Shailaja Srishailan: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ, ಹಿರಿಯ ನಟಿ ಶೈಲಜಾ ಇನ್ನಿಲ್ಲ | sandalwood senior actress shailaja srishailan passes away | | ACTPnews

ಶೈಲಜಾ


Last Updated:

Shailaja Srishailan: ಕನ್ನಡ ಚಿತ್ರರಂಗ ಜಾನಕಿ ಅಮ್ಮನ ನಿಧನದ ಶಾಕ್​​​ನಲ್ಲಿರುವಾಗಲೇ ಕನ್ನಡದ ಹಿರಿಯ ನಟಿಯೊಬ್ಬರು ನಿಧನರಾಗಿರುವ ಸುದ್ದಿ ಆಘಾತ ತಂದಿದೆ.

ಶೈಲಜಾ
ಶೈಲಜಾ

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿಯಾಗಿ ಮಿಂಚಿದ ಕಲಾವಿದೆ ಶೈಲಜಾ ಶ್ರೀಶೈಲನ್ (Shailaja Srishailan) ಅವರು ವಯೋಸಹಜ ಅನಾರೋಗ್ಯದಿಂದಾಗಿ ಗುರುವಾರ ಮಧ್ಯಾಹ್ನ ಬೆಂಗಳೂರಿನ (Bengaluru) ವೈಯ್ಯಾಲಿಕಾವಲ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಹಿರಿಯ ನಟ ಶ್ರೀಶೈಲನ್ ಅವರ ಧರ್ಮಪತ್ನಿಯಾಗಿದ್ದ ಶೈಲಜಾ ಅವರು ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಕೊನೆಯುಸಿರೆಳೆದಿದ್ದಾರೆ.

ಮೃತರು ಪುತ್ರ ಶ್ರೀಕಾಂತ್ ಹಾಗೂ ಪುತ್ರಿ ಶ್ರೀವಾಣಿ ಸೇರಿದಂತೆ ಅಪಾರ ಬಂಧು-ಮಿತ್ರರು ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ಬಣ್ಣದ ಲೋಕಕ್ಕೆ ಕೊಡುಗೆ, ಕಿರುತೆರೆಯ ಮಿಂಚು

ಸ್ಯಾಂಡಲ್‌ವುಡ್‌ನಲ್ಲಿ ಸುದೀರ್ಘ ಕಾಲ ಸಕ್ರಿಯರಾಗಿದ್ದ ಶೈಲಜಾ ಶ್ರೀಶೈಲನ್ ಅವರು ನೂರಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ವಿಶೇಷವಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾಗಳಲ್ಲಿ ತಾಯಿ ಸೇರಿದಂತೆ ಪ್ರಮುಖ ಪಾತ್ರಗಳಿಗೆ ಇವರು ಜೀವ ತುಂಬಿದ್ದರು.

ಇವರು ನಟಿಸಿದ ‘ಎ’, ‘ಉಪ್ಪಿ 2’ ‘ಅನಂತನ ಅವಾಂತರ, ‘ಪುಟ್ಟ ಹೆಂಡ್ತಿ’ ‘ಗೃಹಪ್ರವೇಶ ಹಾಗೂ ಬಾರೆ ನನ್ನ ಮುದ್ದಿನ ರಾಣಿ’ ಸೇರಿದಂತೆ ಹಲವು ಚಿತ್ರಗಳು ಇಂದಿಗೂ ಪ್ರೇಕ್ಷಕರ ನೆನಪಿನಲ್ಲಿ ಹಸಿರಾಗಿವೆ.

ಕಿರುತೆರೆಯಲ್ಲಿ ಮಿಂಚಿದ್ದನಟಿ

ಕಿರುತೆರೆಯಲ್ಲಿ ತಮ್ಮ ಅಭಿನಯದ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದ ಇವರು, ಟಿ.ಎನ್. ಸೀತಾರಾಮ್ ನಿರ್ದೇಶನದ ಸೂಪರ್ ಹಿಟ್ ಧಾರಾವಾಹಿಗಳಾದ ಮಾಯಾಮೃಗೆ ಹಾಗೂ ಮುಕ್ತ ಸೇರಿದಂತೆ ಪ್ರಮುಖ ಸೀರಿಯಲ್‌ಗಳಲ್ಲಿ ನಟಿಸಿ ಮನೆಮಾತಾಗಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed