕೊಳ್ಳಿ ಎಂದ ಡಾಕ್ಟರ್! | Doctor suggests shamita shetty to concieve and have baby |


2024 ರಲ್ಲಿ, ಶಮಿತಾ ಶೆಟ್ಟಿ ಅವರು ಎಂಡೊಮೆಟ್ರಿಯೊಸಿಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ತಿಳಿಸಿದ್ದಾರೆ. ಈಗ ನಟಿ ತನ್ನ ರೋಗ ಮತ್ತು ಆ ಸ್ಥಿತಿಯೊಂದಿಗಿನ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಆ ಅವಧಿಯಲ್ಲಿ ತಾನು ಖಿನ್ನತೆಗೆ ಒಳಗಾಗಿದ್ದೆ ಎಂದು ಅವರು ಹೇಳಿದರು.

ಶಮಿತಾ ಇತ್ತೀಚೆಗೆ ಸೋಹಾ ಅಲಿ ಖಾನ್ ಅವರ ಪಾಡ್‌ಕ್ಯಾಸ್ಟ್, ಆಲ್ ಅಬೌಟ್ ಹರ್ ನಲ್ಲಿ ಡಾ. ನೀತಾ ವಾರ್ಟಿ ಅವರೊಂದಿಗೆ ಕಾಣಿಸಿಕೊಂಡರು. ಪಾಡ್‌ಕ್ಯಾಸ್ಟ್ ಸಮಯದಲ್ಲಿ, ಅವರು ಎಂಡೊಮೆಟ್ರಿಯೊಸಿಸ್, ಶಸ್ತ್ರಚಿಕಿತ್ಸೆ, ಜೀವನಶೈಲಿಯ ಬದಲಾವಣೆಗಳು, ಫಲವತ್ತತೆ ಮತ್ತು ಸ್ಥಿತಿಗೆ ಸಂಬಂಧಿಸಿದ ಎಲ್ಲದರ ಬಗ್ಗೆ ಮಾತನಾಡಿದರು.

ಎಂಡೊಮೆಟ್ರಿಯೊಸಿಸ್ ಇದ್ದರೆ ಗರ್ಭಧರಿಸುವಲ್ಲಿ ತೊಂದರೆ ಉಂಟಾಗಬಹುದು ಎಂದು ಅನೇಕ ಮಹಿಳೆಯರು ಚಿಂತೆ ಮಾಡುತ್ತಾರೆ ಎಂದು ಸೋಹಾ ಹೇಳಿದರು. ಶಮಿತಾ ಮತ್ತು ಅವರ ವೈದ್ಯರನ್ನು ಅವರು ಈ ಬಗ್ಗೆ ಕೇಳಿದರು. ಶಮಿತಾ ಮಾತನಾಡಿ “ಇದು ಎಂಡೊಮೆಟ್ರಿಯೊಸಿಸ್. ಮಗುವನ್ನು ಹೆತ್ತುಕೊ, ಅದುವೇ ಚಿಕಿತ್ಸೆ ಎಂದು ವೈದ್ಯರು ನನಗೆ ಹೇಳಿದರು, ಸರಿ ನಾನು ಗಂಡನನ್ನು ಎಲ್ಲಿಂದ?’ ಎಂದು ಕೇಳಿದೆ ಎಂದು ಶಮಿತಾ ಪ್ರಶ್ನಿಸಿದ್ದಾರೆ ಎಂದು ಹೇಳಿದ್ದಾರೆ.

ಮಕ್ಕಳು ಮಾಡ್ಕೊಂಡ್ರೆ ಸರಿ ಹೋಗಲ್ಲ ಸಮಸ್ಯೆ

ಏತನ್ಮಧ್ಯೆ, ಡಾ. ವಾರ್ಟಿ ಅವರು ಮಾತನಾಡಿ ಮದುವೆ ಮತ್ತು ಮಗುವಿನೊಂದಿಗೆ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಬಹುದು ಎಂದು ಜನ ನಂಬುತ್ತಾರೆ ಎಂದು ಹೇಳಿದರು. ಇದಕ್ಕೆ, ಸೋಹಾ ನಕ್ಕು ಇದು “ಹಾರಿಬಲ್ ಸಲಹೆ. ಅದು ಒಳ್ಳೆಯ ಸಲಹೆಯಲ್ಲ ಎಂದು ನಾನು ಹೇಳಲು ಬಯಸುತ್ತೇನೆ” ಎಂದು ಹೇಳಿದರು.

ಶಮಿತಾಗೆ ಎಂಡೊಮೆಟ್ರಿಯೊಸಿಸ್ ಇರುವುದು ಮೊದಲು ಪತ್ತೆಯಾದಾಗ ಫರ್ಟಿಲಿಟಿ ಬಗ್ಗೆ ಕಾಳಜಿ ಇತ್ತೇ ಎಂದು ಸೋಹಾ ಕೇಳಿದರು. ಅದಕ್ಕೆ ಶಮಿತಾ, “ಆ ಸಮಯದಲ್ಲಿ ನನಗೆ ದೊಡ್ಡ ಕೇರ್ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ಅದು ಸಮಸ್ಯೆಯಾಗಬಹುದು ಎಂದು ನಾನು ಭಾವಿಸಿರಲಿಲ್ಲ” ಎಂದು ಉತ್ತರಿಸಿದರು.

2024 ರಲ್ಲಿ, ಶಮಿತಾ ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯರು ತಮ್ಮ ದೇಹದ ಮೇಲೆ ನಿಗಾ ಇಡುವಂತೆ ಸಲಹೆ ನೀಡಿದರು. “ದೇಹದಲ್ಲಿ ನೋವು ಇದ್ದಾಗ, ನಿಮ್ಮ ದೇಹ ಏನು ಹೇಳುತ್ತದೋ ಅದನ್ನು ಕೇಳಿ, ಆಲಿಸಿ ಮತ್ತು ಪಾಸಿಟಿವ್ ಆಗಿರಿ. ಸುಮಾರು 40% ಮಹಿಳೆಯರು ಎಂಡೊಮೆಟ್ರಿಯೊಸಿಸ್‌ನಿಂದ ಬಳಲುತ್ತಿದ್ದಾರೆ. ಹೆಚ್ಚಿನವರಿಗೆ ಈ ಕಾಯಿಲೆಯ ಬಗ್ಗೆ ತಿಳಿದಿಲ್ಲವೇ?” ಎಂದು ಅವರು ಹೇಳಿದರು.

ಎಂಡೊಮೆಟ್ರಿಯೊಸಿಸ್ ಎಂದರೇನು?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಎಂಡೊಮೆಟ್ರಿಯೊಸಿಸ್ ಒಂದು ದೀರ್ಘಕಾಲದ ಸ್ಥಿತಿಯಾಗಿದ್ದು, ಇದರಲ್ಲಿ ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯುತ್ತದೆ. ಇದು ಅಸಹಜ ಅಂಗಾಂಶವಾಗಿರುವುದರಿಂದ, ಇದು ಉರಿಯೂತ, ನೋವಿನ ಮುಟ್ಟು ಮತ್ತು ಫರ್ಟಿಲಿಟಿಗೆ ಸಂಬಂಧಿಸಿದ ತೊಂದರೆಗಳನ್ನು ಉಂಟುಮಾಡುತ್ತದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports